ಕೇಸರಿ ಬ್ರಿಗೇಡ್‌ ಸೋಲಿಗೆ ಕಾರಣಗಳೇನು..? ಅಷ್ಟಕ್ಕೂ ಬಿಜೆಪಿ ಎಡವಿದ್ದೆಲ್ಲಿ ಗೊತ್ತೇ ?

ಇನ್ನು ಎಲೆಕ್ಷನ್‌ ರಿಸಲ್ಟ್‌ ಬಗ್ಗೆ ಮಾತನಾಡಿದ ವಿಜಯಪುರ ಶಾಸಕ ಯತ್ನಾಳ್‌ ಈ ಸೋಲು ಪೂಜ್ಯ ತಂದೆಯವರು.ಪೂಜ್ಯರ ಹಿರಿಯ ಮಗನಿಂದ ಅಗಿದೆ ಅಂತ ಬೆಂಕಿ ಉಗುಳಿದ್ದಾರೆ.

Written by - CHAITAN MAVUR | Edited by - Manjunath N | Last Updated : Nov 23, 2024, 10:23 PM IST
  • ಬಿಜೆಪಿಗೆ ಹೀನಾಯ ಸೋಲು ನಿರೀಕ್ಷೆ ಮಾಡಿರಲಿಲ್ಲ.
  • ಇನ್ನಾದ್ರೂ ಹೈಕಮಾಂಡ್ ಪೂಜ್ಯ ತಂದೆ, ಪುತ್ರನ ವ್ಯಾಮೋಹ ಬಿಡಲಿ
ಕೇಸರಿ ಬ್ರಿಗೇಡ್‌ ಸೋಲಿಗೆ ಕಾರಣಗಳೇನು..? ಅಷ್ಟಕ್ಕೂ ಬಿಜೆಪಿ ಎಡವಿದ್ದೆಲ್ಲಿ ಗೊತ್ತೇ ? title=

ಕರುನಾಡಿನಲ್ಲಿ ಕಮಲ ಪಡೆ ಅಕ್ಷರಶ ಭಾರಿ ಮುಖಭಂಗ ಅನಭವಿಸುವಂತಾಗಿದೆ.ರಾಜ್ಯ ರಾಜಕೀಯದಲ್ಲಿ ಬಿಜೆಪಿ ಇಡುತ್ತಿರುವ ತಪ್ಪು ಹೆಜ್ಜೆಗಳೇ ಇಂದಿನ ಸೋಲಿಗೆ ಕಾರಣ ಅನ್ನಬಹುದು.ಇಲ್ಲಿ ಕೇಸರಿ ಬ್ರಿಗೇಡ್‌ ಎಷ್ಟೇ ರಣತಂತ್ರ ಹೆಣೆದರೂ ಒಂದೇ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸುವಲ್ಲಿ ಆಗಲಿಲ್ಲ.ಅಷ್ಟಕ್ಕೂ ಇಲ್ಲಿ ಬಿಜೆಪಿಗೆ ಮೂರು ಸ್ಥಾನ ಅಲ್ಲ.ಒಂದು ಜೆಡಿಎಸ್‌ ಮತ್ತು ಒಂದು ಕಾಂಗ್ರೆಸ್‌ನ ಕ್ಷೇತ್ರಗಳಾಗಿದ್ದವು.ಹಾಗಾಗಿ ಇದ್ದ ಒಂದು ಕ್ಷೇತ್ರದಲ್ಲೂ ಕೂಡ ಬಿಜೆಪಿ ಗೆಲ್ಲೋಕೆ ಆಗದಷ್ಟು ಹೀನಾಯ ಸ್ಥಿತಿಗೆ ಹೋಗಿದೆ.ಹಾಗಿದ್ರೆ ವಿಜಯೇಂದ್ರ ನಾಯಕತ್ವವನ್ನೂ ಸ್ವತ ಬಿಜೆಪಿ ನಾಯಕರೇ ಹೇಳಿದಂತೆ ಜನರೂ ಕೂಡ ಒಪ್ಪಿಲ್ಲವೇನೋ ಅನುಮಾನ ಕಾಡತೊಡಗಿದೆ.

ಇನ್ನು ಎಲೆಕ್ಷನ್‌ ರಿಸಲ್ಟ್‌ ಬಗ್ಗೆ ಮಾತನಾಡಿದ ವಿಜಯಪುರ ಶಾಸಕ ಯತ್ನಾಳ್‌ ಈ ಸೋಲು ಪೂಜ್ಯ ತಂದೆಯವರು.ಪೂಜ್ಯರ ಹಿರಿಯ ಮಗನಿಂದ ಅಗಿದೆ ಅಂತ ಬೆಂಕಿ ಉಗುಳಿದ್ದಾರೆ.ಬಿಜೆಪಿಗೆ ಹೀನಾಯ ಸೋಲು ನಿರೀಕ್ಷೆ ಮಾಡಿರಲಿಲ್ಲ.ಇನ್ನಾದ್ರೂ ಹೈಕಮಾಂಡ್ ಪೂಜ್ಯ ತಂದೆ, ಪುತ್ರನ ವ್ಯಾಮೋಹ ಬಿಡಲಿ ಅಂತ ಚಿಕ್ಕೋಡಿಯಲ್ಲಿ ಶಾಸಕ ಬಸನಗೌಡ ಯತ್ನಾಳ್ ಹೇಳಿಕೆ ನೀಡಿದ್ದಾರೆ.ಬಿಜೆಪಿ ಹೀನಾಯ ಸೋಲಿಗೆ ರಾಜ್ಯಾಧ್ಯಕ್ಷರೇ ಕಾರಣ  ಅಂತ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.ಅಷ್ಟಕ್ಕೂ ಜನ ವಿಜಯೇಂದ್ರ ನಾಯಕತ್ವ ಒಪ್ಪಿಕೊಂಡಿಲ್ಲ ಅಂತಾನೇ ಯತ್ನಾಳ್‌ ಮೊದಲಿಂದಲೂ ಸಿಡಿಗುಂಡು ಸಿಡಿಸ್ತಾನೆ ಇದ್ದಾರೆ.ಹಾಗಿದ್ರೆ ಬಿಜೆಪಿಯಲ್ಲಿ ಪ್ರಭಾವಿ ನಾಯಕನ ಕೊರತೆ ಇದೆ ಅನ್ನೋದಾದರೆ ಹೌದು ಅನ್ನೋದು ಬಿಜೆಪಿ ಶಾಸಕರೇ ಹೇಳ್ತಾರೆ.

ಇದನ್ನೂ ಓದಿ-ನಾಗ ಚೈತನ್ಯ- ಶೋಭಿತಾ ಮದುವೆ ಕುರಿತು ಸಮಂತಾ ಮೊದಲ ಪ್ರತಿಕ್ರಯೆ..! ಇನ್ಸ್ಟಾಗ್ರಾಮ್‌ ಪೋಸ್ಟ್‌ ವೈರಲ್‌

ಇತ್ತೀಚೆಗೆ ಬಿಎಸ್‌ವೈ ನಿವೃತ್ತಿ ಘೋಷಣೆ ಬಳಿಕ ರಾಜ್ಯದ ಬಿಜೆಪಿಗೆ ಸಾರಥಿ ಹುಡುಕಾಟದಲ್ಲಿದ್ದ ಹೈಕಮಾಂಡ್‌ ಮರಿ ರಾಜಾಹುಲಿ ವಿಜಯೇಂದ್ರಗೆ ಪಟ್ಟ ಕಟ್ಟಿದ್ರು.ಕರುನಾಡಲ್ಲಿ ಪಕ್ಷದ ಸಂಘಟನೆಗಾಗಿ ವಿಜಯೇಂದ್ರ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ ಅನ್ನೋದು ಎಲ್ಲೆಡೆ ಗೊತ್ತಿರೋ ವಿಚಾರ.ವಿಜಯೇಂದ್ರ ಬಗ್ಗೆ ಹೇಳ್ಬೇಕಂದ್ರೆ ಸೌಮ್ಯ ಸ್ವಭಾವಿ, ಮಾತು ಕಡಿಮೆ ರಾಜಕಾರಣಿ ಅನ್ನಿಸಿಕೊಂಡಿದ್ದಾರೆ.ಅದರಲ್ಲಿಯೂ ಪಕ್ಷದ ಸಿದ್ಧಾಂತವನ್ನು ವಿರೋಧಿಸುವವರನ್ನು ಅವರು ಘಾಸಿಗೊಳಿಸದೇ ವಾಕ್‌ಪ್ರಹಾರ ನಡೆಸ್ತಾರೆ.ಆದ್ರೆ ಇವೆಲ್ಲ ಚುನಾವಣೆಗೆ ಅಸ್ತ್ರಗಳಾಗಲ್ಲ. ಅಲ್ಲೇನಿದ್ರೂ ಒಗ್ಗಟ್ಟಿನ ಮಂತ್ರ ಕಾರ್ಯಕರ್ತರ ಮನದಲ್ಲಿ ಎಷ್ಟು ಬೇರೂರುತ್ತಾರೆ ಅನ್ನೋದು ಮುಖ್ಯವಾಗುತ್ತೆ.ಇದಕ್ಕಿಂತ ಮೊದಲು ಪಕ್ಷದ ಅಧ್ಯಕ್ಷರಾಗಿ ಎಲ್ಲ ನಾಯಕರನ್ನು ಅವರು ಹೇಗೆ ಮನ ಗೆಲ್ಲಬೇಕು ಅನ್ನೋದ್ರಲ್ಲಿ ರಾಜ್ಯಾಧ್ಯಕ್ಷರು ಎಡವಿದ್ದಾರೆ.

ಇದಕ್ಕೆ ಉದಾಹರಣೆ ಅಂದ್ರೆ ರೆಬೆಲ್‌ ಟೀಮ್‌.. ಹೌದು ಹೈಕಮಾಂಡ್‌ ರಾಜ್ಯದ ಬಿಜೆಪಿ ಚುಕ್ಕಾಣಿಯನ್ನು ವಿಜಯೇಂದ್ರಗೆ ಕೊಟ್ಟಾಗಿನಿಂದ ವಿರೋಧಿಸುತ್ತಿರುವ ರೆಬೆಲ್‌ ಪಡೆ ಮನವೊಲಿಸುವಲ್ಲಿ ಮತ್ತು ಅವರ ಸ್ವಪಕ್ಷದವರ ವಿರುದ್ಧದ ಹೇಳಿಕೆ ನಿಯಂತ್ರಿಸುವಲ್ಲಿ ಸೋತಿದ್ದಾರೆ.ಇದೆಲ್ಲ ಒಂದ್ಕಡೆಯಾದ್ರೆ ಮೊದಲಿನಿಂದಲೂ ಕಾಂಗ್ರೆಸ್‌ನೊಂದಿಗೆ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್‌. ಅಶೋಕ್‌ ವಿರುದ್ಧ ಹೊಂದಾಣಿಕೆ ರಾಜಕಾರಣ ಮಾಡ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ.ಇದು ಸ್ವಪಕ್ಷದವರೇ ಹೇಳಿದ್ರೆ ಅಷ್ಟೊಂದು ಮಹತ್ವ ಪಡೀತಾ ಇರಲಿಲ್ಲ.ಇದು ಸಾರ್ವಜನಿಕ ವಲಯದಲ್ಲೂ ಚರ್ಚಾ ವಿಷಯವಾಗಿದೆ.

ಬಿಎಸ್‌ವೈ ಹಾದಿಯಲ್ಲೇ ಸಾಗುತ್ತಿದ್ದಾರಾ ವಿಜಯೇಂದ್ರ..?

ಬಿಎಸ್‌ವೈ ಅಂದ್ರೆ ಬಿಜೆಪಿ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ... ಹೌದು, ಯಡಿಯೂರಪ್ಪ ತಮ್ಮ ಅಧಿಕಾರವಧಿಯಲ್ಲಿ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು.. ಕೊನೆ ಬಾರಿ ಅಧಿಕಾರವಧಿಯನ್ನು ಹೊರತು ಪಡಿಸಿದರೆ ಯಡಿಯೂರಪ್ಪ ಅಷ್ಟೊಂದು ವಿರೋಧವನ್ನು ಎದುರಿಸಿಲ್ಲ.ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯದೆಲ್ಲೆಡೆ ಪಕ್ಷವನ್ನು ಸಂಘಟಿಸಿದ್ದು ಇದೇ ಮಾಜಿ ಸಿಎಂ ಯಡಿಯೂರಪ್ಪ.ಆದ್ರೆ ಅವರ ಹಾದಿಯಲ್ಲೇ ವಿಜಯೇಂದ್ರ ಯಾಕೆ ಸಾಗ್ತಿಲ್ಲ ಅನ್ನೋದು ಪ್ರಶ್ನೆಯಾಗಿದೆ.ಅಪ್ಪನಂತೆ ಮಗನೂ ರಾಜಕೀಯದಲ್ಲಿ ಆರ್ಭಟ ನಡೆಸುತ್ತಾರೆ ಅಂತ ಜನ ಅನ್ಕೊಂಡಿದ್ರು.ಆದ್ರೆ ವಿಜಯೇಂದ್ರ ಚಾಣಾಕ್ಷತನ ಈ ಉಪ ಚುನಾವಣೆಯಲ್ಲಿ ಅಷ್ಟೊಂದು ವರ್ಕೌಟ್‌ ಆಗಲಿಲ್ಲ.ಇನ್ನೊಂದು ಕಡೆ ಹೈಕಮಾಂಡ್‌ ಮೇಲೂ ಹಲವಾರು ಅನುಮಾನಗಳು ಮೂಡಿ ಬರ್ತಿವೆ... ವಿಜಯೇಂದ್ರ ವಿರುದ್ಧವೇ ಯತ್ನಾಳ್‌ ಮಾತನಾಡಿದ್ರೂ ಯಾವ ಕ್ರಮ ಕೈಗೊಳ್ಳದೇ ಇರೋದು ಇಲ್ಲಿ ಎದ್ದು ಕಾಣುತ್ತಿದೆ.ಸ್ವಪಕ್ಷದವರ ವಿರೋಧ ಮಾತ್ರ ವಿಜಯೇಂದ್ರಗೆ ಮತ್ತಷ್ಟು ಹಿನ್ನಡೆ ಆಗಿದ್ದು ಮಾತ್ರ ನಿಜ...

ಅಪ್ಪ, ತಾತ ಪ್ರಚಾರ ಮಾಡಿದ್ರೂ ನಿಖಿಲ್‌ಗೆ ಸೋಲು!

ಕೊನೆ ಕ್ಷಣದವರೆಗೂ ಸಿಪಿವೈನೇ ಚನ್ನಪಟ್ಟಣದ ಮೈತ್ರಿ ಅಭ್ಯರ್ಥಿ ಅಂತಿದ್ದ ದೋಸ್ತಿಗಳು ಕೊನೆಗೆ ನಿಖಿಲ್‌ಗೆ ಮಣೆ ಹಾಕಿದ್ರು... ಚನ್ನಪಟ್ಟಣದಲ್ಲಿ ನಿಖಿಲ್‌ ಗೆಲ್ಲೋದು ಡೌಟ್‌ ಅಂತ ಬಿಜೆಪಿ ಹೈಕಮಾಂಡ್‌ಗೆ ಗೊತ್ತಿದ್ದರೂ ಈ ನಿರ್ಧಾರಕ್ಕೆ ಬಂದಿದ್ರು ಅಂತ ಹೇಳಲಾಗ್ತಿದೆ.. ಆದ್ರೂ ಕೂಡ ಕುಮಾರಸ್ವಾಮಿ ಶತಾಯಗತಾಯ ಮಗನನ್ನು ಗೆಲ್ಲಿಸಲೇಬೇಕು ಅಂತ ಪಣ ತೊಟ್ಟಿದ್ರು... ಬಿಜೆಪಿ ಮತ್ತು ಜೆಡಿಎಸ್‌ನ ನಾಯಕರನ್ನು ಒಗ್ಗೂಡಿಸಿ ಚನ್ನಪಟ್ಟಣದಲ್ಲಿ ಮಹಾ ಸಮಾವೇಶ ಮಾಡಿದ್ರು ಆದ್ರೆ ಇದ್ಯಾವುದೂ ಕೈ ಹಿಡಿಯಲಿಲ್ಲ... ಖುದ್ದು ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಇಳಿ ವಯಸ್ಸಿನಲ್ಲೂ ಅಖಾಡಕ್ಕೆ ಇಳಿದು ಅಬ್ಬರದ ಪ್ರಚಾರ ಮಾಡಿದ್ರು.. ಒಕ್ಕಲಿಗರ ಮತ ಕ್ರೋಢಿಕರಣಕ್ಕೆ ತಂತ್ರ ಹೂಡಿದ್ರೂ ಕೂಡ ಒಕ್ಕಲಿಗರ ಮತ್ತು ಕುರುಬ ಸಮುದಾಯದ ಮತಗಳನನ್ನ ಪಡೆಯುವಲ್ಲ ವಿಫಲರಾಗಿದ್ದಾರೆ.. ಇತ್ತ  ಮಗನನ್ನ ಗೆಲ್ಲಿಸಿಕೊಳ್ಳಲಾಗದ ಕುಮಾರಸ್ವಾಮಿ.. ತಮ್ಮ ರಾಜಕೀಯಕ್ಕೆ ಮಗನನ್ನ ಬಲಿಪಶು ಮಾಡಿದ್ರು ಅಂತ ವಿಪಕ್ಷಗಳು ಕುಮಾರಸ್ವಾಮಿ ಮೇಲೆ ವಾಗ್ಬಾಣ ನಡೆಸಿವೆ..  

ಇನ್ನು ಹಾವೇರಿಯ ಶಿಗ್ಗಾಂವಿಯಲ್ಲಿ ಭರತ್‌ ಬೊಮ್ಮಾಯಿ ಗೆದ್ದೇ ಗೆಲ್ತಾರೆ ಅಂತ ಹೇಳಲಾಗ್ತಿತ್ತು... ಆದ್ರೆ ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ತಮ್ಮ ಬಹುಕಾಲದ ಕ್ಷೇತ್ರದ ಅಧಿಪತ್ಯವನ್ನು ಇಂದಿಗೆ ಕಳೆದುಕೊಂಡಿದ್ದಾರೆ.. ಇಲ್ಲಿ ಪ್ರಮುಖ ಗಮನಿಸಿಬೇಕಾದ ಲೋಪಗಳೆಂದರೆ ಟಿಕೆಟ್‌ ನೀಡಿದಾಗಿನಿಂದ ಹಿಡಿದು ಕೊನೆ ಕ್ಷಣದವರೆಗೂ ಕಂಡು ಬರುತ್ತವೆ.. ಬೊಮ್ಮಾಯಿ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನಟ್ಟುಕೊಂಡು ಮತ ಕೇಳಿದ್ರು... ಇತ್ತ ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್‌ಖಾನ್‌ ಪಠಾಣ್‌ ಮಾತ್ರ ಕಳೆದ ಬಾರಿಯ ಸೋಲಿನ ಅನುಕಂಪದ ಮೇಲೆ ಮತಕ್ಕೆ ಮನವಿ ಮಾಡಿಕೊಂಡಿದ್ದು ಪ್ಲಸ್‌ ಆಗಿತ್ತು.. ಇಲ್ಲಿ ಬಿಜೆಪಿ ಎಡವಿದ್ದೆಲ್ಲಿ ಅನ್ನೋದನ್ನ ನೋಡೋದಾದ್ರೆ.. ಮೊದಲಿಗೆ ಬರೋದು ಮಾಜಿ ಸಿಎಂ ಬೊಮ್ಮಾಯಿ ಅವರ ವೈಫಲ್ಯ... ಹೌದು ಬಿಜೆಪಿ ಹೈಕಮಾಂಡ್‌ಗೆ ಶಿಗ್ಗಾಂವಿ ಗೆಲುವು ಎಷ್ಟು ಮುಖ್ಯವಾಗಿತ್ತೋ ಅಷ್ಟೇ ಬೊಮ್ಮಾಯಿಗಿತ್ತು.. ಇಲ್ಲಿ ಸಾಮಾನ್ಯ ಕಾರ್ಯಕರ್ತನೊಬ್ಬನಿಗೆ ಟಿಕೆಟ್‌ ಕೊಡಿಸಿ ಕುಟುಂಬ ರಾಜಕಾರಣಕ್ಕೆ ಬೊಮ್ಮಾಯಿ ಪುಲ್‌ಸ್ಟಾಪ್‌ ಇಡಬಹುದಾಗಿತ್ತು.. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಬಿಜೆಪಿಗರು ಇಲ್ಲಿ ಆ ಕೆಲಸ ಮಾಡಬಹುದಿತ್ತು. ಮತ್ತು ಒಬ್ಬ ಸಾಮಾನ್ಯ ಕಾರ್ಯಕರ್ತನನ್ನ ಗೆಲ್ಲಿಸಿ ಬೆಳೆಸುವ ಮನಸ್ಸು ಬೊಮ್ಮಾಯಿ ಮಾಡಲಿಲ್ಲ ಅಂತ ಕಾರ್ಯಕರ್ತರು ಅಷ್ಟಾಗಿ ಒಲವು ತೋರಲಿಲ್ಲ ಅನ್ನೋದು ಕೂಡ ಇಲ್ಲಿ ಕೇಳಿ ಬರುತ್ತಿದೆ.. ಅದರಲ್ಲೂ ಮುಸ್ಲಿಂ ಮತ ಕ್ರೋಢಿಕರಣಕ್ಕೆ ಬೊಮ್ಮಾಯಿ ಸಾಕಷ್ಟು ಸರ್ಕಸ್‌ ಮಾಡಿದ್ರು ಕೂಡ ಅದು ಸಾಧ್ಯವಾಗಿಲ್ಲ.. ಇಲ್ಲಿ ಮುಸಲ್ಮಾನ ಸಮುದಾಯದ ಮತಗಳು ಬಿಜೆಪಿಗೆ ಬರದೇ ಇರೋದಕ್ಕೆ ಇದು ಒಂದು ಕಾರಣ... ಶಾಸಕ ಯತ್ನಾಳ್‌ ಆಡಿರುವ ಮಾತು.. ಶಿಗ್ಗಾಂವಿಯ ಕೆಲ ಕಡೆ ಹಿಂದೂ ಫೈರ್‌ ಬ್ರಿಗೇಡ್‌ ಅಂತಾ ಕರೆಸಿಕೊಳ್ಳುವ ಯತ್ನಾಳ್‌ ಕೆಲ ಕಡೆ ನಮಗೆ ಮುಸ್ಲಿಂ ಮತಗಳೇ ಬೇಡ ಅನ್ನೋ ಮಾತುಗಳನ್ನಾಡಿದ್ದು ಬೊಮ್ಮಾಯಿ ತಮ್ಮ ಕ್ಷೇತ್ರವನ್ನು ಕಳೆದುಕೊಳ್ಳಲು ಇದು ಒಂದು ಕಾರಣವಾಗಿದೆ ಎನ್ನಲಾಗ್ತಿದೆ.. ಬೊಮ್ಮಾಯಿ ಕಾಲಾವಧಿಯಲ್ಲಿ ಮುಸ್ಲಿಂ-ಹಿಂದೂ ಅನ್ನೋ ಭಾವನೆಗಳೇ ಇರಲಿಲ್ಲ. ನಾವು ಭಾಯ್‌-ಭಾಯ್‌ ಅನ್ನೋ ರೀತಿ ಇದ್ದೇವು.... ಆದ್ರೀಗ ಭರತ್‌ ಬಂದ್ಮೇಲೆ ಈ ರೀತಿ ಆಗಿದ್ದು.. ಹೀಗಾಗಿ ನಾವು ನಮ್ಮ ಸಮುದಾಯದ ನಾಯಕನನ್ನೇ ಆರಿಸಿದ್ದೀವಿ ಅಂತ ಕೆಲ ಮುಸ್ಲಿಂ ನಾಯಕರು ಹೇಳಿಕೊಂಡಿದ್ದಾರೆ.

ಒಟ್ನಲ್ಲಿ ಉಪ ಚುನಾವಣ ಕದನಕ್ಕೆ ಸಂಪೂರ್ಣ ತೆರೆ ಬಿದ್ದಿದೆ.. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಿಲಕಿಲ ಅಂತಿದೆ.. ಇತ್ತ ದೋಸ್ತಿ ನಾಯಕರು ಸೋಲಿನ ಪರಾಮರ್ಶೆಗೆ ಇಳಿದಿದ್ದಾರೆ.ಬಿಜೆಪಿಯಲ್ಲಿ ಸಾಕಷ್ಟು ಆಂತರಿಕ ಜಗಳ.. ಸ್ವಪಕ್ಷದವರ ವಿರುದ್ಧದ ಹೇಳಿಕೆಗಳಿಗೆ ಬೀಳದ ಕಡಿವಾಣ ಸೇರಿದಂತೆ ಇನ್ನಿತರ ಕಾರಣಗಳು ಎದ್ದು ಕಾಣುತ್ತಿವೆ.. ಇತ್ತ ಜೆಡಿಎಸ್‌ನಲ್ಲಿ ಒಕ್ಕಲಿಗರ ಮನವೊಲಿಸುವಲ್ಲಿ ಕುಮಾರಸ್ವಾಮಿ ಮತ್ತು ದೇವೇಗೌಡರು ವಿಫಲರಾಗಿದ್ದಾರೆ.ಆಗಿರೋ ತಪ್ಪುಗಳನ್ನ ಸರಿಪಡಿಸಿಕೊಂಡು ಮುಂಬರುವ ದಿನಗಳಲ್ಲಿ ಜನರ ಮನಸ್ಸು ಗೆಲ್ತೀವಿ ಅಂತ ರಾಜಕೀಯ ನಾಯಕರು ಮತ್ತೊಂದು ಅಸ್ತ್ರ ಹೂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News