Election Result 2024: ಚೊಚ್ಚಲ ಚುನಾವಣಾ ʼಕುಸ್ತಿʼಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ ವಿನೇಶ್ ಫೋಗಟ್ ಹೇಳಿದ್ದೇನು?

Election Result 2024: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿನೇಶ್‌ ಪೋಗಟ್‌ ಒಟ್ಟು 65,080 ಮತಗಳನ್ನು ಪಡೆದು 6,015 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಯೋಗೇಶ್‌ ಕುಮಾರ್‌ 59,065 ಮತಗಳನ್ನು ಪಡೆದು ನಿರಾಸೆ ಅನುಭವಿಸಿದ್ದಾರೆ. 

Written by - Puttaraj K Alur | Last Updated : Oct 8, 2024, 05:03 PM IST
  • ಚೊಚ್ಚಲ ಚುನಾವಣಾ ʼಕುಸ್ತಿʼಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ ವಿನೇಶ್ ಫೋಗಟ್
  • ನಾನು ಹೊಸ ಇನ್ನಿಂಗ್ಸ್ ಪ್ರಾರಂಭಿಸುತ್ತಿದ್ದೇನೆ, ಸತ್ಯಕ್ಕೆ ಜಯವಾಗಿದೆʼ ಎಂದ ವಿನೇಶ್‌
  • ನಾನು ಕ್ರೀಡಾ ಜೀವನದಲ್ಲಿ ಅನುಭವಿಸಿದ ನೋವು ಬೇರೆ ಕ್ರೀಡಾಪಟುಗಳು ಅನುಭವಿಸುವುದು ಬೇಡ
Election Result 2024: ಚೊಚ್ಚಲ ಚುನಾವಣಾ ʼಕುಸ್ತಿʼಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ ವಿನೇಶ್ ಫೋಗಟ್ ಹೇಳಿದ್ದೇನು? title=
ಚುನಾವಣಾ ʼಕುಸ್ತಿʼ ಗೆದ್ದ ವಿನೇಶ್!

Election Result 2024: ತಮ್ಮ ಚೊಚ್ಚಲ ಚುನಾವಣಾ ʼಕುಸ್ತಿʼಯಲ್ಲೇ ವಿನೇಶ್ ಫೋಗಟ್ ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಅವರು, ʼಸತ್ಯಕ್ಕೆ ಜಯವಾಗಿದೆʼ ಎಂದು ಹೇಳಿದ್ದಾರೆ. 

ಹರಿಯಾಣ ಚುನಾವಣೆಯ ಜೂಲಾನಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಕುಸ್ತಿಪಟು ವಿನೇಶ್ ಫೋಗಟ್ 5 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಫ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಫೈನಲ್‌ ತಲುಪಿದ್ದ ಅವರು ಅನರ್ಹಗೊಳ್ಳುವ ಮೂಲಕ ನಿರಾಸೆ ಅನುಭವಿಸಿದ್ದರು. ಬಳಿಕ ಸೆ.4ರಂದು ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದ ವಿನೇಶ್ ಚುನಾವಣಾ ಕುಸ್ತಿಯಲ್ಲಿ ತನ್ನ ಚೊಚ್ಚಲ ಗೆಲುವು ಸಾಧಿಸಿದ್ದಾರೆ.

ಚೊಚ್ಚಲ ಗೆಲುವು ಕಂಡ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ವಿನೇಶ್‌, ನಾನು ಹೊಸ ಇನ್ನಿಂಗ್ಸ್ ಪ್ರಾರಂಭಿಸುತ್ತಿದ್ದೇನೆ. ನಾನು ನನ್ನ ಕ್ರೀಡಾ ಜೀವನದಲ್ಲಿ ಅನುಭವಿಸಿದ ನೋವನ್ನು ಬೇರೆ ಕ್ರೀಡಾಪಟುಗಳು ಅನುಭವಿಸುವುದು ಬೇಡ ಎಂದು ಬಯಸುತ್ತೇನೆ ಎಂದರು.

ಇದನ್ನೂ ಓದಿ: Jammu Kashmir Election: ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್‌-ಎನ್‌ಸಿ ಮೈತ್ರಿಗೆ ವಿಜಯಮಾಲೆ: ಕಣಿವೆ ರಾಜ್ಯದ ಗದ್ದುಗೆ ಏರಲಿರುವ ನೂತನ ಸಿಎಂ ಇವರೇ!

ನನ್ನ ರಾಜಕೀಯ ಪ್ರವೇಶಕ್ಕೆ ಅನುವು ಮಾಡಿಕೊಟ್ಟ ಕಾಂಗ್ರೆಸ್ ಪಕ್ಷಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಮ್ಮ ಸಮಯ ಸರಿಯಿಲ್ಲದೇ ಇರುವಾಗ ಮಾತ್ರ ನಮ್ಮ ಜೊತೆ ಯಾರು ನಿಂತಿದ್ದಾರೆ ಎಂದು ಗೊತ್ತಾಗುತ್ತದೆ. ಬಿಜೆಪಿ (BJP) ಪಕ್ಷವನ್ನು ಹೊರತುಪಡಿಸಿ ಇತರ ಎಲ್ಲಾ ಪಕ್ಷಗಳು ನನ್ನ ನೋವನ್ನು ಹಾಗೂ ನನ್ನ ಕಣ್ಣೀರನ್ನು ಅರ್ಥಮಾಡಿಕೊಂಡಿದ್ದವು ಎಂದರು.

6 ಸಾವಿರ ಮತಗಳಿಂದ ಗೆಲುವು!

ಅ.5ರಂದು ನಡೆದ ಹರಿಯಾಣ ಚುನಾವಣೆಯ ಮತ ಎಣಿಕೆ ಮಂಗಳವಾರ(ಅ.8) ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಯಿತು. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿನ ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ, ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ ಬಹುಮತವನ್ನು ದಾಟಿ 49 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ಕಾಂಗ್ರೆಸ್ 36 ಸ್ಥಾನಗಳಲ್ಲಿದ್ದು, 13 ಸ್ಥಾನಗಳಿಂದ ಹಿನ್ನಡೆಯಲ್ಲಿದೆ. ಜೂಲಾನಾ ಕ್ಷೇತ್ರದಿಂದ ವಿನೇಶ್ ಫೋಗಟ್ ಗೆಲುವು ಸಾಧಿಸಿದ್ದಾರೆ. ಹರಿಯಾಣದಲ್ಲಿ ಬಿಜೆಪಿಯು 3ನೇ ಅವಧಿಗೆ ಅಧಿಕಾರ ರಚಿಸಲು ಸಿದ್ಧವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪುನರಾಗಮನ ಊಹಿಸಿದ್ದ ಎಕ್ಸಿಟ್ ಪೋಲ್‌ನ ಫಲಿತಾಂಶ ಸುಳ್ಳಾಗಿವೆ.

ಬಿಜೆಪಿ ಅಭ್ಯರ್ಥಿ ಯೋಗೇಶ್ ಕುಮಾರ್ ಮತ್ತು ವಿನೇಶ್ ಫೋಗಟ್ ಮಧ್ಯೆ ನೇರಾನೇರ ಪೈಪೋಟಿ ಇತ್ತು. ಆರಂಭದ ಮತ ಎಣಿಕೆಯಲ್ಲಿ ವಿನೇಶ್ ಫೋಗಟ್ ಅವರಿಗೆ ಮುನ್ನಡೆ ಸಿಕ್ಕಿದರೆ ನಂತರ ಯೋಗೇಶ್ ಕುಮಾರ್ ಅವರಿಗೆ ಮುನ್ನಡೆ ಸಿಕ್ಕಿತ್ತು. ಅಂತಿಮ ಸುತ್ತುಗಳ ಮತ ಎಣಿಕೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತಗಳು ಬಿದ್ದ ಪರಿಣಾಮ ವಿನೇಶ್ ಫೋಗಟ್ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ. ವಿನೇಶ್‌ ಒಟ್ಟು 65,080 ಮತಗಳನ್ನು ಪಡೆದು 6,015 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಯೋಗೇಶ್‌ ಕುಮಾರ್‌ 59,065 ಮತಗಳನ್ನು ಪಡೆದು ನಿರಾಸೆ ಅನುಭವಿಸಿದ್ದಾರೆ. 

ಇದನ್ನೂ ಓದಿ: ಚುನಾವಣಾ ರಣಕಣದಲ್ಲಿ ಗೆದ್ದು ಬೀಗಿದ ವಿನೇಶ್ ಫೋಗಟ್ !ಬಿಜೆಪಿ ಅಭ್ಯರ್ಥಿಗೆ ತೀರಾ ಮುಖಭಂಗ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News