ಸ್ವಾಭಿಮಾನಿ ಹುಡುಗಿ ಮೋಕ್ಷಿತಾಗೆ ಮುಖಭಂಗ..! ಬಾಗ್‌ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಗೆದ್ದು ಬೀಗಿದ ಗೌತಮಿ..

Bigg Boss Gauthami Jadav : ಬಿಗ್‌ಬಾಸ್‌ ಪದೇ ಪದೇ ಆಟಗಾರರಿಗೆ ತಪ್ಪು ಮಾಡದಂತೆ ಎಚ್ಚರಿಕೆಯನ್ನು ಕೋಡುತ್ತಲೇ ಬಂದಿದೆ, ಆದರೂ ಕೂಡ ಕೆಲವರು ಅಂತಹದೇ ತಪ್ಪುಗಳನ್ನು ಮಾಡುತ್ತಿದ್ದಾರೆ.. ಬಿಗ್‌ಹೌಸ್‌ನಲ್ಲಿ ಸಿಕ್ಕ ಅವಕಾಶಗಳನ್ನು ಸ್ಪರ್ಧಿಗಳು ಬಿಟ್ಟು ಕೋಡಬಾರದು, ಹಾಗೇಯೆ ಕೇಲವರು ಅಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಸದಾ ಪ್ರಯತ್ನ ಪಡುತ್ತಿರುತ್ತಾರೆ. ಆದ್ರೆ ಇದೀಗ ಮೋಕ್ಷಿತಾ ಪೈ ತನಗೆ ಸಿಕ್ಕಿದ್ದ ಚಾನ್ಸ್‌ ಅನ್ನು ಕೈ ಬಿಟ್ಟು ತಲೆ ತಗ್ಗಿಸುವಂತೆ ಮಾಡಿಕೊಂಡಿದ್ದಾರೆ..

Written by - Krishna N K | Last Updated : Dec 6, 2024, 06:01 PM IST
    • ಬಿಗ್‌ಹೌಸ್‌ನಲ್ಲಿ ಸಿಕ್ಕ ಅವಕಾಶಗಳನ್ನು ಸ್ಪರ್ಧಿಗಳು ಬಿಟ್ಟು ಕೋಡಬಾರದು
    • ಕೇಲವರು ಅಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಸದಾ ಪ್ರಯತ್ನ ಪಡುತ್ತಿರುತ್ತಾರೆ
    • ಮೋಕ್ಷಿತಾ ಸಿಕ್ಕಿದ್ದ ಚಾನ್ಸ್‌ ಅನ್ನು ಕೈ ಬಿಟ್ಟು ತಲೆ ತಗ್ಗಿಸುವಂತೆ ಮಾಡಿಕೊಂಡಿದ್ದಾರೆ..
ಸ್ವಾಭಿಮಾನಿ ಹುಡುಗಿ ಮೋಕ್ಷಿತಾಗೆ ಮುಖಭಂಗ..! ಬಾಗ್‌ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಗೆದ್ದು ಬೀಗಿದ ಗೌತಮಿ.. title=

Bigg Boss Mokshitha Pai : ಬಿಗ್‌ಬಾಸ್‌ ಮನೆಯಲ್ಲಿ ಸ್ವಾಭಿಮಾನದ ಆಟದಲ್ಲಿ ಮೋಕ್ಷಿತಾ ಪೈಗೆ ಮುಖಭಂಗವಾಗಿದೆ. ಗೌತಮಿ ಜೊತೆ ಆಡಲು ಹಿಂದೇಟು ಹಾಕಿದ್ದ ಮೋಕ್ಷಿತಾ, ಈಗ ಅದೇ ಕ್ಯಾಪ್ಟನ್ಸಿ ಪಟ್ಟಕ್ಕೆ ಗೌತಮಿ ಬಂದು ಕೂರಲು ಪರೋಕ್ಷವಾಗಿ ಕಾರಣವಾಗಿದ್ದಾರೆ. ಈ ಬಾರಿ ಎರಡು ತಂಡಗಳನ್ನು ಮಾಡಲಾಗಿತ್ತು. ಈ ಪೈಕಿ ಮೋಕ್ಷಿತಾ ತಂಡ ಆಟದಲ್ಲಿ ಗೆಲುವನ್ನು ಸಾಧಿಸಿದೆ. ಕ್ಯಾಪ್ಟನ್ಸಿ ಟಾಸ್ಕ್‌ ಗೆಲ್ಲಲ್ಲು ಎಲ್ಲಾ ಅವಾಕಶಗಳು ತಮ್ಮ ಪರವಾಗಿಯೇ ಇದ್ದರು ಅದನ್ನು ಲೆಕ್ಕಿಸಿದ ಮೋಕ್ಷಿತಾಗೆ ತಕ್ಕ ಶಾಸ್ತಿ ಆಯಿತು.

ಈ ವಾರ ಧನರಾಜ್‌ ಆಚಾರ್‌ ಅವರ ಮಸ್ತ್‌ ಮಜಾ ಮಾಡಿ (ಎಂಎಂ) ಸುದ್ದಿ ವಾಹಿನಿ ಮತ್ತು ಗೋಲ್ಡ್‌ ಸುರೇಶ್‌ ಅವರ ಸಾರಥ್ಯದ ದಮ್ಮು ಇದೆ ರಿದಂಮ್ಮು ಇದೆ (ಡಿಡಿ)ಸುದ್ದಿ ವಾಹಿನಿ ಎಂಬ ಎರಡು ತಂಡಗಳ ನಡುವೆ ಟಾಸ್ಕ್‌ ಏರ್ಪಟ್ಟಿತು. ಈ ಎರಡು ತಂಡಗಳ ಪೈಕಿ ವೀಕ್ಷಕರಿಂದ ಹೆಚ್ಚು ಮತಗಳನ್ನು ಪಡೆದುಕೊಂಡು ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾಗಿದ್ದು ಧನರಾಜ್‌ ಅವರ ಎಂಎಂ  ಸುದ್ದಿ ವಾಹಿನಿ. ಇದಾದ ಮೇಲೆ ಜೋಡಿಯಾಗಿ ಆಟ ಆಡಬೇಕು ಎಂದು ಬಿಗ್‌ ಬಾಸ್ ಟ್ವಿಸ್ಟ್‌ ನೀಡಿತ್ತು.‌

ಇದನ್ನೂ ಓದಿ:"ನನಗೆ ಗೆಳತಿ ಎಂದರೇ ಅವಳೊಬ್ಬಳೇ.." ಪಬ್ಲಿಕ್‌ನಲ್ಲೇ ಹೃದಯ ಕದ್ದವಳ ಹೆಸರು ರಿವೀಲ್‌ ಮಾಡಿದ ಸಲ್ಮಾನ್ ಖಾನ್!

ಈ ಟಾಸ್ಕ್‌ ನಲ್ಲಿ ರಜತ್‌ ಪರವಾಗಿ ತ್ರಿವಿಕ್ರಮ್‌, ಶಿಶಿರ್‌ ಪರವಾಗಿ ಭವ್ಯ, ಹನುಮಂತು ಪರವಾಗಿ ಮಂಜು ಆಟವಾಡುತ್ತಿದ್ದರು. ಇನ್ನೋದು ಬದಿಯಲ್ಲಿ ಗೌತಮಿ ಜೋಡಿಯಾಗಲು ಮೋಕ್ಷಿತಾ ಒಪ್ಪಲಿಲ್ಲ ಅಲ್ಲದೆ, ಕ್ಯಾಪ್ಟನ್ಸಿಗಾಗಿ ನಾನು ಆಟ ಬಿಡುತ್ತೇನೆ ಹೊರತು ಗೌತಮಿ ಜೋತೆ ಮಾತ್ರ ಆಡಲ್ಲ ಅಂತ ಕಡ್ಡಿ ಮುರಿದಂತೆ ಹೇಳಿದರು.

ಗೌತಮಿ ಅವರಿಂದ ನಾನು ಕ್ಯಾಪ್ಟನ್‌ ಆಗಬೇಕು ಅಂದ್ರೆ ನಾನು ಆಗೋದೇ ಇಲ್ಲ. ನನ್ನ ಆತ್ಮ ಗೌರವದ ಮುಂದೆ ಇನ್ಯಾವುದೂ ಕೂಡ ನನ್ನಗೆ ದೊಡ್ಡದಲ್ಲ ಎಂದು ಮೋಕ್ಷಿತಾ ಆಟವಾಡಲು ಆಸಕ್ತಿ ತೋರಲಿಲ್ಲ. ನನ್ನನ್ನ ಬಿಗ್‌ಬಾಸ್‌ ಮನೆಯಿಂದ ಕಳಿಸಿದರೆ ನಾಳೆಯೇ ಕಳುಹಿಸಲಿ ನಾನು ಮಾತ್ರ ಮಣಿಯಲ್ಲ ಎಂದರು.. 

ಇದನ್ನೂ ಓದಿ:ಪುಷ್ಪ 2 ʼಅಲ್ಲು ಅರ್ಜುನ್ ಮಗಳುʼ ಎಷ್ಟು ಕ್ಯೂಟ್‌ & ‌ಹಾಟ್‌ ಆಗಿದಾಳೆ ಅಲ್ವಾ..! ಫೋಟೋಸ್‌ ವೈರಲ್‌

ಮೋಕ್ಷಿತಾ ಈ ನಿರ್ಧಾರಕ್ಕೆ ಬಿಗ್‌ಬಾಸ್‌ ಸಹ ಕೊಂಚ ಗರಂ ಆದಂತಿದೆ. ದೊಡ್ಡ ದೊಡ್ಡ ನಿರ್ಧಾರಗಳ ಜೊತೆ ಅದಕ್ಕೆ ನೀವು ದೊಡ್ಡ ಬೆಲೆನೇ ಕಟ್ಟಬೇಕಾಗುತ್ತದೆ ಎಂದು ವಾರ್ನ್‌ ಮಾಡಿದೆ. ಮೋಕ್ಷಿತಾ ಅವರು ಅದಕ್ಕೆ ತೆಲೆ ಭಾಗದೇ ಇದದ್ದು ಗೌತಮಿಗೆ ಒಂದು ಉತ್ತಮ ಅವಾಕಶ ದೊರೆಯಿತು. ಇದು ನನ್ನನ್ನು ಸಾಮಥ್ಯವನ್ನು ತೋರಿಸಲು ಸರಿಯಾದ ಸಮಯವೆಂದು ತಿಳಿದು ಛಲದಿಂದ ಕ್ಯಾಪ್ಟನ್ಸಿ ಟಾಸ್ಕ್‌ ಆಡಿ ಕ್ಯಾಪ್ಟನ್‌ ಆಗಿ ಆಯ್ಕೆಯಾಗಿದ್ದಾರೆ. 

ಒಟ್ಟಾರೆಯಾಗಿ, ಗೌತಮಿ ಗೆಲುವು ಮೋಕ್ಷಿತಾಗೆ ಮುಖಕ್ಕೆ ಹೋಡೆದಂತಾಗಿದೆ. ಇಂದು ರಾತ್ರಿ ಗೌತಮಿ ಅವರು ಕ್ಯಾಪ್ಟನ್‌ ಆಗಿರುವ ಸಂಚಿಕೆ ಪ್ರಸಾರವಾಗಲಿದೆ. ಗೌತಮಿ ಅವರು ಕ್ಯಾಪ್ಟನ್‌ ಆಗಿ ನಾಯಕನ ರೂಮ್‌ಗೆ ಎಂಟ್ರಿ ಕೊಟ್ಟಿರುವ ದೃಶ್ಯವನ್ನು ಇವತ್ತಿನ ಪ್ರೋಮೊದಲ್ಲಿ ತೋರಿಸಲಾಗಿದೆ.. ಮುಂದೆನಾಗುತ್ತೆ.. ಜಸ್ಟ್‌ ವಾಚ್‌...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News