ಟಾಲಿವುಡ್‌ಗೆ ಹೋದ್ಮೇಲೆ ಸಖತ್‌ ಹಾಟ್‌ ಆಗಿದ್ದಾಳೆ ಪಟಾಕಿ ಪೋರಿ ನಭಾ..! ಫೋಟೋಸ್‌ ಇಲ್ಲಿವೆ..

Nabha Natesh : ನಭಾ ನಟೇಶ್‌ ವಜ್ರಕಾಯ ಸಿನಿಮಾದ ಮೂಲಕ ಕನ್ನಡಿಗರ ಹೃದಯ ಕದ್ದ ಚೆಲುವೆ.. ಈ ಚಿತ್ರದ ನಂತರ ಏಕಾಎಕಿ ತೆಲುಗಿಗೆ ಹಾರಿದ ಚೆಲುವೆ ಸ್ಟಾರ್‌ ನಟಿಯಾಗಿ ಮಿಂಚುತ್ತಿದ್ದಾಳೆ.. ಸಧ್ಯ ನಭಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಟ್ರೇಂಡ್‌ ಆಗುತ್ತಿವೆ. 
 

1 /9

ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿನ ನಟಿಯರ ಗ್ಲಾಮರ್‌ ಶೋ ಹೆಚ್ಚಾಗುತ್ತಿದೆ.. ಯುವ ನಟಿಯರು ಆಗಾಗ ಹೊಸ ಬೋಲ್ಡ್ ಲುಕ್ ಗಳನ್ನು ಹಂಚಿಕೊಳ್ಳುತ್ತಾ ತಮ್ಮ ಅಭಿಮಾನಿಗಳನ್ನ ರಂಚಿಸುತ್ತಿದ್ದಾರೆ. ಈ ಕ್ರಮದಲ್ಲಿ ಸ್ಮಾರ್ಟ್ ಬ್ಯೂಟಿ ನಭಾ ನಟೇಶ್ ಇತ್ತೀಚೆಗಷ್ಟೇ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

2 /9

ನಭಾ ನಟೇಶ್ ಇತ್ತೀಚಿಗೆ ಹಂಚಿಕೊಂಡಿರುವ ಕೆಲವು ಫೊಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. ಚಿತ್ರಗಳನ್ನು ನೋಡಿದ ಪಡ್ಡೆ ಹುಡುಗರು ರೊಮ್ಯಾಂಟಿಕ್ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.  

3 /9

ನಟ ಡಾ. ಶಿವರಾಜ್‌ಕುಮಾರ್‌ ನಟನೆಯ ವಜ್ರಕಾಯ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಚೆಲುವೆ ಪಟಾಕಿ ಪೋರಿ ಅಂತಲೇ ಪ್ರಸಿದ್ಧರಾದರು.. ಸಧ್ಯ ಟಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ..  

4 /9

ನಾನಿ ದೋಚುಕುಂದುವಟೆ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದ ನಭಾ ನಟೇಶ್ ಮೊದಲ ಸಿನಿಮಾದಿಂದಲೇ ಯುವ ಪ್ರೇಕ್ಷಕರ ಮನ ಕದ್ದರು. ಗ್ಲಾಮರ್ ಮತ್ತು ನಟನಾ ಕೌಶಲ್ಯದಿಂದ ಬೆಳ್ಳಿತೆರೆಯಲ್ಲಿ ನಭಾ ಜಾದೂ ಮಾಡಿದರು..  

5 /9

ಇದಾದ ನಂತರ ನಭಾ ನಟೇಶ್ ‘ಇಸ್ಮಾರ್ಟ್ ಶಂಕರ್’ ಚಿತ್ರದ ಮೂಲಕ ರಾತ್ರೋರಾತ್ರಿ ಕ್ರೇಜ್ ಗಳಿಸಿದ್ದರು. ಪೂರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದಲ್ಲಿ ನಭಾ ಸೌಂದರ್ಯಕ್ಕೆ ಯುವ ಪಡೆ ಮರುಳಾಯಿತು. ಇದರೊಂದಿಗೆ ಈ ಸುಂದರಿ ಸ್ಟಾರ್‌ ನಟಿಯರ ಪಟ್ಟಿ ಸೇರಿದರು.  

6 /9

ಮಾಸ್ ಮಹಾರಾಜ್ ರವಿತೇಜಾ ಜೊತೆ ಡಿಸ್ಕೋ ರಾಜಾ ಸಿನಿಮಾದಲ್ಲಿ ನಟಿಸಿದರು.. ಆದರೆ ಈ ಸಿನಿಮಾದ ಅಷ್ಟಾಗಿ ಸದ್ದು ಮಾಡಲಿಲ್ಲ. ಆ ನಂತರ ಬೆಲ್ಲಂಕೊಂಡ ಶ್ರೀನಿವಾಸ್ ಜೊತೆ ಸಾಯಿ ಧರಮ್ ತೇಜ್ ಸೋಲೋ ಬ್ರತುಕೆ ಸೋ ಬೆಟರ್, ಅಲ್ಲುಡು ಅದುರ್ಸ್ ಸೇರಿದಂತೆ ಸತತವಾಗಿ ಸಿನಿಮಾ ಮಾಡಿದರೂ ಒಂದು ಹಿಟ್‌ ಆಗಲಿಲ್ಲ..   

7 /9

ತೆಲುಗಿನಲ್ಲಿ ಅವಕಾಶಗಳ ಕೊರತೆ ಇದ್ದರೂ ಈ ಚೆಲುವೆಯ ಟ್ರೆಂಡ್ ಸೋಷಿಯಲ್ ಮೀಡಿಯಾದಲ್ಲಿ ಕಡಿಮೆಯಾಗಿಲ್ಲ. ಈ ಸ್ಮಾರ್ಟ್ ಬೇಬಿ ಹಂಚಿಕೊಳ್ಳುವ ಫೋಟೋಗಳು ಇಂಟರ್‌ನೆಟ್‌ನಲ್ಲಿ ಟ್ರೆಂಡಿಂಗ್ ಆಗಿವೆ.  

8 /9

ನಭಾ ತನ್ನ ವೃತ್ತಿಜೀವನದಲ್ಲಿ ಗ್ಯಾಪ್ ಇರುವುದರಿಂದ ತನ್ನ ಮೈಕಟ್ಟು ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದಾಳೆ ಅಂತ ಇತ್ತೀಚಿನ ಫೋಟೋಗಳನ್ನ ನೋಡಿದ್ರೆ ತಿಳಿಯುತ್ತದೆ. ಇತ್ತೀಚಿನ ಫೋಟೋಗಳನ್ನು ನೋಡಿದ ನಂತರ ಸ್ಮಾರ್ಟ್ ಬೇಬಿ ಸಂಪೂರ್ಣವಾಗಿ ಬದಲಾಗಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ..  

9 /9

ಸಧ್ಯ ನಭಾ ಹೇಗಾದರೂ ಸರಿ ಮತ್ತೆ ಟ್ರ್ಯಾಕ್‌ಗೆ ಮರಳುವ ಗುರಿಯೊಂದಿಗೆ ಸೋಷಿಯಲ್‌ ಮೀಡಿಯಾದಲ್ಲಿ ಗ್ಲಾಮರ್ ಟ್ರೀಟ್ ನೀಡಲಾಗುತ್ತಿದೆ ಎನ್ನಬಹುದು. ಐಟಂ ಸಾಂಗ್ಸ್ ಕೂಡ ಮಾಡಲು ಈ ಚೆಲುವೆ ರೆಡಿಯಾಗಿದ್ದಾರಂತೆ.