Actress life : ಕೆಲವು ನಟಿಯರು ತಮ್ಮ ಸಹ ನಟರಿಂದಾಗಿ ಕೆಲವೊಮ್ಮೆ ಮುಜುಗರಕ್ಕೆ ಒಳಗಾಗುತ್ತಾರೆ ಅಂತ ಅದೇಷ್ಟೋ ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.. ಇದೀಗ ಸ್ಟಾರ್ ನಟಿಯೊಬ್ಬರು ತಾವು ಎದುರಿಸಿದ ವಿಚಿತ್ರ ಸನ್ನಿವೇಶದ ಕುರಿತು ಬಹಿರಂಗ ಪಡಿಸಿದ್ದಾರೆ.. ಲಿಪ್ ಲಾಕ್ ದೃಶ್ಯದ ಚಿತ್ರೀಕರಣದ ವೇಳೆ 42 ವರ್ಷದ ನಟ ತಮ್ಮ ತುಟಿಯನ್ನು ಕಚ್ಚಿದ್ದಾಗಿ ಹೇಳಿಕೊಂಡಿದ್ದಾರೆ.. ಅಷ್ಟಕ್ಕೂ ಯಾರು ಆ ನಟಿ..? ಇಲ್ಲಿದೆ ಮಾಹಿತಿ..
ಚಿತ್ರರಂಗದಲ್ಲಿ ನಟಿಯರಿಗೆ ಸಾಕಷ್ಟು ಕಷ್ಟಗಳು ಎದುರಾಗುತ್ತವೆ. ಚಿತ್ರಗಳಲ್ಲಿನ ಪ್ರಣಯ ದೃಶ್ಯಗಳ ಸಂದರ್ಭದಲ್ಲಿ ಕಠಿಣ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ.
ಈಗಾಗಲೇ ಅನೇಕ ನಾಯಕಿಯರು ತಾವು ಎದುರಿಸಿದ ಸನ್ನಿವೇಶಗಳ ಕುರಿತು ಬಹಿರಂಗವಾಗಿ ಹೇಳಿದ್ದಾರೆ. ಸಹ ನಟರಿಂದಾಗಿ ತಾವು ಮುಜುಗರಕ್ಕೆ ಒಳಗಾದ ಪ್ರಸಂಗ ಕುರಿತು ಬಿಚ್ಚಿಟ್ಟಿದ್ದಾರೆ..
ಈ ಪೈಕಿ ನಾಯಕಿಯೊಬ್ಬರು ತಾವು ಎದರಿಸಿದ ವಿಚಿತ್ರ ಸನ್ನಿವೇಶದ ಕುರಿತು ಹೇಳಿಕೊಂಡಿದ್ದು, ಅದನ್ನು ಕೇಳಿ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಲಿಪ್ ಲಾಕ್ ದೃಶ್ಯದ ಶೂಟಿಂಗ್ ವೇಳೆ 42 ವರ್ಷದ ನಾಯಕನೊಬ್ಬ ತಮ್ಮ ತುಟಿ ಕಚ್ಚಿದ್ದಾಗಿ ತಿಳಿಸಿದ್ದಾರೆ.. ಆಗ ಈ ನಟಿಗೆ 20 ವರ್ಷ ವಯಸ್ಸಾಗಿತ್ತಂತೆ..
ಹೌದು.. ತುಟಿ ಕಚ್ಚಿದ್ದು ಬೇರೆ ಯಾರೂ ಅಲ್ಲ ಬಾಲಿವುಡ್ ಸ್ಟಾರ್ ಹೀರೋ ವಿನೋದ್ ಖನ್ನಾ ಕಚ್ಚಿಸಿಕೊಂಡಿದ್ದು ನಾಯಕಿ ಮಾಧುರಿ ದೀಕ್ಷಿತ್.
36 ವರ್ಷಗಳ ಹಿಂದೆ ತೆರೆಕಂಡ ದಯಾವನ್ ಯಶಸ್ವಿ ಪ್ರದರ್ಶನ ಕಂಡಿತ್ತು. ಇದರಲ್ಲಿ ವಿನೋದ್ ಖನ್ನಾ ಮತ್ತು ಮಾಧುರಿ ದೀಕ್ಷಿತ್ ನಟಿಸಿದ್ದಾರೆ.
ಈ ಸಿನಿಮಾದ ಆಜ್ ಫಿರ್ ತುಮ್ ಸೇ ಹಾಡಿನ ಚಿತ್ರೀಕರಣದ ವೇಳೆ.. ಈ ಹಾಡಿನಲ್ಲಿ ಲಿಪ್ ಲಾಕ್ ದೃಶ್ಯವಿದೆ.
ಈ ದೃಶ್ಯದ ಚಿತ್ರೀಕರಣದ ವೇಳೆ ನಾಯಕ ವಿನೋದ್ ಖನ್ನಾ ನಿಯಂತ್ರಣ ತಪ್ಪಿ ನಾಯಕಿಯ ತುಟಿಯನ್ನು ಕಚ್ಚಿದ್ದರಂತೆ.. ಡೈರೆಕ್ಟರ್ ಕಟ್ ಕಟ್ ಅಂತ ಹೇಳಿದ್ರೂ ಕೇಳದೆ ಕಿಸ್ ಮಾಡಿದ್ದರಂತೆ..
ಈ ಅನಿರೀಕ್ಷಿತ ಬೆಳವಣಿಗೆಯಿಂದ ಮಾಧುರಿ ದೀಕ್ಷಿತ್ ಆಘಾತಕ್ಕೊಳಗಾಗಿದ್ದರು. ಅಲ್ಲದೆ, ತುಟಿ ಕಟ್ಟಿದ್ದರಿಂದ ರಕ್ತಸ್ರಾವವಾಗಿತ್ತಂತೆ..
ಆಗ ಮಾಧುರಿ ಅಳುತ್ತಿದ್ದರಂತೆ.. ಆಗ ನಟ ವಿನೋದ್ ಖನ್ನಾ ಮತ್ತು ನಿರ್ದೇಶಕ ಫಿರೋಜ್ ಖಾನ್ ಅವರ ಕ್ಷಮೆಯಾಚಿಸಿದರಂತೆ..