Maruti Suzuki Swift CNG : ಮಾರುತಿ ಸುಜುಕಿ ತನ್ನ ಜನಪ್ರಿಯ ಸ್ವಿಫ್ಟ್ ಹ್ಯಾಚ್ಬ್ಯಾಕ್ನ ಸಿಎನ್ಜಿಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ದುಬಾರಿ ಪೆಟ್ರೋಲ್ ದರದಿಂದ ಬೇಸತ್ತಿರುವವರಿಗೆ ಈ ಕಾರು ಪರಿಹಾರ ನೀಡಲಿದೆ. CNG ರೂಪಾಂತರಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿವೆ.ಈ ಕಾರುಗಳು ಉತ್ತಮ ಮೈಲೇಜ್ ಒದಗಿಸುವುದೇ ಇದಕ್ಕೆ ಕಾರಣ.ಅಲ್ಲದೆ ಸಿಎನ್ ಜಿ ಕಾರುಗಳು ಮಾಲಿನ್ಯವನ್ನು ಉಂಟುಮಾಡುವುದಿಲ್ಲ.ಹ್ಯಾಚ್ಬ್ಯಾಕ್ನಲ್ಲಿ,ಗ್ರಾಹಕರಿಗೆ 1.2-ಲೀಟರ್ ಮೂರು-ಸಿಲಿಂಡರ್ Z12E ನ್ಯಾಚ್ಯುರಲಿ ಆಸ್ಪಿರೆಟೆಡ್ ಪೆಟ್ರೋಲ್ ಎಂಜಿನ್ ನೊಂದಿಗೆ ಬರುತ್ತದೆ.ಇದು ಅಸ್ತಿತ್ವದಲ್ಲಿರುವ 1.2-ಲೀಟರ್ K-ಸರಣಿಯ ನಾಲ್ಕು ಸಿಲಿಂಡರ್ ಎಂಜಿನ್ಗಿಂತ ಉತ್ತಮ ಮೈಲೇಜ್ ನೀಡುತ್ತದೆ.
ಮಾರುತಿ ಸ್ವಿಫ್ಟ್ ಸಿಎನ್ಜಿ ಬಿಡುಗಡೆ :
ಮಾರುತಿ ಸ್ವಿಫ್ಟ್ CNGಯನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ನ್ಯೂಸ್ ಜನರೆಶನ್ ಮಾಡೆಲ್ ಅನ್ನು ಹೊಸ ಪೆಟ್ರೋಲ್ ಎಂಜಿನ್ನೊಂದಿಗೆ ಮೇ 9 ,2024 ರಂದು ಪ್ರಾರಂಭಿಸಲಾಯಿತು.
ಇದನ್ನೂ ಓದಿ : 23kmpl ಮೈಲೇಜ್ ನೀಡುವ 5 ಸೀಟರ್ ಕಾರು: ಅದ್ಭುತ ವೈಶಿಷ್ಟ್ಯದ ಜೊತೆ ಬೆಲೆಯೂ 5 ಲಕ್ಷಕ್ಕಿಂತ ಕಡಿಮೆ! ಖರೀದಿಗೆ ಇದು ಬೆಸ್ಟ್ ಟೈಂ
ಎಂಜಿನ್ ಮತ್ತು ಪವರ್ :
ಮಾರುತಿ ಸ್ವಿಫ್ಟ್ ಸಿಎನ್ಜಿಯಲ್ಲಿ ಹೊಸ Z ಸರಣಿಯ ಎಂಜಿನ್ ಅನ್ನು ಒದಗಿಸಲಾಗಿದೆ.ಪೆಟ್ರೋಲ್ ಎಂಜಿನ್ನೊಂದಿಗೆ ಹೋಲಿಸಿದರೆ,ಇದರಕ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಈಗ ಈ 1.2 ಲೀಟರ್ ಎಂಜಿನ್ 69.75 ಪಿಎಸ್ ಪವರ್ ಮತ್ತು 101.8 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಸಿಎನ್ಜಿ ಮೋಡ್ನಲ್ಲಿ ಜನರೇಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.ಇದರೊಂದಿಗೆ, 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಕೂಡಾ ನೀಡಲಾಗಿದೆ.
ವೈಶಿಷ್ಟ್ಯಗಳು ಮತ್ತು ವಿಶೇಷಣಗಳು :
ಮಾರುತಿ ಸ್ವಿಫ್ಟ್ ಸಿಎನ್ಜಿಯಲ್ಲಿ,ಗ್ರಾಹಕರಿಗೆ ಪೆಟ್ರೋಲ್ ರೂಪಾಂತರಗಳಂತೆಯೇ ವೈಶಿಷ್ಟ್ಯಗಳನ್ನು ನೀಡಲಾಗುತ್ತದೆ. ಇದು ABS, ESP ಪ್ಲಸ್, ಸ್ಟ್ಯಾಂಡರ್ಡ್ ಆಗಿ ಆರು ಏರ್ಬ್ಯಾಗ್ಗಳು, ಹಿಲ್ ಹೋಲ್ಡ್ ಅಸಿಸ್ಟ್, ಅಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ರಿಯರ್ ಎಸಿ ವೆಂಟ್, ವೈರ್ಲೆಸ್ ಚಾರ್ಜರ್ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.ಗ್ರಾಹಕರಿಗೆ ಕಾರಿನಲ್ಲಿ 7 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಸುಜುಕಿ ಕನೆಕ್ಟ್ ಮುಂತಾದ ವೈಶಿಷ್ಟ್ಯಗಳನ್ನು ನೀಡಲಾಗಿದೆ.
ಇದನ್ನೂ ಓದಿ : ಅತಿದೊಡ್ಡ ಸ್ಮಾರ್ಟ್ಫೋನ್ ಮಾರುಕಟ್ಟೆಇದು !ಇಲ್ಲಿ ತರಕಾರಿ ಬೆಲೆಯಲ್ಲಿ ಸಿಗುತ್ತದೆ ಎಲ್ಲಾ ಬ್ರಾಂಡಿನ ಫೋನ್ !ಒಮ್ಮೆ ವಿಸಿಟ್ ಮಾಡಿ ನೋಡಿ
ಬೆಲೆ ಎಷ್ಟು :
ಸ್ವಿಫ್ಟ್ CNG ಭಾರತೀಯ ಮಾರುಕಟ್ಟೆಯಲ್ಲಿ VXI, VXI (O) ಮತ್ತು ZXI ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಅದರ ಮೂಲ ರೂಪಾಂತರ VXI ನ ಎಕ್ಸ್ ಶೋರೂಂ ಬೆಲೆಯನ್ನು ರೂ 819500 ನಲ್ಲಿ ಇರಿಸಲಾಗಿದೆ. ಉನ್ನತ ರೂಪಾಂತರದ ಎಕ್ಸ್ ಶೋ ರೂಂ ಬೆಲೆ ರೂ 919500 ಆಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.