ಬುಧ-ಗುರುವಿನಿಂದ ರೂಪುಗೊಳ್ಳುವ ಷಡಷ್ಟಕ ಯೋಗ; ಈ ರಾಶಿಗಳಿಗೆ ಉದ್ಯೋಗದಲ್ಲಿ ಪ್ರಗತಿ, ಅಪಾರ ಧನಲಾಭ!!

Shadashtak Yoga 2025: ಬುಧ-ಗುರು ಷಡಷ್ಟಕ ಯೋಗದ ಜ್ಯೋತಿಷ್ಯ ಮಹತ್ವ ಬುಧ-ಗುರು ಗ್ರಹದಿಂದ ರೂಪಗೊಂಡ ಷಡಷ್ಟಕ ಯೋಗವು ಕೆಲ ರಾಶಿಯವರ ಬುದ್ಧಿಶಕ್ತಿ, ಶಿಕ್ಷಣ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸಂಪತ್ತಿನ ಮೇಲೆ ಪರಿಣಾಮ ಬೀರುತ್ತದೆ. 

Shadashtak Yoga 2025: ಗ್ರಹಗಳು ತಮ್ಮ ಸ್ಥಾನದಲ್ಲಿ ಬದಲಾವಣೆ ಮಾಡುವುದರ ಜೊತೆಗೆ ಶುಭ ಹಾಗೂ ಅಶುಭ ಯೋಗಗಳನ್ನು ಸೃಷ್ಟಿಸುತ್ತವೆ. ವಾಕ್ ಮತ್ತು ವ್ಯವಹಾರದ ಅಧಿಪತಿ ಬುಧನು ಸಂಪತ್ತು ಮತ್ತು ಜ್ಞಾನದ ಅಧಿಪತಿ ಗುರು ಗುರುವಾರ (ಜನವರಿ 16) ಅಂದರೆ ಇಂದು ಸಂಜೆ 6.19ಕ್ಕೆ ಷಡಾಷ್ಟಕ ಯೋಗವನ್ನು ರೂಪಿಸುತ್ತಿದೆ. ಈ ಎರಡು ಗ್ರಹಗಳು ರಾಶಿಯಲ್ಲಿ ಸಾಗಿ 150 ಡಿಗ್ರಿ ದೂರದಲ್ಲಿ ಬಂದಾಗ ಷಡಾಷ್ಟಕ ಯೋಗ ರೂಪುಗೊಳ್ಳುತ್ತದೆ. ಈ ಎರಡು ಗ್ರಹಗಳು ಪರಸ್ಪರ 6ನೇ ಮತ್ತು 8ನೇ ಮನೆಯಲ್ಲಿದ್ದಾಗ ಷಡಾಷ್ಟಕ ಯೋಗ ಸೃಷ್ಟಿಯಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಬುಧ-ಗುರು ಷಡಷ್ಟಕ ಯೋಗದ ಜ್ಯೋತಿಷ್ಯ ಮಹತ್ವ ಬುಧ-ಗುರು ಗ್ರಹದಿಂದ ರೂಪಗೊಂಡ ಷಡಷ್ಟಕ ಯೋಗವು ಕೆಲ ರಾಶಿಯವರ ಬುದ್ಧಿಶಕ್ತಿ, ಶಿಕ್ಷಣ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸಂಪತ್ತಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಜ್ಯೋತಿಷ್ಯದಲ್ಲಿ ಇದಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಜನವರಿ 16ರಂದು ಬುಧ ಮತ್ತು ಗುರು ಗ್ರಹಗಳ ಸಂಯೋಜನೆಯಿಂದ ಕೆಲ ರಾಶಿಯವರ ಶಿಕ್ಷಣ ಮತ್ತು ಹಣದ ವಿಷಯಗಳು ಕಾಲ ಕಳೆದಂತೆ ಸುಧಾರಿಸಲಿವೆ.

2 /5

ಬುಧ-ಗುರು ಷಡಷ್ಟಕ ಯೋಗದ ಪರಿಣಾಮ ಬುಧ ಮತ್ತು ಗುರುವಿನಿಂದ ರೂಪಗೊಂಡ ಷಡಷ್ಟಕ ಯೋಗವು ಪ್ರತಿಯೊಂದು ರಾಶಿಯ ಮೇಲೆ ಪರಿಣಾಮ ಬೀರುತ್ತದೆ. ಇದು 3 ರಾಶಿಗಳ ಮೇಲೆ ಬಹಳ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಈ 3 ರಾಶಿಗಳ ಜನರು ಶಿಕ್ಷಣ, ವೃತ್ತಿ, ಹಣ, ಸಂಬಂಧ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಪ್ರಗತಿ ಸಾಧಿಸಲಿದ್ದಾರೆ. ಜೊತೆಗೆ ಕಠಿಣ ಪರಿಶ್ರಮ, ತಾಳ್ಮೆ ಮತ್ತು ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡುವ ಮೂಲಕ ಈ ಯೋಗದ ಪ್ರಯೋಜನ ಪಡೆಯಬಹುದು. ಹಾಗಾದರೆ ಯಾವ 3 ರಾಶಿಗಳು ಈ ಯೋಗದ ಸಕಾರಾತ್ಮಕ ಪರಿಣಾಮ ಪಡೆಯಲಿದ್ದಾರೆ ಎಂದು ತಿಳಿಯಿರಿ.

3 /5

ಮಿಥುನ ರಾಶಿಯ ಅಧಿಪತಿ ಬುಧವಾಗಿದೆ. ಗುರುವಿನ ಆಶೀರ್ವಾದ ಈ ರಾಶಿಯವರ ಮೇಲೆ ಬೀಳುತ್ತದೆ. ಹೀಗಾಗಿ ಬುಧ-ಗುರು ಗ್ರಹದಿಂದ ರೂಪಗೊಂಡ ಷಡಷ್ಟಕ ಯೋಗ ಮಿಥುನ ರಾಶಿಯವರಿಗೆ ಸಾಕಷ್ಟು ಶುಭ ಫಲ ನೀಡಲಿದೆ. ಈ ರಾಶಿಯ ಜೀವನದಲ್ಲಿ ಷಡಾಷ್ಟಕ ಯೋಗ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ. ಈ ರಾಶಿಯ ಜನರು ಉನ್ನತ ಶಿಕ್ಷಣ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಈ ಯೋಗವು ಬುದ್ಧಿ ಮತ್ತು ತಾರ್ಕಿಕ ಶಕ್ತಿಯನ್ನು ಮತ್ತಷ್ಟು ಚುರುಕುಗೊಳಿಸುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಹೊಸ ಎತ್ತರವನ್ನು ತಲುಪಲು ನಿಮಗೆ ಅವಕಾಶಗಳು ಸಿಗುತ್ತವೆ. ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುವ ಸಾಧ್ಯತೆಗಳಿವೆ. 

4 /5

ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹವಾಗಿದೆ. ಕನ್ಯಾ ರಾಶಿಯ ಜನರಿಗೆ ಗುರುವಿನೊಂದಿಗಿನ ಈ ಸಂಯೋಜನೆಯು ಸಾಕಷ್ಟು ಪ್ರಯೋಜನಕಾರಿಯಾಗಲಿದೆ. ಈ ಯೋಗದ ಪ್ರಭಾವದಿಂದ ಕನ್ಯಾ ರಾಶಿಯಲ್ಲಿ ಜನಿಸಿದ ಜನರು ಗಣಿತ, ವಿಜ್ಞಾನ ಮತ್ತು ಸಂಶೋಧನೆಯಂತಹ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದಾರೆ. ವ್ಯಾಪಾರ ಯೋಜನೆಗಳು ಮತ್ತು ಪಾಲುದಾರಿಕೆಗಳಲ್ಲಿ ಲಾಭ ಇರುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆಗಳಿವೆ. ಹೂಡಿಕೆಗಳಿಂದ ಕನ್ಯಾ ರಾಶಿಯವರು ಲಾಭ ಪಡೆಯುವ ಸಾಧ್ಯತೆಯಿದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ.  

5 /5

ಧನು ರಾಶಿಯ ಅಧಿಪತಿ ಗುರುವಾಗಿದೆ. ಹೀಗಾಗಿ ಗುರು ಮತ್ತು ಬುಧದಿಂದ ರೂಪಗೊಳ್ಳುವ ಷಡಾಷ್ಟಕ ಯೋಗವು ಧನು ರಾಶಿಯ ಜನರಿಗೆ ವಿಶೇಷ ಪ್ರಯೋಜನ ನೀಡುತ್ತದೆ. ಈ ಯೋಗದ ಪ್ರಭಾವದಿಂದ ಈ ರಾಶಿಯ ಜನರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಹೊಂದಲಿದ್ದಾರೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮತ್ತು ವಿದೇಶದಲ್ಲಿ ಅಧ್ಯಯನ ಮಾಡಲು ಅವಕಾಶ ಪಡೆಯಬಹುದು. ತತ್ವಶಾಸ್ತ್ರ, ಬೋಧನೆ ಮತ್ತು ಕಾನೂನು ಕ್ಷೇತ್ರಗಳಲ್ಲಿ ಯಶಸ್ಸಿನ ಸಾಧ್ಯತೆಯಿದೆ. ವೃತ್ತಿಜೀವನದಲ್ಲಿ ಹೊಸ ಯೋಜನೆ ಪ್ರಾರಂಭಿಸುವ ಸಾಧ್ಯತೆಗಳಿದ್ದು, ನೀವು ಬಡ್ತಿ ಅವಕಾಶ ಪಡೆಯಬಹುದು. ಹಣದ ಹರಿವು ಉತ್ತಮವಾಗಿರುತ್ತದೆ. ಹಳೆಯ ಆರ್ಥಿಕ ಸಮಸ್ಯೆಗಳು ಕೊನೆಗೊಳ್ಳಲು ಪ್ರಾರಂಭವಾಗುತ್ತದೆ. ಹೂಡಿಕೆಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯಬಹುದು.