ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ವೀಲಿಂಗ್ ಹಾವಳಿ. ನಗರದಾದ್ಯಂತ ಸಂಚಾರ ಪೊಲೀಸರು ವೀಲಿಂಗ್ ಮಾಡುವ ಪುಂಡರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ವೀಲಿಂಗ್‌ನ ಹುಚ್ಚಿಗೆ ಬಿದ್ದಿರುವ ಯುವಕರು ತಮ್ಮ ಪ್ರಾಣಗಳ ಜೊತೆಗೆ ಅಮಾಯಕರ ಜೀವಗಳ ಜೊತೆಗೂ ಆಟವಾಡುತ್ತಿದ್ದಾರೆ. ವೀಲಿಂಗ್ ಮಾಡುತ್ತಾ ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಉಂಟು ಮಾಡುವುದರೊಂದಿಗೆ ಕಾನೂನು ಸುವ್ಯವಸ್ಥೆಗೂ ಧಕ್ಕೆ ತರುತ್ತಿದ್ದಾರೆ.
ಸಂಚಾರ ಪೊಲೀಸರು ವೀಲಿಂಗ್ ಹಾವಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ. ಇದರಿಂದ ಸಾರ್ವಜನಿಕ ಹಿತ ಕಾಪಾಡುವ ಜೊತೆಗೆ ಕಾನೂನಿನ ನಿಯಮವನ್ನೂ ಪಾಲಿಸಿದಂತಾಗುತ್ತದೆ.
ಇದನ್ನೂ ಓದಿ: ಸೋಮನಹಳ್ಳಿಯಿಂದ ದಿಲ್ಲಿಯವರೆಗೆ....ಎಸ್.ಎಂ.ಕೃಷ್ಣಾ ನಡೆದು ಬಂದ ಹಾದಿ..! ಇಲ್ಲಿವೆ ಅಪರೂಪದ ಫೋಟೋಗಳು
ವೀಲಿಂಗ್ ಮಾಡುವ ಸವಾರರು ಅಪ್ರಾಪ್ತರಾಗಿದ್ದಲ್ಲಿ, ಅವರ ಪೋಷಕರ ವಿರುದ್ಧ ಪ್ರಕರಣ ತೆಗೆದುಕೊಳ್ಳಲಾಗುತ್ತದೆ. ಏಕೆಂದರೆ ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ವಾಹನ ನೀಡುವುದು ಪೋಷಕರ ದೊಡ್ಡ ಅಪರಾಧ. ಅಪ್ರಾಪ್ತ ವಯಸ್ಸಿನ ಮಕ್ಕಳ ಪೂರ್ಣ ಜವಬ್ದಾರಿ ತಂದೆ-ತಾಯಿಯದ್ದಾಗಿದೆ. ಹೀಗಾಗಿ ಮಕ್ಕಳು ಮಾಡುವ ತಪ್ಪುಗಳಿಗೆ ಪರೋಕ್ಷವಾಗಿ ಪೋಷಕರೂ ಹೊಣೆಗಾರರಾಗಿರುತ್ತಾರೆ.
ವೀಲಿಂಗ್ ಮಾಡುವವರ ವಿರುದ್ಧ ನಿಗಾವಹಿಸುವ ಸಲುವಾಗಿ ಪ್ರತಿ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ತಂಡಗಳನ್ನು ರಚಿಸಿದೆ. ಹಾಗೆಯೇ ಸಾಮಾಜಿಕ ಜಾಲತಾಣಗಳ ನಿರ್ವಹಣಾ ಘಟಕವೂ ಕಾರ್ಯ ನಿರ್ವಹಿಸುತ್ತಿವೆ. ಸಾರ್ವಜನಿಕರೂ ಕೂಡ ವೀಲಿಂಗ್ ಘಟನೆಗಳನ್ನು ಗಮನಿಸುವುದರ ಜೊತೆಗೆ ವಿಡಿಯೋ ಮಾಡುವ ಮೂಲಕ ʼಎಕ್ಸ್ʼ ಖಾತೆಯ ಮೂಲಕ ಹಂಚಿಕೊಳ್ಳಬಹುದು. ʼಪಬ್ಲಿಕ್ ಐʼ, ಆ್ಯಪ್ ಮೂಲಕ ದೂರು ದಾಖಲಿಸಬಹುದಾಗಿದೆ.
ಈ ರೀತಿ ಕ್ರಮ ತೆಗೆದುಕೊಂಡ ಸಂಚಾರ ಪೊಲೀಸರು ಇನ್ನು ಮುಂದೆ ವೀಲಿಂಗ್ ಮಾಡುವವರ ಪುಂಡರ ಹಾವಳಿಗೆ ಲಗಾಮು ಹಾಕಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: SM Krishna passes away: ನಾಳೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.