ನೆಲ ಒರೆಸುವಾಗ ಮಾಡುವ ಈ ತಪ್ಪು ಮನೆಯ ಸಂಪತ್ತು, ಆರೋಗ್ಯ, ಶಾಂತಿ ಎಲ್ಲವೂ ಹಾಳು ಮಾಡಿಬಿಡಬಹುದು !

ಅನೇಕ ಬಾರಿ ಮನೆಯನ್ನು ಶುಚಿಗೊಳಿಸುವ ಸಮಯದಲ್ಲಿ ನಾವು ಕೆಲವು ತಪ್ಪುಗಳನ್ನು ಮಾಡುತ್ತೇವೆ. ನಾವು ಮಾಡುವ ತಪ್ಪುಗಳು ನಮ್ಮನ್ನು ಬಡತನಕ್ಕೆ ತಳ್ಳಬಹುದು. 

Written by - Ranjitha R K | Last Updated : Oct 24, 2024, 04:40 PM IST
  • ಮನೆ ಶುಚಿಯಾಗಿದ್ದರೆ ಮನೆಯಲ್ಲಿ ಸಕಾರಾತ್ಮಕತೆ ನೆಲೆಯಾಗುತ್ತದೆ.
  • ಮನೆಯು ಸ್ವಚ್ಛವಾಗಿದ್ದರೆ ಸುಂದರವಾಗಿಯೂ ಕಾಣುತ್ತದೆ.
  • ನಾವು ಮಾಡುವ ತಪ್ಪುಗಳು ನಮ್ಮನ್ನು ಬಡತನಕ್ಕೆ ತಳ್ಳಬಹುದು.
ನೆಲ ಒರೆಸುವಾಗ ಮಾಡುವ ಈ ತಪ್ಪು ಮನೆಯ ಸಂಪತ್ತು, ಆರೋಗ್ಯ, ಶಾಂತಿ ಎಲ್ಲವೂ ಹಾಳು ಮಾಡಿಬಿಡಬಹುದು ! title=

ಬೆಂಗಳೂರು : ಮನೆ ಶುಚಿಯಾಗಿದ್ದರೆ ಮನೆಯಲ್ಲಿ ಸಕಾರಾತ್ಮಕತೆ ನೆಲೆಯಾಗುತ್ತದೆ. ಮನೆಯು ಸ್ವಚ್ಛವಾಗಿದ್ದರೆ ಸುಂದರವಾಗಿಯೂ ಕಾಣುತ್ತದೆ. ಯಾವ ಮನೆ ಸ್ವಚ್ಚ ಸುಂದರವಾಗಿ ಇರುತ್ತದೆಯೋ ಅಲ್ಲಿ ಲಕ್ಷ್ಮೀ ದೇವಿಯ ಆಶೀರ್ವಾದ ನೆಲೆಯಾಗಿರುತ್ತದೆ.ಲಕ್ಷ್ಮಿ ದೇವಿಯ ಆಶೀರ್ವಾದ ಎಂದರೆ ಮನೆಯಲ್ಲಿ  ಸುಖ ಸಂತೋಷ ಮತ್ತು ಸಮೃದ್ಧಿ ನೆಲೆಸುವುದು. ಆದರೆ ಅನೇಕ ಬಾರಿ ಮನೆಯನ್ನು ಶುಚಿಗೊಳಿಸುವ ಸಮಯದಲ್ಲಿ ನಾವು ಕೆಲವು ತಪ್ಪುಗಳನ್ನು ಮಾಡುತ್ತೇವೆ. ನಾವು ಮಾಡುವ ತಪ್ಪುಗಳು ನಮ್ಮನ್ನು ಬಡತನಕ್ಕೆ ತಳ್ಳಬಹುದು.  

ಸ್ವಚ್ಛಗೊಳಿಸಲು ಹಳೆಯ ಬಟ್ಟೆಗಳನ್ನು ಬಳಸಬೇಡಿ : 
ಮನೆಯ ನೆಲ ಒರೆಸಲು ಹಳೆಯ ಬಟ್ಟೆಗಳನ್ನು ಬಳಸುವ ಹವ್ಯಾಸ ಕೆಲವರಿಗೆ ಇರುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚುತ್ತದೆ. ಇದು ಮನೆಯ ಶಾಂತಿ ಮತ್ತು ನೆಮ್ಮದಿಯನ್ನು ಹಾಳುಮಾಡುತ್ತದೆ.ಮನೆಯಲ್ಲಿ ಜಗಳಗಳು ಮತ್ತು ಕಲಹಗಳನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Numerology: ಈ ದಿನಾಂಕದಂದು ಜನಿಸಿದ ಹೆಣ್ಣುಮಕ್ಕಳು, ಮನೆಗೆ ಸಂಪತ್ತು ಹಾಗೂ ಸಮೃದ್ಧಿಯನ್ನು ಹೊತ್ತು ತರುತ್ತಾರೆ..!

ಹಳೆಯ ಬಟ್ಟೆಗಳನ್ನು ಮನೆ ಒರೆಸಲು ಬಳಸುವುದರಿಂದ ಬಡತನ ಹೆಚ್ಚಾಗುತ್ತದೆ. ಹಣದ ಒಳಹರಿವು ಕಡಿಮೆಯಾಗುತ್ತದೆ ಅಥವಾ ಆರ್ಥಿಕ ನಷ್ಟದ ಸಾಧ್ಯತೆಗಳಿವೆ. ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ಹಣ ಕೈ ಸೇರುವುದಿಲ್ಲ. 

ಯಾರ ಹಳೆಯ ಬಟ್ಟೆಯನ್ನು ನೆಲ ಒರೆಸಲು ಬಳಸುತ್ತೇವೆಯೋ ಆ ವ್ಯಕ್ತಿಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ರೋಗಗಳು ಅವನನ್ನು ಸುತ್ತುವರೆಯುತ್ತವೆ. ಎಷ್ಟು ಚಿಕಿತ್ಸೆ ಮಾಡಿಸಿದರೂ ಪ್ರಯೋಜನವಾಗುವುದಿಲ್ಲ. ಇದಕ್ಕೆ ಕಾರಣ ಏನೆಂದರೆ ಆ ವ್ಯಕ್ತಿಯ ಎನರ್ಜಿ ಅವನು ಧರಿಸಿರುವ ಬಟ್ಟೆಯಲ್ಲಿ ಉಳಿಯುತ್ತದೆ. ನೆಲ ಒರೆಸಲು ಆ ಬಟ್ಟೆಯನ್ನು ಬಳಸುವಾಗ ಅದು ವ್ಯಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆ ವ್ಯಕ್ತಿ ನಿರಾಶಾವಾದಿಯಾಗುತ್ತಾನೆ.ಅವನ ಪ್ರಗತಿ ನಿಲ್ಲುತ್ತದೆ.

ಇದನ್ನೂ ಓದಿ: ಮನೆಯ ಈ ಜಾಗದಲ್ಲಿ ನವಿಲುಗರಿ ಇಟ್ಟರೆ ದಾರಿದ್ರ್ಯ ದೂರವಾಗಿ, ಸಂಪತ್ತಿನಿಂದ ತುಂಬಿ ತುಳುಕುತ್ತೆ ಖಜಾನೆ..!

ಹಳೆಯ ಬಟ್ಟೆಗಳನ್ನು ಏನು ಮಾಡಬೇಕು? : 
ವಾಸ್ತು ಶಾಸ್ತ್ರದ ಪ್ರಕಾರ, ಧರಿಸಿದ ಬಟ್ಟೆಯನ್ನು ಅಗತ್ಯವಿರುವವರಿಗೆ ದಾನ ಮಾಡುವುದು ಉತ್ತಮ. ಆದರೆ ದನ ಮಾಡುವ ಮೊದಲು ಬಟ್ಟೆಯನ್ನು ಸೋಪ್-ಡಿಟರ್ಜೆಂಟ್ನೊಂದಿಗೆ  ಸರಿಯಾಗಿ ತೊಳೆಯಬೇಕು. ನಂತರ ಅದೇ ಬಟ್ಟೆಗಳನ್ನು ನು ಉಪ್ಪು ನೀರಿನಲ್ಲಿ ತೊಳೆಯಬೇಕು. ನಂತರ ಯಾರಿಗೆ ಬೇಕೋ ಅವರಿಗೆ ದಾನ ಮಾಡಬಹುದು.ಇದರಿಂದ ದಾನ ಮಾಡಿದ ಪುಣ್ಯ ಸಿಗುತ್ತದೆ ಮತ್ತು ಕಷ್ಟದಲ್ಲಿರುವವರಿಗೆ ಸಹಾಯವಾದ ಹಾಗೆ ಆಗುತ್ತದೆ.

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News