ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಸಗಟು ಮಾರುಕಟ್ಟೆಗಳಲ್ಲಿ ಈ ತಿಂಗಳು ಟೊಮೆಟೊ, ಈರುಳ್ಳಿ ಸೇರಿದಂತೆ ಎಲ್ಲಾ ತರಕಾರಿಗಳ ದರಗಳು ತೀವ್ರವಾಗಿ ನೆಲಕಚ್ಚಿವೆ. ಹಣ್ಣುಗಳು ಮತ್ತು ತರಕಾರಿಗಳಿಗಾಗಿ ಏಷ್ಯಾದ ಅತಿದೊಡ್ಡ ಸಗಟು ಮಾರುಕಟ್ಟೆಯಾಗಿರುವ ದೆಹಲಿಯ ಆಜಾದ್‌ಪುರ ಮಂಡಿಯಲ್ಲಿ ಪ್ರತಿ ಕೆ.ಜಿ.ಟೊಮೇಟೊ ಒಂದು ರೂಪಾಯಿಗಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.
ಬೆಲೆ ಕಡಿಮೆಯಾಗಿದ್ದರೂ ಕೂಡ ಖರೀದಿಸುವವರಿಲ್ಲ
ಮಾರುಕಟ್ಟೆಯಲ್ಲಿ ತರಕಾರಿ ಚಿಲ್ಲರೆ ವ್ಯಾಪಾರಿಗಳ ಸಂಖ್ಯೆ ಕಡಿಮೆಯಾಗಿದೆ, ಇದರಿಂದಾಗಿ ಬೇಡಿಕೆ ಕುಗ್ಗಿದೆ ಎಂದು ಮಂಡಿ ಉದ್ಯಮಿಗಳು ಮತ್ತು ಏಜೆಂಟರು ಹೇಳಿದ್ದಾರೆ. ಈ ಕುರಿತು ಐಎಎನ್‌ಎಸ್‌ಗೆ ಮಾಹಿತಿ ನೀಡಿರುವ ಓಖ್ಲಾ ಮಂಡಿಯ ಲೆಕ್ಕಪರಿಶೋಧಕ ವಿಜಯ್ ಅಹುಜಾ, ಮಾರುಕಟ್ಟೆಯಲ್ಲಿ ಎರಡು ರೂಪಾಯಿಗಳಿಗೂ ಕೂಡ ಯಾರು ಕೇಳುವವರಿಲ್ಲ ಎಂದು ಹೇಳಿದ್ದಾರೆ.
ತರಕಾರಿಗಳ ಬೆಲೆ ಕೂಡ ಕುಸಿಯುತ್ತದೆ
ಟೊಮೆಟೊ ಮಾತ್ರವಲ್ಲ, ಇತರ ಹಸಿರು ತರಕಾರಿಗಳೂ ಕೂಡ ಕ್ಷುಲ್ಲಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.ಸೋರೆಕಾಯಿ ಸಗಟು ದರ ಕೆಜಿಗೆ ಎರಡರಿಂದ ಮೂರು ರೂಪಾಯಿಗೆ ಇಳಿದಿದೆ. ಹಿರೆಕಾಯಿ ಕೂಡ ಆರು ರೂಪಾಯಿ ಪ್ರತಿ ಕೆ.ಜಿ ಅಂತೆ ಮಾರಾಟ ಮಾಡಲಾಗುತ್ತಿದೆ ಎಂದು ಅಹುಜಾ ಹೇಳಿದ್ದಾರೆ. ಇದೆ ರೀತಿ ಇತರ ತರಕಾರಿಗಳ ಬೆಲೆಯೂ ಇಳಿದಿದೆ. ಈ ತಿಂಗಳಿನಲ್ಲಿ ಈರುಳ್ಳಿಯ ಸರಾಸರಿ ಬೆಲೆ ಒಂದರಿಂದ ಒಂದೂವರೆ ರೂಪಾಯಿಗೆ ಇಳಿದಿದ್ದರೆ, ಈರುಳ್ಳಿ ಪ್ರತಿ ಕೆ.ಜಿ.ಗೆ 2.50 ರೂ.ಗೆ ಮಾರಾಟ ಮಾಡಲಾಗುತ್ತಿದೆ. ದೆಹಲಿಯಿಂದ ಲಕ್ಷಾಂತರ ಜನರು ವಲಸೆ ಹೋಗಿರುವುದರಿಂದ ಈ ಬೆಲೆ ಪಾತಾಳಕ್ಕೆ ಕುಸಿದಿದೆ ಎಂದು ಅಹುಜಾ ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಆಜಾದ್ ಪುರ ಮಂದಿಯ ಉದ್ಯಮಿ ಮತ್ತು ಈರುಳ್ಳಿ ಮಾರಾಟಗಾರರ ಅಸೋಸಿಯೇಷನ್ ಅಧ್ಯಕ್ಷ ರಾಜೇಂದರ್ ಶರ್ಮಾ, ಮಾರುಕಟ್ಟೆಯಲ್ಲಿ ಲೆವಲ್ ಕಡಿಮೆಯಾದ ಕಾರಣ ಟೊಮೇಟೊ ಸೇರಿದಂತೆ ಎಲ್ಲಾ ತರಕಾರಿಗಳ ಬೆಲೆ ಕುಸಿದಿದೆ ಎಂದಿದ್ದಾರೆ. ಕೊರೊನಾ ಲಾಕ್ ಡೌನ್ ಕಾರಣ ಎಲ್ಲಾ ರೆಸ್ಟೋರೆಂಟ್ಸ್ ಹಾಗೂ ಧಾಬಾಗಳು ಮುಚ್ಚಲ್ಪಟ್ಟಿವೆ. ಇದರಿಂದ ಅಗತ್ಯ ತರಕಾರಿಗಳಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ. ಇನ್ನೊಂದೆಡೆ ಟೋಕನ್ ವ್ಯವಸ್ಥೆಯಿಂದಾಗಿ ಗ್ರಾಹಕರು ಕಾಯಬೇಕಾದ ಪರಿಸ್ಥಿತಿ ಕೂಡ ಬದೊದಗಿದೆ ಮತ್ತು ಇದರಿಂದ ತರಕಾರಿ ಖರೀದಿಸಲು ಮಾರುಕಟ್ಟೆಗೆ ಯಾರು ಬರಲು ಇಷ್ಟಪಡುತ್ತಿಲ್ಲ ಎಂದೂ ಕೂಡ ಅವರು ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸಾಮಾಜಿಕ ದೂರವನ್ನು ಅನುಸರಿಸಲು, ಟೋಕನ್ ವ್ಯವಸ್ಥೆಯ ಮೂಲಕ ಪ್ರವೇಶ ವ್ಯವಸ್ಥೆಯನ್ನು ಮಾಡಲಾಗಿದೆ ಎಂಬುದು ಗಮನಾರ್ಹ. ಮಂದಿಯ ಮತ್ತೊಬ್ಬ ವ್ಯಾಪಾರಿ ಹೇಳುವ ಪ್ರಕಾರ ದೆಹಲಿಯಿಂದ ಲಕ್ಷಾಂತರ ಕಾರ್ಮಿಕರು ವಲಸೆ ಹೋಗಿದ್ದಾರೆ. ಆದ್ದರಿಂದ ತರಕಾರಿಗಳ ಬಳಕೆ ಕಡಿಮೆಯಾಗಿದೆ, ಆದರೆ ಹಣ್ಣುಗಳ ಬೇಡಿಕೆ ಕಡಿಮೆಯಾಗಿಲ್ಲ, ಆದ್ದರಿಂದ ಹಣ್ಣುಗಳ ಬೆಲೆ ಕಡಿಮೆಯಾಗಿಲ್ಲ ಎಂದು ಹೇಳಿದ್ದಾರೆ.
ಆಜಾದ್ ಪುರ ಮಂಡಿಯ ಅಪಿಎಂಸಿ ದರ ಪಟ್ಟಿಯ ಪ್ರಕಾರ ಮೇ 1ರಂದು ಪ್ರತಿ ಕೆ.ಜಿ ಟೊಮೇಟೊ ಬೆಲೆ ರೂ.6 - ರೂ. 15.25 ಗಳಷ್ಟಾಗಿತ್ತು. ಕಳೆದ ಮೂರು ದಿನಗಳಲ್ಲಿ ಈ ದರ 0.75 ರೂ. ಗಳಿಂದ 5.25 ರೂಗಳಿಗೆ ಬಂದು ತಲುಪಿದೆ. ಇದೆ ರೀತಿ ಮೇ 1 ರಂದು 4.50 ರೂ.;-11.25 ರೂ.ಗಳಷ್ಟಿದ್ದ ಪ್ರತಿ ಕೆ.ಜಿ ಈರುಳ್ಳಿ ಬೆಲೆ ಶನಿವಾರ 2.50 ರೂ.-8.50 ರೂ.ಗಳಿಗೆ ಬಂದು ತಲುಪಿದೆ.
ಆದರೂ ಕೂಡ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ಕಾಲೋನಿಗಳಲ್ಲಿ ತರಕಾರಿ ಮಾರಾಟಗಾರರು ಟೊಮೆಟೊವನ್ನು ಪ್ರತಿ ಕೆ.ಜಿ.ಗೆ 15-20 ರೂ. ನಂತೆ ಮಾರಾಟ ಮಾಡುತ್ತಿದ್ದಾರೆ. ಇತರೆ ತರಕಾರಿಗಳ ಬೆಲೆಗಳು ಸಹ ಸಗಟು ಬೆಲೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಹೇಳಿಕೆ ನೀಡುವ ದೆಹಲಿಯ ಆರ್.ಕೆ ಪುರಂನ ಹಣ್ಣು ಮತ್ತು ತರಕಾರಿಮಾರಾಟಗಾರ ಶಿವಪಾಲ್, ಮಂಡಿಯಿಂದ ಸಗಟು ತರುವ ಕೆಲವು ತರಕಾರಿಗಳು ಅಥವಾ ಹಣ್ಣುಗಳು ಹಾಳಾಗುತ್ತವೆ ಎಂದು ಹೇಳುತ್ತಾರೆ. ಇದಲ್ಲದೆ, ಈ ಸಮಯದಲ್ಲಿ ಬಾಡಿಗೆ ಕೂಡ ಹೆಚ್ಚಾಗಿದೆ. ಹೀಗಾಗಿ ಹಣ್ಣು ಮತ್ತು ತರಕಾರಿಗಳನ್ನು ಸಗಟು ಮಾರುಕಟ್ಟೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಬೇಕಾಗುತ್ತಿದೆ ಎಂದು ಹೇಳಿದ್ದಾರೆ.