Viral Video: ನಡು ರಸ್ತೆಯಲ್ಲೇ ಮರಿಗಳಿಗೆ ಜನ್ಮ ನೀಡಿದ ಹಾವು! ಮೈ ಜುಮ್ಮೆನಿಸುವ ವಿಡಿಯೋ ಒಮ್ಮೆ ನೋಡಿ

snake giving birth to babies: ಸ್ನೇಕ್ ಸೈನ್ಸ್ ಪ್ರಕಾರ.. ಪ್ರಪಂಚದ ಎಲ್ಲಾ ಹಾವುಗಳು ಬಹುತೇಕ ಒಂದೇ ರೀತಿಯ ದೇಹದ ಆಕಾರವನ್ನು ಹೊಂದಿವೆ. ಅಂತಹ ಹಾವುಗಳಲ್ಲಿ ಸುಮಾರು 3,000 ಜಾತಿಗಳಿವೆ. ಹಾವುಗಳ ಸಂತಾನೋತ್ಪತ್ತಿ ಕೂಡ ಹಾವಿನಿಂದ ಹಾವಿಗೆ ಬದಲಾಗುತ್ತದೆ ಎಂಬುದು ಹಲವರನ್ನು ಅಚ್ಚರಿಗೊಳಿಸುವ ಇನ್ನೊಂದು ಸಂಗತಿ. 

Written by - Savita M B | Last Updated : Oct 11, 2024, 09:33 AM IST
  • ಹಾವುಗಳು ಸಾಮಾನ್ಯವಾಗಿ ಮೊಟ್ಟೆಯಿಡುವ ಮೂಲಕ ಮಾತ್ರ ಜನ್ಮ ನೀಡುತ್ತವೆ ಎಂದು ಹಲವರು ಭಾವಿಸುತ್ತಾರೆ.
  • ವಾಸ್ತವವಾಗಿ ಕೆಲವು ಜಾತಿಯ ಹಾವುಗಳು ಮೊಟ್ಟೆ ಇಡುವುದಿಲ್ಲ..
Viral Video: ನಡು ರಸ್ತೆಯಲ್ಲೇ ಮರಿಗಳಿಗೆ ಜನ್ಮ ನೀಡಿದ ಹಾವು! ಮೈ ಜುಮ್ಮೆನಿಸುವ ವಿಡಿಯೋ ಒಮ್ಮೆ ನೋಡಿ  title=

Snake Viral Video: ಹಾವುಗಳು ಸಾಮಾನ್ಯವಾಗಿ ಮೊಟ್ಟೆಯಿಡುವ ಮೂಲಕ ಮಾತ್ರ ಜನ್ಮ ನೀಡುತ್ತವೆ ಎಂದು ಹಲವರು ಭಾವಿಸುತ್ತಾರೆ. ಆದರೆ ವಾಸ್ತವವಾಗಿ ಕೆಲವು ಜಾತಿಯ ಹಾವುಗಳು ಮೊಟ್ಟೆ ಇಡುವುದಿಲ್ಲ.. ನೇರವಾಗಿ ಮರಿಗಳಿಗೆ ಜನ್ಮ ನೀಡುತ್ತವೆ. ಹಾವು ಮರಿಗಳಿಗೆ ಜನ್ಮ ನೀಡುವುದನ್ನು ನೀವು ಎಂದಾದರೂ ನೋಡಿದ್ದೀರಾ ? ಅನೇಕ ಹಾವುಗಳ ಮೊಟ್ಟೆ ಒಡೆದ ನಂತರ ಜನಿಸಿದ ಶಿಶುಗಳನ್ನು ನೋಡಿದ್ದೇವೆ. ಆದರೆ, ಹಾವುಗಳು ಮರಿಗಳಿವೆ ಜನ್ಮ ನೀಡುವುದನ್ನು ನೋಡಲೇ ಇಲ್ಲ. ಅಂಥವರಿಗಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ಹಾವಿನ ವಿಡಿಯೋ ನೋಡಿದ್ರೆ ಖಂಡಿತ ಶಾಕ್ ಆಗುತ್ತೀರಿ.

ಇದನ್ನೂ ಓದಿ-ಹೋಟೆಲ್‌ನಲ್ಲಿ ಸರ್ವರ್‌ ಆಗಿ ಕೆಲಸ ಮಾಡಿದ್ದ ಈಕೆ ಇಂದು ತನ್ನ ಸೌಂದರ್ಯದಿಂದ ಇಂಡಸ್ಟ್ರಿಯನ್ನು ಆಳುತ್ತಿರುವ ಬ್ಯೂಟಿ... ಯಾರು ಗೊತ್ತಾ..?

ಹಾವುಗಳು ಅನೇಕ ಜನರಿಗೆ ಆಸಕ್ತಿಯನ್ನುಂಟುಮಾಡುತ್ತವೆ. ಈ ವಿಡಿಯೋದಲ್ಲಿ ಹಾವು ಮರಿಗಳನ್ನು ಹಾಕುತ್ತಿರುವ ದೃಶ್ಯಕ್ಕೆ ನೆಟ್ಟಿಗರಿಂದ ವಿಶೇಷ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅನೇಕರು ಹಾವುಗಳ ವಿಜ್ಞಾನವನ್ನು ಕಲಿಯಲು ಆಸಕ್ತಿ ಹೊಂದಿದ್ದಾರೆ. ಹಾವುಗಳು ಯಾವಾಗ, ಏಕೆ ಮತ್ತು ಹೇಗೆ ವರ್ತಿಸುತ್ತವೆ ಎಂಬುದರ ಬಗ್ಗೆ ಅನೇಕರಿಗೆ ಅನುಮಾನಗಳಿವೆ. ಹಾಗಾಗಿಯೇ ಹಾವುಗಳಿಗೆ ಸಂಬಂಧಿಸಿದ ವೀಡಿಯೋಗಳಿಗೆ ಅಂತರ್ಜಾಲದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ವಿಡಿಯೋವನ್ನು ಕೂಡ 2.74 ಕೋಟಿ ಜನರು ವೀಕ್ಷಿಸಿದ್ದು, 1 ಲಕ್ಷ 25 ಸಾವಿರ ಮಂದಿ ಲೈಕ್ ಮಾಡಿದ್ದಾರೆ.

 

ಇದನ್ನೂ ಓದಿ-ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್..! ಶೀಘ್ರದಲ್ಲೇ ಈ ಖ್ಯಾತ ನಟಿಯನ್ನು ಮದುವೆಯಾಗಲಿರುವ ಡಾರ್ಲಿಂಗ್!?

ಈ ವೈರಲ್ ವಿಡಿಯೋದಲ್ಲಿ ರಸ್ತೆಯಲ್ಲೇ ಹಾವೊಂದು ಮರಿಗಳಿಗೆ ಜನ್ಮ ನೀಡಿದೆ. ಆ ವೇಳೆ ಹಾವು ಹೆಣಗಾಡುತ್ತಿರುವುದು ಕಾಣಿಸಿತು. ಮತ್ತೊಂದೆಡೆ, ಈ ವೀಡಿಯೊದಲ್ಲಿ, ಹಾವಿನ ಬಾಲದ ಕೆಳಗಿನಿಂದ ಮರಿ ಹಾವುಗಳು ಹೊರಬರುವುದನ್ನು ಕಾಣಬಹುದು. ಈ ದೃಶ್ಯವನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಅಲ್ಲಿಯೇ ನಿಂತು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಲು ಆರಂಭಿಸಿದರು. ಆದರೆ ಯೂಟ್ಯೂಬರ್ ಒಬ್ಬರು ಈ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.. ಈಗ ಆ ವಿಡಿಯೋ ವೈರಲ್ ಆಗುತ್ತಿದೆ. ಅನೇಕ ನೆಟಿಜನ್‌ಗಳು ಈ ವಿಡಿಯೋವನ್ನು ಆಸಕ್ತಿಯಿಂದ ವೀಕ್ಷಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News