ಐಸಿಸಿ ಮಹಿಳಾ ವಿಶ್ವಕಪ್ ಟಿ-20ಯ ಫೈನಲ್ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ತನ್ನ ಸ್ಥಾನವನ್ನು ಭದ್ರಪಡಿಸಿದೆ. ಈ ಹಿನ್ನೆಲೆಯಲ್ಲಿ ಹರ್ಮನ್ ಪ್ರೀತ್ ಕೌರ್ ತಂಡಕ್ಕೆ ಹಲವು ಕಡೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಅದರಲ್ಲಿ ವಿಶೇಷವಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹಾಗೂ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸೂಪರ್ ಸ್ಟಾರ್ ಮಿಥಾಲಿ ರಾಜ್ ಕೂಡ ಶಾಮೀಲಾಗಿದ್ದಾರೆ.
ಪ್ರಮುಖ ಬಹುರಾಷ್ಟ್ರೀಯ ಕಂಪನಿಯ ಬ್ರಾಂಡ್ ನ ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಮಿಥಾಲಿ ರಾಜ್, ಜಾಹೀರಾತಿನಲ್ಲಿ ಅವರು ಸೀರೆಯನ್ನುಟ್ಟು ಕ್ರಿಕೆಟ್ ಆಟ ಆಡುತ್ತಿದ್ದಾರೆ. ಸಾಂಪ್ರದಾಯಿಕ ಭಾರತೀಯ ಉಡುಗೆಯಲ್ಲಿ ಮಿಥಾಲಿಯೊಂದಿಗೆ ಭಾರತೀಯ ಸಂಸ್ಕೃತಿಯ ಒಂದು ಅಂಶವನ್ನು ಸಹ ನೀವು ಈ ವಿಡಿಯೋದಲ್ಲಿ ವಿಕ್ಷೀಸಬಹುದು.
ಭಾರತದ ಅಪ್ರತಿಮ ಮಹಿಳಾ ತಾರೆಯರ ಅತ್ಯುತ್ತಮ ಸಾಧನೆಗಳಲ್ಲಿ ಒಂದನ್ನು ಪ್ರಶಂಸಿಸುವ ಮೂಲಕ ಸಾಂಪ್ರದಾಯಿಕವಾಗಿ ಪುರುಷ ಆಧಾರಿತ ಕ್ರೀಡೆಯಾಗಿರುವ ಮತ್ತು 'ಜಂಟಲ್ಮ್ಯಾನ್ಸ್ ಗೇಮ್' ಎಂದೇ ಬಿಂಬಿಸಲಾಗುವ ಆಟದ ಮಾದರಿಗೆ ಮಿಥಾಲಿ ಬ್ರೇಕ್ ನೀಡಿದ್ದಾರೆ.
#MithaliPlaysCricketInSaree
Mithali Raj believes in breaking stereotypes.
Feel proud for you❤@M_Raj03
Sky is the limit, And you proved it!!!#MithaliRaj pic.twitter.com/HvBvytRyat— Preeti Bardia(Mehta) (@PreetiBardia) March 5, 2020
ವಿಡಿಯೋದ ಕೊನೆ ಭಾಗದಲ್ಲಿ ಪಂಚಲೈನ್ ವೊಂದನ್ನು ಹೇಳುವ ಮೂಲಕ ಮಿಥಾಲಿ ICC WOMENS T20 WORLD CUP ಫೈನಲ್ ಗೆ ಮೊದಲಬಾರಿಗೆ ಪ್ರವೇಶ ಪಡೆದ ಭಾರತೀಯ ಮಹಿಳಾ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ODI ಮಾದರಿಯ ನಾಯಕಿಯಾಗಿರುವ ಮಿಥಾಲಿ, " ಓರ್ವ ಭಾರತೀಯಳಾಗಿ, ಭಾರತದ ತಂಡ ಫೈನಲ್ ಪ್ರವೇಶಿಸಿದ್ದು ನನ್ನಲ್ಲಿ ತುಂಬಾ ರೋಮಾಂಚನ ಸೃಷ್ಟಿಸಿದೆ. ಆದರೆ, ಓರ್ವ ಕ್ರಿಕೆಟ್ ಆಟಗಾರ್ತಿಯಾಗಿ ಇಂಗ್ಲೆಂಡ್ ತಂಡದ ಹುಡುಗಿಯರ ಬಗ್ಗೆ ನನಗೆ ಕಳಕಳಿ ಇದೆ. ಅವರು ತಲುಪಿದ ಸ್ಥಿತಿಯಲ್ಲಿ ನನ್ನನ್ನಾಗಲಿ ಅಥವಾ ನನ್ನ ತಂಡವನ್ನಾಗಲಿ ನಾನು ನೋಡಲು ಬಯಸುವುದಿಲ್ಲ. ಆದರೆ, ನಿಯಮಗಳ ಮುಂದೆ ಯಾರು ದೊಡ್ಡವರಲ್ಲ. ಅಭಿನಂದನೆಗಳು ಹುಡುಗಿಯರೇ, ನಿಮ್ಮ ಸಾಧನೆ ತುಂಬಾ ದೊಡ್ಡದು" ಎಂದು ಹೇಳಿದ್ದಾರೆ.