iPhone 14 ಬೆಲೆಯಲ್ಲಿ ದಿಢೀರ್ ಕುಸಿತ !ದುಬಾರಿ ಫೋನ್ ಅನ್ನು ಅಗ್ಗದ ಬೆಲೆಗೆ ಖರೀದಿಸುವ ಅವಕಾಶ

iPhone 14 Price Cut:ಹಳೆಯ ಫೋನ್ ಅನ್ನು ಹೊಸ ಫೋನ್‌ಗೆ ವಿನಿಮಯ ಮಾಡಿಕೊಂಡರೆ, 27,000 ವರೆಗೆ ಹೆಚ್ಚುವರಿ ರಿಯಾಯಿತಿ ಸಿಗುತ್ತದೆ. ಇದರಿಂದ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ.

Written by - Ranjitha R K | Last Updated : Nov 28, 2024, 05:19 PM IST
  • ಐಫೋನ್ 14 ಅನ್ನು ಅಗ್ಗದ ಬೆಲೆಗೆ ಖರೀದಿಸಲು ಉತ್ತಮ ಅವಕಾಶ ಇದು.
  • ಫ್ಲಿಪ್‌ಕಾರ್ಟ್‌ನಲ್ಲಿ iPhone 14 (128GB) ಖರೀದಿ ಮೇಲೆ ಭಾರೀ ರಿಯಾಯಿತಿ
  • ಕಡಿಮೆ ಬೆಲೆಗೆ ಈ ಫೋನ್ ಅನ್ನು ಖರೀದಿಸಬಹುದು.
iPhone 14 ಬೆಲೆಯಲ್ಲಿ ದಿಢೀರ್ ಕುಸಿತ !ದುಬಾರಿ ಫೋನ್ ಅನ್ನು ಅಗ್ಗದ ಬೆಲೆಗೆ ಖರೀದಿಸುವ ಅವಕಾಶ  title=

iPhone 14 Price Cut : ಐಫೋನ್ 14 ಅನ್ನು ಅಗ್ಗದ ಬೆಲೆಗೆ ಖರೀದಿಸಲು ಉತ್ತಮ ಅವಕಾಶ ಇದು. ಫ್ಲಿಪ್‌ಕಾರ್ಟ್‌ನಲ್ಲಿ iPhone 14 (128GB) ಖರೀದಿ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಈ ಹಿಂದೆ ಇದರ ಬೆಲೆ 69,600 ರೂ.ಗಳಷ್ಟಿತ್ತು. ಆದರೆ ಈಗ   ಐಫೋನ್ 14 ಬೆಲೆ ಕೇವಲ 50,990 ರೂ.ಇದರ ಹೊರತಾಗಿ, ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಅನ್ನು ಖರೀದಿಸಬಹುದು. 

iPhone 14 ಬ್ಯಾಂಕ್ ಆಫರ್ ಮತ್ತು ಎಕ್ಸ್ಚೇಂಜ್ ಡೀಲ್ : 
ನಿರ್ದಿಷ್ಟ ಬ್ಯಾಂಕ್ ಕಾರ್ಡ್‌ಗಳೊಂದಿಗೆ ಪಾವತಿಸುವ ಮೂಲಕ 2,000 ರೂ. ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಹಳೆಯ ಫೋನ್ ಅನ್ನು ಹೊಸ ಫೋನ್‌ಗೆ ವಿನಿಮಯ ಮಾಡಿಕೊಂಡರೆ, 27,000 ವರೆಗೆ ಹೆಚ್ಚುವರಿ ರಿಯಾಯಿತಿ ಸಿಗುತ್ತದೆ. ಇದರಿಂದ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ.

ಇದನ್ನೂ ಓದಿ : ನಿಮ್ಮ ಸ್ಮಾರ್ಟ್‌ಫೋನ್‌ನಲ್ಲೂ ಈ 15 ಅಪ್ಲಿಕೇಶನ್‌ಗಳಿವೆಯೇ ಕೂಡಲೇ ಡಿಲೀಟ್ ಮಾಡಿ, ಇಲ್ಲ ಅಕೌಂಟ್ ಖಾಲಿಯಾದೀತೂ ಎಚ್ಚರ!

iPhone 14: ವಿಶೇಷಣಗಳು :
ಈ ಫೋನ್ ಗಾಜಿನಿಂದ ಮಾಡಲ್ಪಟ್ಟಿದ್ದು, ಸುತ್ತಲೂ ಅಲ್ಯೂಮಿನಿಯಂ ಫ್ರೇಮ್ ಇದೆ. 6.1 ಇಂಚಿನ ಸ್ಕ್ರೀನ್ ಹೊಂದಿದ್ದು, ತುಂಬಾ ಪ್ರಕಾಶಮಾನವಾಗಿದೆ. ಈ ಫೋನ್ iOS 16 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 6GB RAM ನೊಂದಿಗೆ ಬರುತ್ತಿದ್ದು ಇದನ್ನು 512GB ವರೆಗೆ ಸ್ಟೋರೇಜ್ ಅನ್ನು ಹೊಂದಿದೆ.

ಇದು ಹಿಂಭಾಗದಲ್ಲಿ ಎರಡು 12MP ಕ್ಯಾಮೆರಾಗಳನ್ನು ಹೊಂದಿದೆ. ಇದರೊಂದಿಗೆ ಉತ್ತಮ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಬಹುದು. ಮುಂಭಾಗದಲ್ಲಿ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 12MP ಕ್ಯಾಮೆರಾ ನೀಡಲಾಗಿದೆ. ಇದು 3,229mAh ಬ್ಯಾಟರಿಯನ್ನು ಹೊಂದಿದ್ದು,  15W ವೇಗದ ಚಾರ್ಜರ್‌ನೊಂದಿಗೆ ಬರುತ್ತದೆ. ಇದರಿಂದ ನೀವು ಫೋನ್ ಅನ್ನು ತ್ವರಿತವಾಗಿ ಚಾರ್ಜ್ ಮಾಡಬಹುದು.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

iPhone 14 EMI ಆಯ್ಕೆಗಳು: 
ನೀವು ಒಂದೇ ಬಾರಿಗೆ ಅಷ್ಟು ಹಣವನ್ನು ಹೊಂದಿಲ್ಲದಿದ್ದರೆ, ನೀವು ಫ್ಲಿಪ್‌ಕಾರ್ಟ್‌ನಲ್ಲಿ EMI ತೆಗೆದುಕೊಳ್ಳಬಹುದು. ಈ ರೀತಿಯಾಗಿ ನೀವು ಪ್ರತಿ ತಿಂಗಳು ಕೇವಲ 2,387 ರೂಪಾಯಿಗಳನ್ನು ಪಾವತಿಸಿ iPhone 14 ಅನ್ನು ಖರೀದಿಸಬಹುದು. ಐಫೋನ್ 14 ಅನ್ನು ಖರೀದಿಸಲು ಇದು ಉತ್ತಮ ಅವಕಾಶವಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News