ನವದೆಹಲಿ: ಸಾಂಕ್ರಾಮಿಕ ರೋಗ ಕೊರೊನಾವೈರಸ್ ಕೋವಿಡ್-19 ನಿಗ್ರಹಿಸಲು ಭಾರತದಲ್ಲಿ ಆರೋಗ್ಯ ಸೇತು (Aarogya Setu) ಡೌನ್ಲೋಡ್ ಮಾಡಿಕೊಳ್ಳುವಂತೆ ಸರ್ಕಾರ ಎಲ್ಲರಿಗೂ ಮನವಿ ಮಾಡುತ್ತಿದೆ. ಆದರೆ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ, ಇಲ್ಲದಿದ್ದರೆ ನಿಮ್ಮ ಫೋನ್ಗೆ ಹಾನಿಯಾಗಬಹುದು ಅಥವಾ ನಿಮ್ಮ ಬ್ಯಾಂಕ್ ಖಾತೆಯಿಂದ ಹಣವೂ ಕಣ್ಮರೆಯಾಗಬಹುದು. ಇದಕ್ಕೆ ಕಾರಣ ಆರೋಗ್ಯ ಸೇತು ನಕಲಿ ಆ್ಯಪ್ ಲಿಂಕ್ಗಳ ಮೂಲಕ ಜನರನ್ನು ಮೋಸಗೊಳಿಸಲು ಪ್ರಯತ್ನಿಸಬಹುದು.
ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಮೊದಲು ಇದನ್ನು ನೆನಪಿನಲ್ಲಿಡಿ:
ಗೃಹ ಸಚಿವಾಲಯ ಪ್ರಾರಂಭಿಸಿದ ಟ್ವಿಟರ್ ಹ್ಯಾಂಡಲ್ @CyberDost ಮೂಲಕ ಆರೋಗ್ಯ ಸೇತು ಅಪ್ಲಿಕೇಶನ್ ಅನ್ನು ಸಾಮಾಜಿಕ ಮಾಧ್ಯಮ ಅಥವಾ ಇತರ ಯಾವುದೇ ಮೂಲ ಕಳುಹಿಸಿದ ಫೈಲ್ ಮೂಲಕ ಸ್ಥಾಪಿಸಲು ಪ್ರಯತ್ನಿಸದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಅಂತಹ ಲಿಂಕ್ ಯಾವುದೇ ವೈರಸ್ ಅಥವಾ ಮಾಲ್ವೇರ್ ಅನ್ನು ಹೊಂದಿರಬಹುದು. ಇದು ನಿಮ್ಮ ಫೋನ್ಗೆ ಹಾನಿ ಮಾಡುತ್ತದೆ. ಅಲ್ಲದೆ ಈ ಲಿಂಕ್ ಮೂಲಕ ನೀವು ಮೋಸ ಸಹ ಹೋಗಬಹುದು. ನೀವು ಈ ರೀತಿಯ ಲಿಂಕ್ ಅನ್ನು ಪಡೆದರೆ ಅದರ ಬಗ್ಗೆ ತಕ್ಷಣವೇ www.cybercrime.gov.in ನಲ್ಲಿ ದೂರು ನೀಡಿ.
ಅಪ್ಲಿಕೇಶನ್ ಅನ್ನು ಇಲ್ಲಿಂದ ಡೌನ್ಲೋಡ್ ಮಾಡಿ:
ಆರೋಗ್ಯ ಸೇತು ಆ್ಯಪ್ ಭಾರತ ಸರ್ಕಾರದ ಅಧಿಕೃತ ಅಪ್ಲಿಕೇಶನ್ ಆಗಿದೆ. ಇದನ್ನು ಗೂಗಲ್ ಪ್ಲೇ ಸ್ಟೋರ್ನಿಂದ ಅಥವಾ ಆಪಲ್ ಆಪ್ ಸ್ಟೋರ್ನಿಂದ ಡೌನ್ಲೋಡ್ ಮಾಡಬಹುದು. ಇದಲ್ಲದೆ ಭಾರತ ಸರ್ಕಾರ ಬಿಡುಗಡೆ ಮಾಡಿದ www.mygov.in ವೆಬ್ಸೈಟ್ ಮೂಲಕ ಈ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು.
ನಿಮ್ಮ ಮೊಬೈಲ್ ಕಳುವಾದರೆ ತಕ್ಷಣವೇ ಮಾಡಿ ಈ ಕೆಲಸ:
ನಿಮ್ಮ ಮೊಬೈಲ್ ಕಳೆದುಹೋದರೆ ಅಥವಾ ಕದ್ದಿದ್ದರೆ ಮೊದಲು ನೀವು ಆ ಮೊಬೈಲ್ನಲ್ಲಿ ಕಾನ್ಫಿಗರ್ ಮಾಡಲಾಗಿರುವ ಎಲ್ಲಾ ಖಾತೆಗಳ ಪಾಸ್ವರ್ಡ್ ಅನ್ನು ತಕ್ಷಣ ಬದಲಾಯಿಸಿ. ನೀವು ಇದನ್ನು ಮಾಡದಿದ್ದರೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಠೇವಣಿ ಇರಿಸಿದ ಹಣವನ್ನು ಯಾರಾದರೂ ಪ್ರವೇಶಿಸಬಹುದು. ಇದರಿಂದಾಗಿ ನಿಮ್ಮ ಖಾತೆಯಲ್ಲಿರುವ ಹಣ ಖಾಲಿಯಾಗಬಹುದು ಎಂದು ಸಾಮಾನ್ಯ ಜನರ ಜಾಗೃತಿಗಾಗಿ ಗೃಹ ಸಚಿವಾಲಯ (Home Ministry) ವು ಪ್ರಾರಂಭಿಸಿರುವ ಟ್ವಿಟರ್ ಹ್ಯಾಂಡಲ್ @CyberDost ನಲ್ಲಿ ತಿಳಿಸಲಾಗಿದೆ.