'ದೇವರು ರುಜು ಮಾಡಿದನು' ಎಂದ ಸಿಂಪಲ್ ಸುನಿ...! ಬೆಳ್ಳಿಪರದೆಗೆ ನವನಾಯಕ ಪರಿಚಯ

ಸಿಂಪಲ್ ಸುನಿ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ದೇವರು ರುಜು ಮಾಡಿದನು ಚಿತ್ರ ಮೂಲಕ ಬೆಳ್ಳಿಪರದೆಗೆ ನವ ನಾಯಕನ್ನು ಪರಿಚಯಿಸಿದ್ದಾರೆ. ರಂಗಭೂಮಿ ಕಲಾವಿದರಾಗಿರುವ, ಅಪಾರ ಸಿನಿಮಾ ಪ್ರೀತಿ ಹೊಂದಿರುವ ವೀರಾಜ್ ಅವರು ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಅಡಿ ಇಡುತ್ತಿದ್ದಾರೆ.

Written by - Krishna N K | Last Updated : Oct 17, 2024, 09:08 PM IST
    • ಸಿಂಪಲ್ ಸುನಿ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.
    • ನಿರ್ದೇಶಕ ಸುನಿ ಈಗ ದೇವರು ರುಜು ಮಾಡಿದನು ಎನ್ನುತ್ತಿದ್ದಾರೆ.
    • ಕುವೆಂಪುರವರ ಪದ್ಯದ ಸಾಲನ್ನು ತಮ್ಮ ಮುಂದಿನ ಚಿತ್ರದ ಶೀರ್ಷಿಕೆಯಾಗಿಸಿದ್ದಾರೆ.
'ದೇವರು ರುಜು ಮಾಡಿದನು' ಎಂದ ಸಿಂಪಲ್ ಸುನಿ...! ಬೆಳ್ಳಿಪರದೆಗೆ ನವನಾಯಕ ಪರಿಚಯ title=

Devaru Ruju Madidanu movie : ಜನರ ನಾಡಿಮಿಡಿತವನ್ನು ಅರಿತಿರುವ, ನಮ್ಮ ನಡುವೆ ನಡೆಯುವ ಘಟನೆಯನ್ನು ನಿರ್ಮಾಪಕರಿಗೆ ಹೊರೆಯಾಗದೆ ದೃಶ್ಯ ರೂಪಕ್ಕೆ ಇಳಿಸುವ ನಿರ್ದೇಶಕರಲ್ಲಿ ನಿಸ್ಸೀಮರು ಸಿಂಪಲ್ ಸುನಿ.. ಅಪಾರ ಭಾಷಾಭಿಮಾನ ಹೊಂದಿರುವ ಕೆಲಸಲ್ಲಿ ಬದ್ಧತೆ, ಹಾಗೂ ಶುದ್ಧತೆ ತೋರುವ ನಿರ್ದೇಶಕ ಸುನಿ ಈಗ ದೇವರು ರುಜು ಮಾಡಿದನು ಎನ್ನುತ್ತಿದ್ದಾರೆ. ಕುವೆಂಪುರವರ ಆಶೀರ್ವಾದದೊಂದಿಗೆ ಅವರ ದೇವರು ರುಜು ಮಾಡಿದನು ಎಂಬ ರಸವತ್ತಾದ ಪದ್ಯದ ಸಾಲನ್ನು ತಮ್ಮ ಮುಂದಿನ ಚಿತ್ರದ ಶೀರ್ಷಿಕೆಯಾಗಿಸಿದ್ದಾರೆ. 

ಸಿಂಪಲ್ ಸುನಿ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ದೇವರು ರುಜು ಮಾಡಿದನು ಚಿತ್ರ ಮೂಲಕ ಬೆಳ್ಳಿಪರದೆಗೆ ನವ ನಾಯಕನ್ನು ಪರಿಚಯಿಸಿದ್ದಾರೆ. ರಂಗಭೂಮಿ ಕಲಾವಿದರಾಗಿರುವ, ಅಪಾರ ಸಿನಿಮಾ ಪ್ರೀತಿ ಹೊಂದಿರುವ ವೀರಾಜ್ ಅವರು ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಅಡಿ ಇಡುತ್ತಿದ್ದಾರೆ. ಕೈಯಲ್ಲಿ ಗಿಟಾರ್ ಹಿಡಿದು ರಕ್ತಸಿಕ್ತರಾಗಿ ಕಾಣಿಸಿಕೊಂಡಿರುವ ವೀರಾಜ್ ಗೆ ಸುನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿಂಪಲ್ ಸುನಿ ಅವರ ಕಥನ, ವಚನ, ರಚನ ನಿರ್ದೇಶನ ಈ ಚಿತ್ರಕ್ಕಿದೆ.

ಇದನ್ನೂ ಓದಿ:12 ವರ್ಷಗಳ ಬಳಿಕ ತಾಯಿಯಾಗಲಿದ್ದಾರೆ ರಾಧಿಕಾ..! ಫ್ಯಾನ್ಸ್‌ ಖಷಿಗೆ ಪಾರವೇ ಇಲ್ಲ..

ಪುಟ್ಟದೊಂದು ಝಲಕ್ ಮೂಲಕ ಹೀರೋ ಹಾಗೂ ಟೈಟಲ್ ರಿವೀಲ್ ಮಾಡಲಾಗಿದೆ. ಈಗಾಗಲೇ ನಾಯಕ ವೀರಾಜ್ ಟೀಸರ್ ಶೂಟ್ ಮಾಡಲಾಗಿದೆ. ರಕ್ತಚರಿತ್ರೆ ಜೊತೆಗೆ ಸಂಗೀತದ ಕಥೆಯನ್ನು ದೇವರು ರುಜು ಮಾಡಿದನು ಸಿನಿಮಾ ಮೂಲಕ ಸುನಿ ತೆರೆಯಲ್ಲಿ ಅನಾವರಣ ಮಾಡಲು ಹೊರಟಿದ್ದಾರೆ. ಇದೇ ತಿಂಗಳ 20ರಂದು ಸಿನಿಮಾದ ಮುಹೂರ್ತ ನಡೆಯಲಿದ್ದು, ಮುಹೂರ್ತದ ನಂತರ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ. 

ಗ್ರೀನ್ ಹೌಸ್ ಮೂವೀಸ್ ಬ್ಯಾನರ್ ನಡಿಯಲ್ಲಿ ಬರ್ತಿರುವ ದೇವರು ರುಜು ಮಾಡಿದನು ಸಿನಿಮಾಗೆ ಗೋವಿಂದ್ ರಾಜ್ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ. ಜೆಜೆ ಮತ್ತು ಜೇಡ್ ಸ್ಯಾಂಡಿ ಸಂಗೀತ ನಿರ್ದೇಶನ, ಸಂತೋಷ್ ರೈ ಪತಾಜಿ ಛಾಯಾಗ್ರಹಣ, ವಿನಯ್ ಸಂಕಲನ ಚಿತ್ರಕ್ಕಿದೆ. ಬೆಂಗಳೂರು, ಉತ್ತರ ಕನ್ನಡ, ಗೋವಾ ಸುತ್ತಮುತ್ತ ದೇವರು ರುಜು ಮಾಡಿದನು ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News