ನಿಮ್ಮ ಕಿವಿ ಸ್ವಚ್ಛಗೊಳಿಸಲು ʼಇಯರ್‌ ಬಡ್ಸ್‌ʼ ಬಳಸುತ್ತೀರಾ?; ಹಾಗಾದ್ರೆ ತಪ್ಪದೇ ಈ ಸುದ್ದಿಯನ್ನು ಓದಿರಿ!

Cotton ear buds side effects: ಕಿವಿಯನ್ನು ಸ್ವಚ್ಛಗೊಳಿಸಲು ಹತ್ತಿಯನ್ನು ಬಳಸಬಾರದು ಏಕೆಂದರೆ ಅದು ಕಿವಿ ಕಾಲುವೆಯನ್ನು ಹಾನಿಗೊಳಿಸಬಹುದು ಮತ್ತು ಕಿರಿಕಿರಿಗೊಳಿಸಬಹುದು.

Cotton ear buds side effects: ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಕಿವಿಯೂ ಒಂದು. ಕಿವಿಯ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ವಿಶೇಷ ಕಾಳಜಿ ವಹಿಸಬೇಕು. ಇಯರ್‌ ಬಡ್ಸ್‌ ಕಿವಿಯಲ್ಲಿರುವ ಬಾಹ್ಯ ಧೂಳು, ಮಣ್ಣು ಮತ್ತು ಬ್ಯಾಕ್ಟೀರಿಯಾಗಳಿಂದ ರಕ್ಷಿಸಲು ಬಳಸಲಾಗುತ್ತದೆ. ಕಾಲಕಾಲಕ್ಕೆ ಕಿವಿಯನ್ನು ಸ್ವಚ್ಛಗೊಳಿಸದಿದ್ದರೆ ಶ್ರವಣ ಸಮಸ್ಯೆ ಉಂಟುಮಾಡಬಹುದು. ಕಿವಿಯಲ್ಲಿನ ಕೊಳಕನ್ನು ಸ್ವಚ್ಛಗೊಳಿಸಲು ಅನೇಕ ಮನೆಮದ್ದುಗಳಿವೆ. ಇವುಗಳಿಂದ ಕಿವಿಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಕಿವಿಯಲ್ಲಿನ ಕೊಳೆಯಿಂದ ಕಿವಿಯ ತಮಟೆ ಮತ್ತು ಒಳಗಿನ ಭಾಗವನ್ನು ರಕ್ಷಿಸಿಕೊಳ್ಳಬಹುದು. ಕಿವಿಗಳನ್ನು ಸ್ವಚ್ಛಗೊಳಿಸುವಾಗ ಜಾಗರೂಕರಾಗಿರುವುದು ಬಹಳ ಮುಖ್ಯ. ಕಿವಿಗಳನ್ನು ಸ್ವಚ್ಛಗೊಳಿಸಲು ಈ ಪರಿಹಾರ ಕ್ರಮಗಳನ್ನು ಅನುಸರಿಸಿರಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಕಿವಿಯನ್ನು ಸ್ವಚ್ಛಗೊಳಿಸಲು ಇಯರ್‌ ಬಡ್ಸ್‌ ಅಥವಾ ಹತ್ತಿಯನ್ನು ಬಳಸಬಾರದು ಏಕೆಂದರೆ ಅದು ಕಿವಿ ಕಾಲುವೆಯನ್ನು ಹಾನಿಗೊಳಿಸಬಹುದು ಮತ್ತು ಕಿರಿಕಿರಿಗೊಳಿಸಬಹುದು.

2 /5

ಹೆಲ್ತ್ ಲೈನ್ ಪ್ರಕಾರ, ನೀವು ಇಯರ್ವ್ಯಾಕ್ಸ್ ಅನ್ನು ತೆಗೆದುಹಾಕಲು ಅಡುಗೆ ಸೋಡಾವನ್ನು ಬಳಸಬಹುದು, ಅದಕ್ಕಾಗಿ ಅರ್ಧ ಕಪ್ ಉಗುರುಬೆಚ್ಚಗಿನ ನೀರಿನಲ್ಲಿ ಅರ್ಧ ಟೀಸ್ಪೂನ್ ಅಡುಗೆ ಸೋಡಾವನ್ನು ಬೆರೆಸಿ ಮತ್ತು ಅದನ್ನು ಡ್ರಾಪರ್ ಬಾಟಲಿಯಲ್ಲಿ ಇರಿಸಿ. ನೀವು ಒಮ್ಮೆಗೆ ಕಿವಿಯಲ್ಲಿ 5 ರಿಂದ 10 ಹನಿಗಳನ್ನು ಹಾಕಬಹುದು ಮತ್ತು ಒಂದು ಗಂಟೆಯ ನಂತರ ಕಿವಿಯನ್ನು ಶುದ್ಧ ನೀರಿನಿಂದ ತೊಳೆಯಿರಿ.

3 /5

ಇಯರ್ ವ್ಯಾಕ್ಸ್ ಅನ್ನು ತೆಗೆದುಹಾಕಲು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಬಳಸಬಹುದು. ಕಿವಿಯಲ್ಲಿ 5 ರಿಂದ 10 ಹನಿಗಳನ್ನು ಹಾಕಿ ಮತ್ತು 5 ನಿಮಿಷಗಳ ಕಾಲ ಕುತ್ತಿಗೆಯನ್ನು ಪಕ್ಕಕ್ಕೆ ಬಾಗಿಸಿ. ಹೈಡ್ರೋಜನ್ ಪೆರಾಕ್ಸೈಡ್ ಅನ್ನು ವಾರಕ್ಕೊಮ್ಮೆ ಬಳಸಬಹುದು.

4 /5

ಆಯಿಲ್ ಬಳಸಿ ಇಯರ್ ವ್ಯಾಕ್ಸ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಮೇಣವನ್ನು ಮೃದುಗೊಳಿಸಲು ತೈಲವು ಕೆಲಸ ಮಾಡುತ್ತದೆ. ಅದಕ್ಕಾಗಿ ನೀವು ಬೇಬಿ ಆಯಿಲ್, ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಬಳಸಬಹುದು.

5 /5

ಯಾವುದೇ ಎಣ್ಣೆ ತೆಗೆದುಕೊಂಡು, ಅದನ್ನು ಸ್ವಲ್ಪ ಬಿಸಿ ಮಾಡಿ ಡ್ರಾಪರ್ ಬಾಟಲಿಯಲ್ಲಿ ತುಂಬಿಸಿ. ಅದನ್ನು ಕಿವಿಯಲ್ಲಿ ಹಾಕಿ 5 ನಿಮಿಷಗಳ ಕಾಲ ಓರೆಯಾಗಿಡಬೇಕು. ಆದರೆ ಯಾವುದೇ ಕಾರಣಕ್ಕೂ ಎಣ್ಣೆಯು ತುಂಬಾ ಬಿಸಿಯಾಗಿರಬಾರದು. ನೀವು ಇದನ್ನು ಪ್ರತಿದಿನವೂ ಮಾಡಬಹುದು.