Aishwarya Rai Bachchan video: ಜುಲೈನಲ್ಲಿ, ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಕ್ಕೆ ಪ್ರತ್ಯೇಕವಾಗಿ ಆಗಮಿಸಿದ ನಂತರ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಜೋಡಿ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಭಾರಿ ಚರ್ಚೆಯಾಗುತ್ತಿದೆ. ಅಂದಿನಿಂದ ಇಂದಿನವರೆಗೂ ಈ ಜೋಡಿ ಹಲವಾರು ಸಂದರ್ಭಗಳಲ್ಲಿ ನಡೆದುಕೊಳ್ಳುವ ರೀತಿ ನೋಡಿ ನೆಟ್ಟಿಗರು ಈ ಇಬ್ಬರು ವಿಚ್ಚೇದನ ಪಡೆಯಲಿದ್ದಾರೆ ಎಂದು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ.
ಇನ್ನೂ, ಹಲವು ಸಂದರ್ಭಗಳಲ್ಲಿ ಅಭಿಷೇಕ್ ಬಚ್ಚನ್ ಸಹೋದರಿ ಹಾಗೂ ತಾಯಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದು, ಐಶ್ವರ್ಯ ತಮ್ಮ ಪುತ್ರಿ ಆರಾಧ್ಯ ಜೊತೆ ರೌಂಡ್ಸ್ ಒಡೆಯುತ್ತಿದ್ದಾರೆ, ಹೀಗಿರುವಾಗ ಇವರಿಬ್ಬರ ವಿಚ್ಛೇದನ ವದಂತಿ ದಿನೇ ದಿನೇ ಮತ್ತಷ್ಟು ಹೆಚ್ಚಾಗುತ್ತಿದ್ದು, ಈ ವಿಷಯ ಇದೀಗ ಬಿ ಟೌನ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅಮಿತಾಬ್ ಬಚ್ಚನ್ , ಜಯಾ ಬಚ್ಚನ್ , ಶ್ವೇತಾ ಬಚ್ಚನ್ ಮತ್ತು ಅವರ ಮಕ್ಕಳಾದ ನವ್ಯಾ ಮತ್ತು ಅಗಸ್ತ್ಯ ನಂದಾ ಅವರೊಂದಿಗೆ ಅಂಬಾನಿ ಮದುವೆಗೆ ಆಗಮಿಸಿದ್ದ ಬಚ್ಚನ್ ಕುಟುಂಬವೂ ಐಶ್ವರ್ಯ ರೈ ಹಾಗೂ ಆರಾಧ್ಯ ಅವರನ್ನು ಬಿಟ್ಟು ಪ್ರತ್ಯೇಕವಾಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದರು. ದಂಪತಿಗಳು ಒಟ್ಟಿಗೆ ಫೋಟೋಗಳಿಗೆ ಪೋಸ್ ಕೂಡ ನೀಡದಿಲ್ಲದ್ದನ್ನು ಕಂಡ ಅಭಿಮಾನಿಗಳು ಶಾಕ್ ಆಗಿದ್ದರು.
ಇದನ್ನೂ ಓದಿ: ವಿರಾಟ್ ಕೊಹ್ಲಿ ಮೇಲೆ ʻಈʼ ನಟಿಗೆ ಇದೆಯಂತೆ ಕ್ರಶ್! ಕಿಂಗ್ ಕುರಿತು ಮನದಾಸೆ ಬಿಚ್ಚಿಟ್ಟ ಬಾಲಿವುಡ್ ಬ್ಯೂಟಿ?
ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಒಟ್ಟಿಗೆ ಕಾಣಿಸಿಕೊಂಡಿಲ್ಲ ಅಥವಾ ಒಟ್ಟಿಗೆ ಪೋಸ್ ನೀಡಿಲ್ಲ ಎಂದು ನೆಟ್ಟಿಗರು ನೋಡಿದ ಕ್ಷಣ , ದಂಪತಿಗಳ ನಡುವೆ ಏನೋ ಸರಿಯಿಲ್ಲ ಎಂದು ಅನುಮಾನ ವ್ಯಕ್ತಪಡಿಸಲು ಆರಂಭಿಸಿದ್ದರು. ಇಷ್ಟಲ್ಲಾ ನಡೆದ ನಂತರ ಕೂಡ ನಟ ವಿಚ್ಛೇದನಕ್ಕೆ ಸಂಬಂಧ ಪಟ್ಟ ಪೋಸ್ಟ್ ಅನ್ನು ಲೈಕ್ ಮಾಡಿ ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದ್ದರು. ಹೀಗೆ ದಂಪತಿ ಒಂದಾದ ಮೇಲೊಂದು ನಡೆಯಿಂದ ಹೊತ್ತಿ ಉರಿಯುತ್ತಿರುವ ವದಂತಿಗಳಿಗೆ ತುಪ್ಪ ಸುರಿಯುತ್ತಿದ್ದಾರೆ.
ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ದುಬೈನಲ್ಲಿ ತಮ್ಮ ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ SIIMA ಅವಾರ್ಡ್ಸ್‌ಗಾಗಿ ಆಗಮಿಸಿದ್ದಾರೆ. ಆದರೆ, ಕೆಲವು ನೆಟಿಜನ್‌ಗಳು ಗಮನಿಸಿದ ಸಂಗತಿಯೆಂದರೆ, ನಟಿ ತನ್ನ ಮದುವೆಯ ಉಂಗುರವನ್ನು ಧರಿಸಿರಲಿಲ್ಲ. ಇದನ್ನು ಕಂಡ ನೆಟ್ಟಿಗರು ಈ ಇಬ್ಬರ ವಿಚ್ಚೇದನದ ಕುರಿತು ಮತ್ತೊಮ್ಮೆ ಚರ್ಚೆ ಶುರು ಮಾಡಿದ್ದಾರೆ. ಈ ನಡೆಯಿಂದ ವಿಚ್ಚೇದನ ವದಂತಿ ಮರುಜೀವ ಪಡೆದುಕೊಂಡಿದೆ.