ಸಿನಿಮಾ ಶೂಟಿಂಗ್‌ ವೇಳೆ ಹೆಚ್ಚು ʼಕಾಂಡೋಮ್‌ʼಗಳ ಬಳಕೆ..! ಶಾಕಿಂಗ್‌ ವಿಚಾರ ರಿವೀಲ್‌ ಮಾಡಿದ ಖ್ಯಾತ ನಟ

Condoms use in film shooting : ಸಿನಿರಂಗಕ್ಕೆ ಸಂಬಂಧಿಸಿದ ಸಾಕಷ್ಟು ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗಿ ವೈರಲ್‌ ಆಗುತ್ತಿರುತ್ತವೆ.. ಇತ್ತೀಚಿಗೆ ಕಾಸ್ಟಿಂಗ್‌ ಕೌಚ್‌ ವಿಚಾರವಂತೂ ಸಖತ್‌ ಸದ್ದು ಮಾಡಿತ್ತು. ಇದೀಗ ಹೊಸ ವಿಚಾರವೊಂದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದ್ದು, ಗರ್ಭನಿರೋಧಕ ಕಾಂಡೋಮ್‌ಗಳನ್ನು ಶೂಟಿಂಗ್‌ ಸೆಟ್‌ನಲ್ಲಿ ಹೆಚ್ಚಾಗಿ ಬಳಸುತ್ತಾರೆ ಎನ್ನುವ ವಿಚಾರ ಬಹಿರಂಗವಾಗಿದೆ..

Written by - Krishna N K | Last Updated : Nov 8, 2024, 02:21 PM IST
    • ಇತ್ತೀಚಿಗೆ ಕಾಸ್ಟಿಂಗ್‌ ಕೌಚ್‌ ವಿಚಾರವಂತೂ ಸಖತ್‌ ಸದ್ದು ಮಾಡಿತ್ತು.
    • ಇದೀಗ ಹೊಸ ವಿಚಾರವೊಂದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ..
    • ಶೂಟಿಂಗ್‌ ಸೆಟ್‌ನಲ್ಲಿ ಗರ್ಭನಿರೋಧಕ ಕಾಂಡೋಮ್‌ಗಳ ಹೆಚ್ಚಿನ ಬಳಕೆ
ಸಿನಿಮಾ ಶೂಟಿಂಗ್‌ ವೇಳೆ ಹೆಚ್ಚು ʼಕಾಂಡೋಮ್‌ʼಗಳ ಬಳಕೆ..! ಶಾಕಿಂಗ್‌ ವಿಚಾರ ರಿವೀಲ್‌ ಮಾಡಿದ ಖ್ಯಾತ ನಟ title=

Viral movie news : ಬಾಲಿವುಡ್‌ ನಟ ರಾಜು ಶ್ರೇಷ್ಠ.. ತಮ್ಮ ಫೇಸ್‌ಬುಕ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕಾಂಡೋಮ್‌ಗಳನ್ನು ನಿರ್ದಿಷ್ಟವಾಗಿ ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.. ವಿವರಗಳು ಈ ಕೆಳಗಿನಂತಿವೆ..

ಚಲನಚಿತ್ರಗಳು ಮತ್ತು ಟಿವಿ ಶೋಗಳಲ್ಲಿ ಸಾಹಸ ದೃಶ್ಯಗಳು ಇರುತ್ತವೆ ಅಂತ ಎಲ್ಲರಿಗೂ ತಿಳಿದಿದೆ. ಇವುಗಳ ಚಿತ್ರೀಕರಣ ಬಹಳ ರೋಚಕವಾಗಿರುತ್ತದೆ. ಅದರಂತೆ ಈ ನಿರೋಧಗಳ ಬಳಕೆ ಹೆಚ್ಚಾಗಿ ಆಕ್ಷನ್‌ ಸೀನ್‌ಗಳನ್ನು ಶೂಟ್‌ ಮಾಡುವ ಸಮಯದಲ್ಲಿ ಬಳಸಲಾಗುತ್ತದೆ.. 

ನೀವು ಗಮನಿಸಿರಬಹುದು.. ಸಿನಿಮಾಗಳಲ್ಲಿ ಗುಂಡು ಹಾರಿಸಿದ ತಕ್ಷಣ ವ್ಯಕ್ತಿಯ ದೇಹ ರಕ್ತಸಿಕ್ತವಾಗುತ್ತದೆ.. ಆ ದೃಶ್ಯಗಳನ್ನು ಹೇಗೆ ಚಿತ್ರೀಕರಿಸಲಾಗುತ್ತದೆ ಎಂಬುದರ ಕುರಿತು ನಟ ರಾಜು ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.. ಅಲ್ಲದೆ, ಕಾಂಡೋಮ್‌ ಬಳಕೆ ಬಗ್ಗೆ ತಿಳಿಸಿದ್ದಾರೆ..   

ಇದನ್ನೂ ಓದಿ:ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಮದುವೆ ಫಿಕ್ಸ್‌!! ದೀಪಾವಳಿ ಜೊತೆ ಜೊತೆಗೆ ತಮ್ಮ ರಿಲೇಶನ್‌ ಶಿಪ್‌ಗೆ ಫೋಟೋ ಮೂಲಕ ಕ್ಲಾರಿಟಿ ಕೊಟ್ರು ಸ್ಟಾರ್‌ ಜೋಡಿ?!

ನಟ ರಾಜು ಪ್ರಕಾರ, ಗನ್‌ ಪೈರಿಂಗ್‌ ದೃಶ್ಯಗಳಲ್ಲಿ ಕಾಂಡೋಮ್ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಾಂಡೋಮ್‌ಗಳಲ್ಲಿ ನಕಲಿ ರಕ್ತ ತುಂಬಲಾಗುತ್ತದೆ. (ರಕ್ತದಂತಹ ದ್ರವ) ಕಲಾವಿದನ ಡ್ರೇಸ್‌ನೊಳಗೆ ಕಾರಣದಂತೆ ಮರೆಮಾಡಲಾಗಿರುತ್ತದೆ. ಇದು ಗನ್‌ ಪೈರ್‌ ಆಗುತ್ತಿದ್ದಂತೆ ರಕ್ತ ಸಿಡಿಯುತ್ತದೆ. 

ನಿರ್ದಿಷ್ಟವಾಗಿ ಪೈರಿಂಗ್‌ಗೆ ಒಳಗಾಗುವ ನಟನ ಬಟ್ಟೆಯೊಳಗೆ ನಕಲಿ ರಕ್ತದಿಂದ ತುಂಬಿದ ಕಾಂಡೋಮ್‌ಗಳನ್ನು ಇರಿಸಲಾಗಿರುತ್ತದೆ. ಚಿತ್ರೀಕರಣದ ಸಮಯದಲ್ಲಿ ಅದಕ್ಕೆ ಉದ್ದನೆಯ ತಂತಿಯ ಒಂದು ತುದಿಯನ್ನು ಕಾಂಡೋಮ್‌ನಲ್ಲಿರುವ ಕ್ರ್ಯಾಕರ್‌ಗೆ ಮತ್ತು ಇನ್ನೊಂದು ತುದಿಯನ್ನು ಬ್ಯಾಟರಿಗೆ ಸಂಪರ್ಕಿಸಲಾಗಿರುತ್ತದೆ. 

ಇದನ್ನೂ ಓದಿ:ಜೈಲಿನಿಂದ ಹೊರಬಂದ ದರ್ಶನ್ ಗೆ ಬಿಗ್ ಶಾಕ್? ಸದ್ಯದಲ್ಲೇ ದಾಸನಿಗೆ ಎದುರಾಗಲಿದೆ ಮತ್ತೊಂದು ಸಂಕಷ್ಟ!!

ಗನ್‌ ಪೈರಿಂಗ್‌ ಆಗುತ್ತಿದ್ದಂತೆ ಕಲಾವಿದ ತಮಗೆ ನೀಡಿದ್ದ ತಂತಿಯನ್ನು ಎಳೆದಾಗ, ಕ್ರ್ಯಾಕರ್‌ ಸ್ಫೋಟಗೊಂಡು ಕಾಂಡೋಮ್ ಒಡೆದು ರಕ್ತ ಬರುತ್ತದೆ.. ಇದು ನೋಡಲು ನೈಜವಾಗಿರುತ್ತದೆ. ಅಲ್ಲದೆ, ಈ ರೀತಿಯ ಸೀನ್‌ಗಳನ್ನು ಚಿತ್ರೀಕರಿಸುವಾಗ, ಕಲಾವಿದರಿಗೆ ಹಾನಿಯಾಗಂದತೆ ನೋಡಿಕೊಳ್ಳುವುದು ಸಾಹಸ ನಿರ್ದೇಶಕನ ಕೆಲಸ ಅದಕ್ಕಾಗಿ, ಬಲವಾದ ಮತ್ತು ತೆಳುವಾದ ರಬ್ಬರ್ ಅಗತ್ಯವಿರುತ್ತದೆ. 

ಸಾಮಾನ್ಯ ಬಲೂನ್‌ಗಳು ಯಾವ ಕ್ಷಣದಲ್ಲಾದರೂ ಒಡೆದು ಹೋಗಬಹುದು.. ಅಲ್ಲದೆ, ಅದರೊಳಗೆ ಅಳವಡಿಸುವ ಕ್ರ್ಯಾಕರ್‌ ಸ್ಪೋಟಗೊಂಡಾಗ ನಟನಿಗೆ ಹಾನಿ ಮಾಡಬಹುದು.. ಅದಕ್ಕಾಗಿ ಈ ನಿಟ್ಟಿನಲ್ಲಿ ಕಾಂಡೋಮ್‌ಗಳು ಹೆಚ್ಚು ಬಳಸಲಾಗುತ್ತದೆ.. ಇವು ಯಾವುದೇ ಹಾನಿಯಾಗದಂತೆ ತಡೆಯುವಲ್ಲಿ ಹೆಚ್ಚು ಕೆಲಸ ನಿರ್ವಹಿಸುತ್ತವೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News