ನವದೆಹಲಿ: ಖ್ಯಾತ ಬಾಲಿವುಡ್ ಬೆಡಗಿ ನೇಹಾ ಧೂಪಿಯಾ ತಮ್ಮ ಬಿಂದಾಸ್ ಜೀವನಶೈಲಿಗೆ ಹೆಸರುವಾಸಿ. ಯಾವುದೇ ಒಂದು ವಿಷಯದ ಮೇಲೆ ಹಿಂಜರಿಯದೆ ಹೇಳಿಕೆ ನೀಡುವ ಬಾಲಿವುಡ್ ಬೆಡಗಿಯರಲ್ಲಿ ನೇಹಾ ಕೂಡ ಒಬ್ಬರು. ಆದರೆ, ಈ ಬಾರಿ ಅವರು ನೀಡಿರುವ ಹೇಳಿಕೆ ಅವರಿಗೆ ಭಾರಿ ಆಗಿ ಪರಿಣಮಿಸಿದೆ. ನೇಹಾ ನೀಡಿರುವ ಒಂದು ಹೇಳಿಕೆಗೆ ನೆಟ್ಟಿಗರು ಅವರನ್ನು ಭಾರಿ ಟ್ರೊಲ್ ಮಾಡಿದ್ದಾರೆ. ಈ ಬಾರಿಯ Mtv Roadies ಕಾರ್ಯಕ್ರಮದಲ್ಲಿ ನೇಹಾ ಓರ್ವ ಜಾಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮದ ಆಡಿಶನ್ ವೊಂದರ ವೇಳೆ ಪ್ರೀತಿಯಲ್ಲಿ ಪೆಟ್ಟು ತಿಂದ ಓರ್ವ ಸ್ಪರ್ಧಿಯ ಕುರಿತು ನೇಹಾ ನೀಡಿರುವ ಒಂದು ಹೇಳಿಕೆ ಭಾರಿ ಟ್ರೋಲ್ ಗೆ ಒಳಗಾಗಿದೆ.
ಈ ಕಾರ್ಯಕ್ರಮದ ಅಡಿಶನ್ ನಲ್ಲಿ ಪಾಲ್ಗೊಂಡ ಯುವಕನೋರ್ವ ತನ್ನ ಗರ್ಲ್ ಫ್ರೆಂಡ್ ಕುರಿತು ಹೇಳಿಕೆ ನೀಡಿದ್ದು, ತನ್ನ ಗರ್ಲ್ ಫ್ರೆಂಡ್ ತನ್ನನ್ನು ಬಿಟ್ಟು ಇತರೆ ಐದು ಜನ ಬಾಯ್ ಫ್ರೆಂಡ್ ಗಳನ್ನು ಹೊಂದಿದ್ದಾಳೆ ಎಂಬ ವಿಷಯ ತಿಳಿದ ಬಳಿಕ ತಾನು ಆಕೆಯನ್ನು ಇತರೆ ಐವರು ಬಾಯ್ ಫ್ರೆಂಡ್ ಮುಂದೆ ಕರೆದು ಕಪಾಳಮೋಕ್ಷ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಇದಕ್ಕೆ ಸಿಡಿಮಿಡಿಗೊಂಡ ನೇಹಾ, ಯುವಕನನ್ನು ತರಾಟೆಗೆ ತೆಗೆದುಕೊಂಡು ನೀನು ನಿನ್ನ ಗರ್ಲ್ ಫ್ರೆಂಡ್ ಗೆ ಕಪಾಳಮೋಕ್ಷ ಮಾಡಿರುವುದು ತಪ್ಪು ಎಂದಿದ್ದಾಳೆ. ಆಕೆಗೆ ಕಪಾಳ ಮೋಕ್ಷ ಮಾಡುವ ಅಧಿಕಾರ ನಿನಗೆ ನೀಡಿದವರು ಯಾರು. ಐವರು ಬಾಯ್ ಫ್ರೆಂಡ್ ಗಳನ್ನು ಹೊಂದುವುದು ಅವಳ ಇಷ್ಟ. ನೇಹಾ ನೀಡಿರುವ ಈ ಹೇಳಿಕೆಗೆ ನೆಟ್ಟಿಗರು ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ಒಮ್ಮೆ ನೀವೇ ನೋಡಿ..
#NehaDhupia Get some sense. Don't be a lecturer everywhere everytime. #fakefeminism #HusnJihad pic.twitter.com/ouwVgtdKht
— ऋषभ अवस्थी 100 % Follow BAck (@RishabhEIN) March 12, 2020
Actually i have 5 other GF's and for that my first GF slapped me. Ma'am @NehaDhupia can you please tell her it's (his) choice. #CHOICE #NehaDhupia
— Sarvesh Guptan (@GuptanSarvesh) March 12, 2020
#NehaDhupia
Presenting #feminist @NehaDhupia
And not expect from you @rannvijaysingha #genderequity pic.twitter.com/HockmjsjAO— Yash Sharma (@imyash_15) March 12, 2020
ಇತ್ತೀಚೆಗಷ್ಟೇ ಹೇಳಿಕೆಯೊಂದನ್ನು ನೀಡಿದ್ದ ನೇಹಾ ಧೂಪಿಯಾ, "ಗರ್ಭಾವಸ್ಥೆ ನನ್ನ ಜೀವನದ ಒಂದು ಸುಂದರ ಅನುಭವವಾಗಿತ್ತು. ಏಕೆಂದರೆ ಈ ವೇಳೆ ತಾವು ತಮಗೆ ಇಷ್ಟವಾಗಿದ್ದನ್ನು ಸೇವಿಸಿದ್ದೇನೆ" ಎಂದಿದ್ದಳು. ಓರ್ವ ಮಾಡೆಲ್ ಹಾಗೂ ನಟಿಯಾಗಿ ನೇಹಾ ಸುಮಾರು 15 ವರ್ಷಗಳಿಗೂ ಅಧಿಕ ಕಾಲ ತನ್ನ ಆಹಾರವನ್ನು ನಿಯಂತ್ರಣದಲ್ಲಿ ಇರಿಸಿದ್ದಾಳೆ.