ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹಿರಿಯ ಪುತ್ರಿ ಧೃತಿ ವಿದೇಶದಲ್ಲಿ ಓದುತ್ತಿರುವ ಕಾಲೇಜು ಯಾವುದು ಗೊತ್ತಾ? ಅಲ್ಲಿನ ಫೀಸ್‌ ಎಷ್ಟು?

Drithi Puneeth Rajkumar College: ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಅಧ್ಯಯನಕ್ಕೆಂದು ವಿದೇಶಕ್ಕೆ ತೆರಳುತ್ತಾರೆ. ಇನ್ನು ಅಧಿಕೃತ ವರದಿಯೊಂದರ ಪ್ರಕಾರ ಕಳೆದ ವರ್ಷ ಸುಮಾರು 7.5 ಲಕ್ಷ ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ತೆರಳಿದ್ದಾರೆ. ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾ ಮತ್ತು ಕೆನಡಾ ಹೀಗೆ ಅನೇಕ ದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /10

ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಅಧ್ಯಯನಕ್ಕೆಂದು ವಿದೇಶಕ್ಕೆ ತೆರಳುತ್ತಾರೆ. ಇನ್ನು ಅಧಿಕೃತ ವರದಿಯೊಂದರ ಪ್ರಕಾರ ಕಳೆದ ವರ್ಷ ಸುಮಾರು 7.5 ಲಕ್ಷ ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ತೆರಳಿದ್ದಾರೆ. ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾ ಮತ್ತು ಕೆನಡಾ ಹೀಗೆ ಅನೇಕ ದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.  

2 /10

ಬ್ರಿಟನ್ ಮತ್ತು ಅಮೆರಿಕದ ಉನ್ನತ ಸಂಸ್ಥೆಗಳು ಉನ್ನತ ಶಿಕ್ಷಣಕ್ಕಾಗಿ ಭಾರತೀಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಮ್ಯಾಸಚೂಸೆಟ್ಸ್ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳು ಉತ್ತಮ ಶಿಕ್ಷಣವನ್ನು ಒದಗಿಸುತ್ತದೆ. ಅಂತಹದರಲ್ಲಿ ಒಂದು ಸ್ಕೂಲ್‌ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್. ಇದನ್ನು ಪಾರ್ಸನ್ಸ್ ಎಂದೂ ಸಹ ಕರೆಯಲಾಗುತ್ತದೆ.  

3 /10

ಇದೇ ಸ್ಕೂಲ್‌ನಲ್ಲಿ ದಿವಂಗತ ನಟ ಪುನೀತ್‌ ರಾಜ್‌ ಕುಮಾರ್‌ ಅವರ ಪುತ್ರಿ ಓದುತ್ತಿರುವುದು. ಇದು ನ್ಯೂಯಾರ್ಕ್ ನಗರದ ಗ್ರೀನ್‌ವಿಚ್ ವಿಲೇಜ್ ಬಳಿಯಿದ್ದು ಕಲೆ ಮತ್ತು ವಿನ್ಯಾಸ ಕಲಿಸಿಕೊಡು ಕಾಲೇಜಾಗಿದೆ.  

4 /10

1896ರಲ್ಲಿ ಸ್ಥಾಪಿಸಲಾದ ಪಾರ್ಸನ್ಸ್, ನ್ಯೂಯಾರ್ಕ್‌ನ ಅತ್ಯಂತ ಹಳೆಯ ಕಲೆ ಮತ್ತು ವಿನ್ಯಾಸ ಶಾಲೆಗಳಲ್ಲಿ ಒಂದಾಗಿದೆ. ಇಲ್ಲಿ ಫ್ಯಾಶನ್ ಡಿಸೈನ್, ಇಂಟೀರಿಯರ್ ಡಿಸೈನ್, ಜಾಹೀರಾತು, ಗ್ರಾಫಿಕ್ ಡಿಸೈನ್, ಟ್ರಾನ್ಸ್‌ಡಿಸಿಪ್ಲಿನರಿ ಡಿಸೈನ್ ಮತ್ತು ಲೈಟಿಂಗ್ ಡಿಸೈನ್‌ ಕಲಿಸಿಕೊಡಲಾಗುತ್ತದೆ.  

5 /10

2022 ರಲ್ಲಿ, ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ಯುನೈಟೆಡ್ ಸ್ಟೇಟ್ಸ್‌ನ ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದಲ್ಲಿ ಉನ್ನತ ಕಲೆ ಮತ್ತು ವಿನ್ಯಾಸ ಶಾಲೆಯಾಗಿ ಶ್ರೇಯಾಂಕವನ್ನು ಪಡೆದಿದೆ. ಈ ವರದಿಯ ಪ್ರಕಾರ, ಪಾರ್ಸನ್ಸ್ ಸ್ಕೂಲ್‌ ಕಲೆ ಮತ್ತು ವಿನ್ಯಾಸ ವಿಭಾಗದಲ್ಲಿ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ. ಅಷ್ಟೇ ಅಲ್ಲದೆ 2021 ರಲ್ಲಿ ಫೋರ್ಬ್ಸ್, ಪಾರ್ಸನ್ಸ್ ಅನ್ನು ಅಮೆರಿಕಾದ ಉನ್ನತ ವಿನ್ಯಾಸ ಶಾಲೆಗಳಲ್ಲಿ ಒಂದೆಂದು ಹೆಸರಿದೆ.  

6 /10

ಇನ್ನು ಈ ಸ್ಕೂಲ್‌ನ ಫೀಸ್‌ ಸ್ಟ್ರಕ್ಚರ್‌ ಬಗ್ಗೆ ತಿಳಿಯುವುದಾದರೆ, ಇಲ್ಲಿನ ಟ್ಯೂಷನ್‌, ಬುಕ್ಸ್‌ ಆಂಡ್‌ ಸಪ್ಲೈ ಮತ್ತು ಊಟದ ಯೋಜನೆಗಳನ್ನು ಒಳಗೊಂಡಂತೆ ವಿವಿಧ ಶುಲ್ಕಗಳನ್ನು ಹೊಂದಿದೆ. ಅವುಗಳ ಬಗ್ಗೆ ಇಲ್ಲಿದೆ ವರದಿ.  

7 /10

ಪೂರ್ಣ ಸಮಯದ ವಿವಿಧ ವಿಭಾಗಗಳ ಟ್ಯೂಷನ್‌ ಫೀಸ್‌ ಪ್ರತಿ ಸೆಮಿಸ್ಟರ್‌ ಬದಲಾಗುತ್ತದೆ. ಅಂದರೆ ಒಂದು ಸೆಮಿಸ್ಟರ್‌ಗೆ $28,013–$28,989 ವರೆಗೆ ಇದ್ದೇ ಇರುತ್ತದೆ. ಇನ್ನು ಪುಸ್ತಕಗಳು ಮತ್ತು ಸರಬರಾಜುಗಳ ಫೀಸ್‌ ವರ್ಷಕ್ಕೆ ಸರಾಸರಿ $2,050 ವೆಚ್ಚವಾಗುತ್ತದೆ.  

8 /10

ಇನ್ನು ಊಟದ ವಿಚಾರದಲ್ಲಿ ಪ್ಲಾನ್‌ಗಳನ್ನು ಮಾಡಿದ್ದು, ವನ್‌ ಮೀಲ್‌, ಟು ಮೀಲ್‌, ತ್ರಿ ಮೀಲ್‌ ಅಥವಾ ಎಕ್ಸ್‌ಪ್ರೆಸ್ ಪ್ಲಾನ್‌ ಎಂಬಂತೆ ವಿವಿಧ ರೀತಿಯ ಊಟದ ಯೋಜನೆಗಳಿವೆ. ಅವುಗಳಲ್ಲಿ ಒಂದನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಬಹುದು. ಒಂದು ಪ್ಲಾನ್‌ಗೆ $1,700, ಎರಡು ಪ್ಲಾನ್‌ಗೆ $2,940, ಮೂರು ಪ್ಲಾನ್‌ಗೆ $3,425 ಮತ್ತು ಎಕ್ಸ್‌ಪ್ರೆಸ್‌ ಪ್ಲಾನ್‌ಗೆ $850 ವೆಚ್ಚವಾಗುತ್ತದೆ.  

9 /10

ಇನ್ನು ವಿಶ್ವವಿದ್ಯಾನಿಲಯದ ವಸತಿ ವೆಚ್ಚವು ಹಾಲ್, ಕೋಣೆಯ ಪ್ರಕಾರ ನಿಗದಿಯಾಗುತ್ತದೆ. ಒಂದು ವೇಳೆ ವಿದ್ಯಾರ್ಥಿಯು ಹೊಸಬರಗಾಗಿದ್ದರೆ ಒಂದು ರೀತಿಯ ಫೀಸ್‌, ಮುಂದುವರಿಯುವ ವಿದ್ಯಾರ್ಥಿಯಾಗಿದ್ದರೆ ಮತ್ತೊಂದು ವಿಧಾನದ ಫೀಸ್‌ ಇರುತ್ತದೆ.  

10 /10

ಇನ್ನು ಈ ಶಾಲೆಯಲ್ಲಿ ಹಣಕಾಸಿನ ನೆರವು ಪ್ಯಾಕೇಜ್‌ಗಳು ಹಣಕಾಸಿನ ಅಗತ್ಯಕ್ಕೆ ಅನುಗುಣವಾಗಿ ಬದಲಾಗುತ್ತವೆ. ಜೊತೆಗೆ ಅನುದಾನಗಳು, ಸಾಲಗಳು, ವಿದ್ಯಾರ್ಥಿವೇತನಗಳು ಮತ್ತು ಕೆಲಸದ ಜೊತೆಗೆ ಅಧ್ಯಯನ ಉದ್ಯೋಗಗಳನ್ನು ಸಹ ಒಳಗೊಂಡಿದೆ.