Cockroach in throat : ಸಾಮಾನ್ಯವಾಗಿ, ಜಿರಳೆಗಳು ಅಡಿಗೆಮನೆಗಳಲ್ಲಿ ಸುತ್ತಾಡುತ್ತವೆ. ಆಹಾರ ತ್ಯಾಜ್ಯವನ್ನು ಸುರಿಯುವ ಸ್ಥಳಗಳಲ್ಲಿ ಓಡಾಡುತ್ತವೆ. ಕೆಲವೊಮ್ಮೆ ಮ್ಯಾನ್ ಹೋಲ್ ಗಳಲ್ಲಿ ಜಿರಳೆಗಳೂ ಕಾಣಸಿಗುತ್ತವೆ. ಡಸ್ಟ್ ಬಿನ್ಗಳ ಬಳಿ ಮತ್ತು ಅಡುಗೆಮನೆಯ ಸಿಂಕ್ಗಳ ಕೆಳಗೆ ಜಿರಳೆಗಳನ್ನು ನಾವು ಆಗಾಗ್ಗೆ ನೋಡುತ್ತೇವೆ.
ಈ ಕ್ರಮದಲ್ಲಿ.. ಮನುಷ್ಯನನ್ನ ಕಂಡರೆ ಜಿರಳೆಗಳು ಭಯದಿಂದ ಓಡಿಹೋಗುತ್ತವೆ. ಅಸಲಿಗೆ.. ಜಿರಳೆಗಳನ್ನು ಕಂಡರೆ.. ಅನೇಕರಿಗೆ ಅಲರ್ಜಿ ಎಂದು ಭಾವಿಸುತ್ತಾರೆ. ಈ ಹಿನ್ನೆಲೆಯಲ್ಲಿ.. ರಾತ್ರಿ ಮಲಗಿದ್ದ ವ್ಯಕ್ತಿಯ ಬಾಯಿಯೊಳಗೆ ಜಿರಳೆಯೊಂದು ನುಗ್ಗಿದೆ. ಸ್ವಲ್ಪ ಸಮಯದ ನಂತರ ಎಚ್ಚರಗೊಂಡು ಸುತ್ತಲೂ ನೋಡಿದ್ದಾನೆ... ನಂತರ ಮತ್ತೆ ಮಲಗಿದ್ದಾನೆ.. ಈ ಘಟನೆ ಚೀನಾದಲ್ಲಿ ನಡೆದಿದೆ..
ಇದನ್ನೂ ಓದಿ:ಶಕ್ತಿಪೀಠ ಉಜ್ಜಯಿನಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ..! ವಿಡಿಯೋ ವೈರಲ್
ಚೀನಾದ ಹೈನಾನ್ ಪ್ರಾಂತ್ಯದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ರಾತ್ರಿ ಮಲಗಿದ್ದ ವ್ಯಕ್ತಿ ತನ್ನ ಬಾಯಲ್ಲಿ ಏನೋ ಅಂಟಿಕೊಂಡಂತಾಯಿತು ಅಂತ ತಕ್ಷಣ ಎಚ್ಚರಗೊಂಡಿದ್ದಾರೆ.. ಎನೂ ಇಲ್ಲ ಅಂತ ಅಂದುಕೊಂಡು ಪುನಃ ಮಲಗಿದ್ದಾನೆ. ಆದರೆ ಒಂದು ದಿನ ಕಳೆದಿದಿಲ್ಲ ಅವನ ಬಾಯಿಂದ ದುರ್ವಾಸನೆ ಬರತೊಡಗಿತು. ಎಷ್ಟೇ ಬ್ರಶ್ ಮಾಡಿದರೂ ಇದೇ ವಾಸನೆ ಹೋಗಲಿಲ್ಲ.. ಕೊನೆಗೆ ಉಸಿರಾಟಕ್ಕೆ ತೊಂದರೆಯಾಯಿತು.
ಮೂರು ದಿನಗಳು ಕಳೆದ ಬಳಿಕ ಎನೂ ಪ್ರಯೋಜನವಾಗದ ಕಾರಣ ಇಎನ್ಟಿಗೆ ಹೋದರು. ವ್ಯಕ್ತಿಯ ಗಂಟಲಿನಲ್ಲಿ ಏನೋ ಇದೆ ಎಂದು ವೈದ್ಯರು ಶಂಕಿಸಿದ್ದಾರೆ. ತಕ್ಷಣ ಸ್ಕ್ಯಾನಿಂಗ್ ಮಾಡಲಾಯಿತು. ಆಗ.. ಆ ಸ್ಕ್ಯಾನ್ ನಲ್ಲಿ ರೆಕ್ಕೆಗಳಿರುವ ಜೀವಿ ಇರುವುದು ಪತ್ತೆಯಾಗಿದೆ. ನಂತರ ವೈದ್ಯರು ಬ್ರಾಂಕೋಸ್ಕೋಪಿ ನಡೆಸಿ ಅವರ ಶ್ವಾಸನಾಳದ ಕೆಳಗಿನ ಭಾಗದಿಂದ ಜಿರಳೆಯನ್ನು ಹೊರತೆಗೆದರು. ಇದರಿಂದಾಗಿ.. ಮೂರು ದಿನ ನರಕಯಾತನೆ ಅನುಭವಿಸಿದಂತಿದೆ.
ಇದನ್ನೂ ಓದಿ:ಹೈದರಾಬಾದ್ ಪೋಲಿಸರಿಂದ ಏರ್ಪೋರ್ಟ್ ನಲ್ಲಿ ಮಲಯಾಳಂ ಚಿತ್ರ ನಟನ ಬಂಧನ
ಜಿರಳೆ ನೋಡಿ ವೈದ್ಯರೂ ಬೆಚ್ಚಿಬಿದ್ದಿದ್ದಾರೆಂದು ತೋರುತ್ತದೆ. ಅಕಸ್ಮಾತ್ ಶಾಸ್ವಸಕೋಶದಲ್ಲಿ ಜಿರಳೆ ಸತ್ತಿದ್ದರೆ ಏನಾಗಬಹುದಿತ್ತು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಜಿರಳೆ ತೆಗೆದ ನಂತರ, ವ್ಯಕ್ತಿ ಸರಳವಾಗಿ ಉಸಿರಾಡುತ್ತಿದ್ದಾನೆ. ಸಧ್ಯ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಆರೋಗ್ಯವಾಗಿದ್ದಾನೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.