ವಾಟ್ಸಾಪ್ನಲ್ಲಿ ವೀಡಿಯೊ ಕರೆ ಮಾಡುವ ದೊಡ್ಡ ಅಪ್ಡೇಟ್ ಸಿಕ್ಕ ಬಳಿಕ ಇದೀಗ ನಿಮ್ಮ ಸ್ಟೇಟಸ್ ವೈಶಿಷ್ಟ್ಯದಲ್ಲೂ ದೊಡ್ಡ ಬದಲಾವಣೆಯಾಗಲಿದೆ. ತ್ವರಿತ ಸಂದೇಶ ಅಪ್ಲಿಕೇಶನ್ ವಾಟ್ಸಾಪ್ ಶೀಘ್ರದಲ್ಲೇ ಹೊಸ ವೈಶಿಷ್ಟ್ಯವನ್ನು ಸೇರಿಸಲು ಮುಂದಾಗಿದೆ.
ವಾಟ್ಸಾಪ್ನಲ್ಲಿ ವೀಡಿಯೊ ಕರೆ ಮಾಡುವ ದೊಡ್ಡ ಅಪ್ಡೇಟ್ ಸಿಕ್ಕ ಬಳಿಕ ಇದೀಗ ನಿಮ್ಮ ಸ್ಟೇಟಸ್ ವೈಶಿಷ್ಟ್ಯದಲ್ಲೂ ದೊಡ್ಡ ಬದಲಾವಣೆಯಾಗಲಿದೆ. ತ್ವರಿತ ಸಂದೇಶ ಅಪ್ಲಿಕೇಶನ್ ವಾಟ್ಸಾಪ್ ಶೀಘ್ರದಲ್ಲೇ ಹೊಸ ವೈಶಿಷ್ಟ್ಯವನ್ನು ಸೇರಿಸಲು ಮುಂದಾಗಿದೆ.ಈ ಹೊಸ ಅಪ್ಡೇಟ್ ನಲ್ಲಿ ನಿಮಗೆ 'hide' ಹೆಸರಿನ ಒಪ್ಶನ್ ಸಿಗಲಿದೆ, ಈ ವೈಶಿಷ್ಟ್ಯವನ್ನು ಬಳಸಿ ಬಳಕೆದಾರರು ತಮ್ಮ ಸ್ಟೇಟಸ್ ಅನ್ನು hide ಮಾಡಬಹುದಾಗಿದೆ.
You can easily exclude contacts from receiving your status updates using the "Hide" side button in the views list.#WhatsAppTips pic.twitter.com/Ga0z5JR0gW
— WABetaInfo (@WABetaInfo) April 27, 2020
ಈ ಕುರಿತು ಟ್ವೀಟ್ ಮಾಡುವ ಮೂಲಕ ಸಂಸ್ಥೆ ಮಾಹಿತಿ ನೀಡಿದೆ
ಇದಕ್ಕೆ ಸಂಬಂಧಿಸಿದಂತೆ WABetainfo ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಈ ವೈಶಿಷ್ಟ್ಯವನ್ನು ಬಳಸಿ ನೀವು ನಿಮ್ಮ ಕಾಂಟಾಕ್ಟ್ ಲಿಸ್ಟ್ ನಲ್ಲಿಯ ಯಾವುದೇ ಓರ್ವ ವ್ಯಕ್ತಿ ಅಥವಾ ಹಲವು ವ್ಯಕ್ತಿಗಳನ್ನು ನಿಮ್ಮ ಸ್ಟೇಟಸ್ ಅನ್ನು ನೋಡದಂತೆ ತಡೆಯಬಹುದಾಗಿದೆ. ಒಂದು ವೇಳೆ ನೀವು ನಿಮ್ಮ ಸ್ಟೇಟಸ್ ಅನ್ನು ಯಾರಿಂದಾದರೂ ಮುಚ್ಚಿ ಇಡಲು ಬಯಸುತ್ತಿದ್ದರೆ ಇದನ್ನು ಬಳಸಬಹುದು. ಇದಕ್ಕಾಗಿ ನೀವು ನಿಮ್ಮ ಸ್ಟೇಟಸ್ ಪ್ರೈವೆಸಿಗೆ ಭೇಟಿ ನೀಡಿ ಸೆಟ್ಟಿಂಗ್ಸ್ ನಲ್ಲಿ ಬದಲಾವಣೆ ಮಾಡಬೇಕಾಗಲಿದೆ.
ಸದ್ಯ ಯಾರೊಬ್ಬರಿಂದ ನೀವು ನಿಮ್ಮ ಸ್ಟೇಟಸ್ ಅನ್ನು hide ಮಾಡಲು ಬಯಸುತ್ತಿದ್ದರೆ, ಸ್ಟೇಟಸ್ ಸೆಟ್ ಮಾಡುವ ಮೊದಲು ಸೆಟ್ಟಿಂಗ್ಸ್ ನಲ್ಲಿ ಹೋಗಿ ಬದಲಾವಣೆ ಮಾಡಬೇಕು. ಅಂದರೆ, ಯಾವ ವ್ಯಕ್ತಿ ಅಥವಾ ವ್ಯಕ್ತಿಗಳಿಂದ ನೀವು ನಿಮ್ಮ ಸ್ಟೇಟಸ್ ಅನ್ನು ಮುಚ್ಚಿಡಲು ಬಯಸುತ್ತಿರುವಿರೂ ಆ ವ್ಯಕ್ತಿಗಳನ್ನು ನೀವು ಮೊದಲೇ ಸೆಲೆಕ್ಟ್ ಮಾಡಬೇಕು. ಅಷ್ಟೇ ಅಲ್ಲ ಇದಕ್ಕೆ ವಿಪರೀತ ಅಂದರೆ, ಯಾವ ವ್ಯಕ್ತಿಗಳಿಗೆ ನೀವು ನಿಮ್ಮ ಸ್ಟೇಟಸ್ ತೋರಿಸಲು ಬಯಸುತ್ತಿರುವಿರೋ ಅವರನ್ನು ಸೆಲೆಕ್ಟ್ ಮಾಡಬಹುದಾಗಿದೆ.