6 ಸಾವಿರ ರೂಪಾಯಿಗೆ Smart Tv!ಫ್ಲಿಪ್‌ಕಾರ್ಟ್ ಸೇಲ್ ನ ಆಫರ್, ಡಿಸ್ಕೌಂಟ್ ಬಗ್ಗೆ ಫುಲ್ ಡಿಟೇಲ್ಸ್ !

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ಸ್ಮಾರ್ಟ್ ಟಿವಿಯನ್ನು ಕಡಿಮೆ ಬೆಲೆಗೆ ಖರೀದಿಸುವ ಅವಕಾಶ ಸಿಗಲಿದೆ.  

Written by - Ranjitha R K | Last Updated : Sep 26, 2024, 12:44 PM IST
  • ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಶೀಘ್ರದಲ್ಲೇ ಪ್ರಾರಂಭ
  • ಸ್ಮಾರ್ಟ್ ಟಿವಿ ಮೇಲೆ ಸಿಗುತ್ತಿದೆ ಭಾರೀ ರಿಯಾಯಿತಿ
  • 6 ಸಾವಿರ ರೂಪಾಯಿಗೆ Smart Tv ಖರೀದಿ ಅವಕಾಶ
6 ಸಾವಿರ ರೂಪಾಯಿಗೆ Smart Tv!ಫ್ಲಿಪ್‌ಕಾರ್ಟ್ ಸೇಲ್ ನ ಆಫರ್, ಡಿಸ್ಕೌಂಟ್ ಬಗ್ಗೆ ಫುಲ್ ಡಿಟೇಲ್ಸ್ ! title=

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಅತ್ಯಂತ ಅಗ್ಗದ ಬೆಲೆಗೆ ಸ್ಮಾರ್ಟ್ ಟಿವಿಗಳು ಇಲ್ಲಿ ಲಭ್ಯವಿರುತ್ತವೆ.ಸಣ್ಣ, ಮಧ್ಯಮ ಅಥವಾ ದೊಡ್ಡ ಟಿವಿ ಯಾವುದನ್ನು ಬೇಕಾದರೂ ಈ ಸೇಲ್ ನಲ್ಲಿ ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಥಾಮ್ಸನ್, ಇನ್ಫಿನಿಕ್ಸ್, ಕೊಡಾಕ್, ಫಾಕ್ಸ್‌ಸ್ಕಿ ಮತ್ತು ಮಾರ್ಕ್‌ನಂತಹ ಉತ್ತಮ ಬ್ರಾಂಡ್‌ಗಳ ಟಿವಿಗಳು ಕಡಿಮೆ ಬೆಲೆಯಲ್ಲಿ ಲಭ್ಯವಿರುತ್ತವೆ.ಈ ಸೇಲ್ ನಲ್ಲಿ 6 ಸಾವಿರ ರೂಪಾಯಿಗೆ ಸ್ಮಾರ್ಟ್ ಟಿವಿ ಖರೀದಿಸಬಹುದು. 

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಆಫರ್‌ಗಳು :
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ನಲ್ಲಿ ಅನೇಕ ಕಂಪನಿಗಳ ಉತ್ಪನ್ನಗಳ ಮೇಲೆ ಉತ್ತಮ ಆಫರ್ ಸಿಗುತ್ತಿದೆ.ಥಾಮ್ಸನ್ ಸ್ಮಾರ್ಟ್ ಟಿವಿಗಳು ಈ ಸೇಲ್ ನಲ್ಲಿ 6,000 ರೂ.ಗಿಂತ ಕಡಿಮೆ ಲಭ್ಯವಿರಲಿದೆ. ಆದರೆ,ಇದೊಂದೇ ಕಂಪನಿ ಅಲ್ಲ, Infinix, Kodak ಮತ್ತು Mark ನಂತಹ ಕಂಪನಿಗಳು ಸಹ ಉತ್ತಮ ಆಫರ್  ನೀಡುತ್ತಿವೆ.

ಇದನ್ನೂ ಓದಿ : Amazon Great Indian Festival Sale: 15 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಬ್ರ್ಯಾಂಡೆಡ್ ಸ್ಮಾರ್ಟ್‌ಫೋನ್‌ಗಳು ಲಭ್ಯ

ಥಾಮ್ಸನ್ ಸ್ಮಾರ್ಟ್ ಟಿವಿ :
ಥಾಮ್ಸನ್ ಕಂಪನಿಯು ತನ್ನ 24 Alpha001 ಸ್ಮಾರ್ಟ್ ಟಿವಿಯನ್ನು ಕೇವಲ 5,999 ರೂಗಳಿಗೆ ಮಾರಾಟ ಮಾಡುತ್ತಿದೆ.ಸ್ಮಾರ್ಟ್ ಟಿವಿ ಹೊಂದಿರಬೇಕಾದ ಎಲ್ಲಾ ಅಗತ್ಯ ವೈಶಿಷ್ಟ್ಯಗಳನ್ನು ಈ  ಟಿವಿ ಹೊಂದಿದೆ.ಬ್ಯಾಂಕ್ ಕೊಡುಗೆಗಳ ಲಾಭವನ್ನು ಪಡೆದರೆ, ಈ ಟಿವಿಯನ್ನು ಇನ್ನೂ ಅಗ್ಗದ ಬೆಲೆಗೆ ಖರೀದಿಸಬಹುದು.

55 ಪ್ರತಿಶತ ರಿಯಾಯಿತಿಯಲ್ಲಿ Infinix Smart TV : 
Infinix ಕಂಪನಿಯು ತನ್ನ HD ರೆಡಿ LED ಸ್ಮಾರ್ಟ್ ಲಿನಕ್ಸ್ ಟಿವಿ 2024 ಆವೃತ್ತಿಯಲ್ಲಿ 55% ರಷ್ಟು ರಿಯಾಯಿತಿಯನ್ನು ನೀಡುತ್ತಿದೆ.ಈ ಟಿವಿಯ ಬೆಲೆ 16,999 ರೂ.ಗೆ ಇತ್ತು.ಆದರೆ ರಿಯಾಯಿತಿ ಬಳಿಕ ಈ ಟಿವಿಯನ್ನು ಕೇವಲ 7,500 ರೂ.ಗೆ ಖರೀದಿಸಬಹುದು.ಬ್ಯಾಂಕ್ ಕೊಡುಗೆಗಳ ಲಾಭ ಪಡೆಯುವುದಾದರೆ ಇನ್ನೂ ಅಗ್ಗವಾಗಿ ಖರೀದಿಸಬಹುದು.

ಇದನ್ನೂ ಓದಿ : iPhone 15 @ 4_,999 !ಅಗ್ಗದ ದರದಲ್ಲಿ ಬಿಕರಿಯಾಗುತ್ತಿದೆ ಐಫೋನ್ 15 : ಮುಗಿ ಬಿದ್ದು ಬುಕ್ ಮಾಡುತ್ತಿರುವ ಗ್ರಾಹಕರು !

ಕೊಡಾಕ್‌ ಟಿವಿ ಮೇಲೇ 46 ಪ್ರತಿಶತ ರಿಯಾಯಿತಿ :
ಕೊಡಾಕ್ ಕಂಪನಿಯು ತನ್ನ ಹೊಸ ಸ್ಮಾರ್ಟ್ ಟಿವಿ 2024 ಮಾದರಿಯಲ್ಲಿ ಭಾರೀ  ರಿಯಾಯಿತಿಯನ್ನು ನೀಡುತ್ತಿದೆ.ಈ ಹಿಂದೆ ಈ ಟಿವಿಯ ಬೆಲೆ 14,999 ರೂಪಾಯಿ ಆಗಿತ್ತು.ಆದರೆ ಡಿಸ್ಕೌಂಟ್ ನಂತರ ಈ ಟಿವಿಯನ್ನು ಕೇವಲ 7,999 ರೂಪಾಯಿಗೆ ಖರೀದಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News