ಬೆಂಗಳೂರು :ಈ ವೇಗದ ಬದುಕಿನಲ್ಲಿ ನಿದ್ದೆ ಬಹಳ ಮುಖ್ಯ.ಹೆಚ್ಚಿನವರಿಗೆ ಬ್ಯುಸಿ ಜೀವ ಶೈಲಿಯಿಂದ ನಿದ್ದೆ ಮಾಡುವುದಕ್ಕೆ ಸರಿಯಾಗಿ ಸಮಯ ಸಿಗುವುದಿಲ್ಲ.ನಿದ್ರೆಯ ಕೊರತೆಯಿಂದ ಅನೇಕ ರೋಗಗಳು ಬರುತ್ತವೆ.ಹಣ ಸಂಪಾದಿಸುವ ಅಥವಾ ಓದುವ ಭರಾಟೆಯಲ್ಲಿ 9 ಗಂಟೆ ಕೇವಲ ಕನಸಾಗಿ ಬಿಟ್ಟಿದೆ.ಆದರೆ ಈ ಕಂಪನಿಯಲ್ಲಿ ಮಲಗುವುದಕ್ಕೂ ಹಣ ಸಿಗುತ್ತದೆ. ಮಲಗುವುದೆಂದರೆ ಸುಮ್ಮನೆ ಬಿದ್ದು ಕೊಳ್ಳುವುದಲ್ಲ, ದಿನಕ್ಕೆ 9 ಗಂಟೆ ನಿದ್ದೆ ಮಾಡಬೇಕು.
2023 ರಲ್ಲಿ,ಬೆಂಗಳೂರು ಮೂಲದ ಲೆಕ್ಕಪರಿಶೋಧಕಿ ಸಾಯಿಶ್ವರಿ ಪಾಟೀಲ್ ಈ ಕಂಪನಿಯ 'ವರ್ಷದ ಸ್ಲೀಪ್ ಚಾಂಪಿಯನ್' ಪ್ರಶಸ್ತಿಯನ್ನು ಗೆಲ್ಲುವುದರ ಮೂಲಕ 9 ಲಕ್ಷ ರೂಪಾಯಿ ಬಹುಮಾನವನ್ನು ಗೆದ್ದುಕೊಂಡಿದ್ದರು.
ಇದನ್ನೂ ಓದಿ : ಗೂಗಲ್ನಲ್ಲಿ ಅಪ್ಪಿತಪ್ಪಿಯೂ ಈ 'ಐದು' ವಿಷಯಗಳನ್ನು ಸರ್ಚ್ ಮಾಡಲೇಬೇಡಿ! ಇಲ್ಲವೇ ಜೈಲೂಟ ಫಿಕ್ಸ್!
ನಿದ್ರೆ ಇಂಟರ್ನ್ಶಿಪ್ :
ವೇಕ್ಫಿಟ್ ಕೆಲವು ಸಮಯದಿಂದ "ಸ್ಲೀಪ್ ಇಂಟರ್ನ್ಶಿಪ್" ಅನ್ನು ಆಯೋಜಿಸುತ್ತಿದೆ. ಈ ಸ್ಲೀಪ್ ಇಂಟರ್ನ್ಶಿಪ್ ದೇಶದಾದ್ಯಂತ ಗಮನ ಸೆಳೆಯುತ್ತಿದೆ. ಇದು 60 ದಿನಗಳ ಸ್ಲೀಪ್ ಇಂಟರ್ನ್ಶಿಪ್. ಇಲ್ಲಿ ಬೇರೇನೂ ಕೆಲಸ ಇಲ್ಲ. 9 ಗಂಟೆಗಳ ಕಾಲ ನಿದ್ರೆ ಮಾಡಬೇಕಾಗುತ್ತದೆ ಅಷ್ಟೇ. ಪವರ್ ನ್ಯಾಪ್ಗಳನ್ನು ತೆಗೆದುಕೊಳ್ಳುವ ಮೂಲಕ ಹೊಸ ವೇಕ್ಫಿಟ್ ಹಾಸಿಗೆಯನ್ನು ಪರೀಕ್ಷಿಸಬೇಕು.
ಚಾಂಪಿಯನ್ ಆದ ಸಾಯಿಶ್ವರಿ :
ಕಳೆದ ಬಾರಿ ವೇಕ್ಫಿಟ್ ಸ್ಲೀಪ್ ಇಂಟರ್ನ್ಶಿಪ್ನಲ್ಲಿ 5 ಲಕ್ಷ ಮಂದಿ ಭಾಗಿಯಾಗಿದ್ದರು.ನಂತರ, ಶಾರ್ಟ್ಲಿಸ್ಟ್ ಮಾಡಿ ಕೊನೆಗೆ 11 ಮಡಿ ಈ ಸ್ಲೀಪ್ ಇಂಟರ್ನ್ಶಿಪ್ ನಲ್ಲಿ ಉಳಿದುಕೊಂಡಿದ್ದರು. ಇವರೆಲ್ಲರಿಗೂ 1 ಲಕ್ಷ ಸ್ಟೈಫಂಡ್ ನೀಡಲಾಯಿತು. 2-ತಿಂಗಳ ಸುದೀರ್ಘ ಕಾರ್ಯಕ್ರಮದಲ್ಲಿ, ಈ ಸ್ಲೀಪ್ ಇಂಟರ್ನ್ಗಳು ಒಟ್ಟು 7,000 ಗಂಟೆಗಳ ಕಾಲ ನಿದ್ರಿಸಿದ್ದರು. ಸ್ಪರ್ಧೆಯು ಲೈವ್ "ಸ್ಲೀಪ್-ಆಫ್" ನೊಂದಿಗೆ ಮೆರಗು ಪಡೆದಿತ್ತು.ಅಲ್ಲಿ ಟಾಪ್ ಫೋರ್ ಸ್ಪರ್ಧಿಗಳು ಕಸ್ಟಮ್ ಸ್ಲೀಪ್ ಪಾಡ್ಗಳಲ್ಲಿ ಮಲಗಬೇಕಾಗಿತ್ತು. ಇವರು ಅಂತಿಮ ಬಹುಮಾನಕ್ಕಾಗಿ ಸ್ಪರ್ಧೆಗೆ ಇಳಿದಿದ್ದರು. ಇದರಲ್ಲಿ ಸಾಯಿಶ್ವರಿ 99% ನ ಗಮನಾರ್ಹ ನಿದ್ರೆಯ ದಕ್ಷತೆಯ ಸ್ಕೋರ್ನೊಂದಿಗೆ ವಿಜಯಶಾಲಿಯಾಗಿ ಹೊರಹೊಮ್ಮಿದರು.
ಇದನ್ನೂ ಓದಿ : ಇಂಟರ್ನೆಟ್ ಇಲ್ಲದಿದ್ದರೂ google pay ಮೂಲಕ ಹಣ ಕಳುಹಿಸಬಹುದು..! ಜಸ್ಟ್ ಹೀಗೆ ಮಾಡಿ..
10 ಲಕ್ಷ ರೂ ಗೆಲ್ಲಬಹುದು :
ಒಳ್ಳೆಯ ಸುದ್ದಿ ಏನೆಂದರೆ,ನೀವು ಕೂಡಾ ಈ ವರ್ಷದ ಮುಂದಿನ ಸ್ಲೀಪ್ ಚಾಂಪಿಯನ್ ಕಿರೀಟವನ್ನು ಅಲಂಕರಿಸುವ ಅವಕಾಶವಿದೆ. ಹಿಂದಿನ ಸೀಸನ್ಗಳ ಯಶಸ್ಸಿನ ಆಧಾರದ ಮೇಲೆ, ವೇಕ್ಫಿಟ್ ತನ್ನ ಸ್ಲೀಪ್ ಇಂಟರ್ನ್ಶಿಪ್ನ ನಾಲ್ಕನೇ ಆವೃತ್ತಿಗೆ ಈಗಾಗಲೇ ನೋಂದಣಿ ಆರಂಭಿಸಿದೆ. ಈ ಬಾರಿಯಾ ಮೊತ್ತ ಇನ್ನಷ್ಟು ಹೆಚ್ಚಿದ್ದು, ವಿಜೇತರು 10 ಲಕ್ಷದವರೆಗೆ ಗಳಿಸುವ ಅವಕಾಶವಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.