ನೀವು ಪ್ರತಿನಿತ್ಯ ಅಡುಗೆಮನೆಯಲ್ಲಿ ಬಳಸುವ ಈ ವಸ್ತು ನಿಮ್ಮ ಪ್ರಾಣಕ್ಕೆ ಅಪಾಯಕಾರಿ..! ಕೂಡಲೆ ತೆಗೆದು ಬಿಸಾಕಿ

Kitchen hacks: ಪ್ರತಿ ಮನೆಯಲ್ಲಿಯೂ ಅಡುಗೆ ಮನೆ ಇದ್ದೇ ಇರುತ್ತದೆ, ಆಹಾರ ಬೇಯಿಸಲು ಅಡುಗೆ ಮನೆ ಎಷ್ಟು ಉಪಯುಕ್ತವೋ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೂಡ ಅಡುಗೆ ಮನೆ ಅಷ್ಟೆ ಪ್ರಮುಖ ಪಾತ್ರ ವಹಿಸುತ್ತದೆ. ಮನೆಯವರ ಆರೋಗ್ಯ ಅಡುಗೆ ಮನೆಯ ಮೇಲೆ ಆವಲಂಭಿತವಾಗಿರುತ್ತದೆ. ಅಡುಗೆ ಮನೆ ಸ್ವಚ್ಛವಾಗಿಲ್ಲದಿದ್ದರೆ ಬ್ಯಾಕ್ಟೀರಿಯಾ ಹರಡುವ ಅಪಾಯವಿದೆ.   

Written by - Zee Kannada News Desk | Last Updated : Oct 15, 2024, 02:14 PM IST
  • ಅಡುಗೆ ಮನೆ ಸ್ವಚ್ಛವಾಗಿಲ್ಲದಿದ್ದರೆ ಬ್ಯಾಕ್ಟೀರಿಯಾ ಹರಡುವ ಅಪಾಯವಿದೆ.
  • ಅನೇಕ ಜನರು ಅಡುಗೆಮನೆಯನ್ನು ಸ್ವಚ್ಛಗೊಳಿಸಲು ಸ್ಪಾಂಜ್ ಅಥವಾ ಸ್ಕ್ರಬ್‌ಗಳನ್ನು ಬಳಸುತ್ತಾರೆ.
  • ಹಾನಿಕಾರಕ ಬ್ಯಾಕ್ಟೀರಿಯಾಗಳು ಇವುಗಳ ಮೇಲೆ ಬೆಳೆಯಲು ಪ್ರಾರಂಭಿಸುತ್ತವೆ.
ನೀವು ಪ್ರತಿನಿತ್ಯ ಅಡುಗೆಮನೆಯಲ್ಲಿ ಬಳಸುವ ಈ ವಸ್ತು ನಿಮ್ಮ ಪ್ರಾಣಕ್ಕೆ ಅಪಾಯಕಾರಿ..! ಕೂಡಲೆ ತೆಗೆದು ಬಿಸಾಕಿ title=

Kitchen hacks: ಪ್ರತಿ ಮನೆಯಲ್ಲಿಯೂ ಅಡುಗೆ ಮನೆ ಇದ್ದೇ ಇರುತ್ತದೆ, ಆಹಾರ ಬೇಯಿಸಲು ಅಡುಗೆ ಮನೆ ಎಷ್ಟು ಉಪಯುಕ್ತವೋ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೂಡ ಅಡುಗೆ ಮನೆ ಅಷ್ಟೆ ಪ್ರಮುಖ ಪಾತ್ರ ವಹಿಸುತ್ತದೆ. ಮನೆಯವರ ಆರೋಗ್ಯ ಅಡುಗೆ ಮನೆಯ ಮೇಲೆ ಆವಲಂಭಿತವಾಗಿರುತ್ತದೆ. ಅಡುಗೆ ಮನೆ ಸ್ವಚ್ಛವಾಗಿಲ್ಲದಿದ್ದರೆ ಬ್ಯಾಕ್ಟೀರಿಯಾ ಹರಡುವ ಅಪಾಯವಿದೆ. 

ಪ್ರತಿದಿನ ಅಡುಗೆ ಮನೆಯನ್ನು ಸ್ವಚ್ಛಗೊಳಿಸುವುದರಿಂದ ರೋಗಾಣುಗಳು, ವೈರಸ್‌ಗಳು ಅಥವಾ ಬ್ಯಾಕ್ಟೀರಿಯಾಗಳನ್ನು ತೊಡೆದುಹಾಕಬಹುದು. ಆದರೆ ನೀವು ಅಡುಗೆ ಮನೆಯನ್ನು ಸ್ವಚ್ಛಗೊಳಿಸಲು ಏನನ್ನೂ ಬಲಸುತ್ತಿದ್ದೀರಿ ಎಂಬುದು ಕೂಡ ಅಷ್ಟೆ ಮುಖ್ಯ. ಅನೇಕ ಜನರು ಅಡುಗೆಮನೆಯನ್ನು ಸ್ವಚ್ಛಗೊಳಿಸಲು ಸ್ಪಾಂಜ್ ಅಥವಾ ಸ್ಕ್ರಬ್‌ಗಳನ್ನು ಬಳಸುತ್ತಾರೆ.

ಕಿಚನ್ ಸ್ಲ್ಯಾಬ್ಗಳು, ಗ್ಯಾಸ್ ಸ್ಟೌವ್ ಅಥವಾ ದೈನಂದಿನ ಪಾತ್ರೆಗಳನ್ನು ಸ್ಕ್ರಬ್ನಿಂದ ಸ್ವಚ್ಛಗೊಳಿಸಲಾಗುತ್ತದೆ. ಆದರೆ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಬಳಸುವ ಸ್ಪಾಂಜ್ ಅಥವಾ ಸ್ಕ್ರಬ್ ತುಂಬಾ ಅಪಾಯಕಾರಿ ಎಂದು ನಿಮಗೆ ಗೊತ್ತಾ..? ಜರ್ಮನಿಯ ಫರ್ಟ್‌ವಾಂಗೆನ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ 2017 ರ ಅಧ್ಯಯನದ ಪ್ರಕಾರ, ಕಿಚನ್ ಸ್ಕ್ರಬ್‌ಗಳು ಮತ್ತು ಸ್ಪಂಜುಗಳು ಟಾಯ್ಲೆಟ್ ಸೀಟ್‌ಗಳಿಗಿಂತ ಹೆಚ್ಚಿನ ಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ. ಅದಕ್ಕಾಗಿಯೇ ಸ್ಪಾಂಜ್ ಅಥವಾ ಸ್ಕ್ರಬ್ ಅನ್ನು ದೀರ್ಘಕಾಲದವರೆಗೆ ಬಳಸಬಾರದು ಎಂದು ತಜ್ಞರು ಹೇಳುತ್ತಾರೆ. ಇವುಗಳನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ, ಇದು ಜೀವಕ್ಕೆ ಅಪಾಯ ತರುತ್ತದೆ ಎಂದು ಎನ್ನುತ್ತಾರೆ ತಜ್ಞರು.

ಹೆಚ್ಚಿನ ಮನೆಗಳು ದಿನಕ್ಕೆ ಕನಿಷ್ಠ 2 ರಿಂದ 3 ಬಾರಿ ಸ್ಪಂಜ್‌ಗಳನ್ನು ಬಳಸುತ್ತಾರೆ. ಆದ್ದರಿಂದ ಸ್ಪಾಂಜ್ ಯಾವಾಗಲೂ ತೇವವಾಗಿರುತ್ತದೆ. ಒಣಗದೆ, ತೇವಾಂಶದಿಂದಾಗಿ, ಹಾನಿಕಾರಕ ಬ್ಯಾಕ್ಟೀರಿಯಾಗಳು ಇವುಗಳ ಮೇಲೆ ಬೆಳೆಯಲು ಪ್ರಾರಂಭಿಸುತ್ತವೆ. ಅಲ್ಲದೆ, ಆಹಾರದ ಸಣ್ಣ ಕಣಗಳು ಸ್ಪಾಂಜ್ ಅಥವಾ ಸ್ಕ್ರಬ್ನ ಒಳಭಾಗದಲ್ಲಿ ಸಿಲುಕಿಕೊಳ್ಳಬಹುದು.ಪರಿಣಾಮವಾಗಿ, ಬ್ಯಾಕ್ಟೀರಿಯಾಗಳು ಹೆಚ್ಚು ಬೆಳೆಯುತ್ತವೆ. ಇದರಿಂದ ರೋಗಗಳು ಬರುವ ಅಪಾಯ ಹೆಚ್ಚಿದೆ. 

ಸ್ಪಾಂಜ್‌ಗಳನ್ನು ಸರಿಯಾಗಿ ಬಳಸದೆ ಇದ್ದರೆ, ಬ್ಯಾಕ್ಟೀರಿಯಾಗಳು ಹೆಚ್ಚಾಗಬಹುದು. ಒಂದು ರಿಸರ್ಚ್‌ ವರದಿಯ ಪ್ರಕಾರ, ಪ್ರತಿ ಸ್ಪಂಜ್‌ನಲ್ಲಿ 54 ಬಿಲಿಯನ್‌ ಬ್ಯಾಕ್ಟೀರಿಯಾಗಳಿರುತ್ತವೆ. ಇದರಿಂದ ಬಲಸಿದ ನMತರ ಸ್ಪಾಂಜ್‌ಗಳನ್ನು ಸ್ವಚ್ಚಗೊಳಿಸುವುದು ಕೂಡ ಅಷ್ಟೆ ಮುಖ್ಯ. ಇಲ್ಲವಾದಲ್ಲಿ ಈ ರೀತಿ ಕಲುಶಿತವಾದ ಸ್ಪಂಜ್‌ಗಳ ಕಾರಣ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಮೂತ್ರಪಿಂಡ ವೈಫಲ್ಯದಂತಹ ದೊಡ್ಡ ಆರೋಗ್ಯ ಸಮಸ್ಯೆಗಳು ಕೂಡ ಇದರಿಂದ ಎದುರಾಗಬಹುದು. 

ಅಡುಗೆಮನೆಯಲ್ಲಿ ದೀರ್ಘಕಾಲದವರೆಗೆ ಸ್ಕ್ರಬ್ ಅಥವಾ ಸ್ಪಾಂಜ್ವನ್ನು ಬಳಸಬೇಡಿ. ದೀರ್ಘಕಾಲದ ಬಳಕೆಯು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗಬಹುದು. ವಾಂತಿ, ಅತಿಸಾರ ಅಥವಾ ಹೊಟ್ಟೆಯ ಸಮಸ್ಯೆಗಳು ಇದರಿಂದ ಉಂಟಾಗತ್ತದೆ. ಬ್ಯಾಕ್ಟೀರಿಯಾವನ್ನು ತಡೆಗಟ್ಟಲು ಕಿಚನ್ ಸ್ಪಂಜುಗಳನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು. ಪ್ರತಿ ಮೂರು ವಾರಗಳಿಗೊಮ್ಮೆ ಸ್ಪಂಜ್‌ಗಳನ್ನು ಬದಲಾಯಿಸಬೇಕು. ತೇವಾಂಶ ಇರುವ ಜಾಗಗಳಿಂದ ಸ್ಪಂಜ್‌ಗಳನ್ನು ದೂರವಿಡಬೇಕು. ಸ್ಪಂಜ್‌ಗಳನ್ನು ಸ್ವಚ್ಚಗೊಳಿಸಿದ ನಂತರ ಅವುಗಳನ್ನು ಸೂರ್ಯನ ಬೆಳಕಿನಲ್ಲಿ ಒಣಗಲು ಇಡಬೇಕು. 

ಸೂಚನೆ:  ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News