Sugar Signs: ರಾತ್ರಿ ವೇಳೆ ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು ಸಕ್ಕರೆ ಕಾಯಿಲೆಯ ಸಾಮಾನ್ಯ ಲಕ್ಷಣವಾಗಿದೆ.
Diabetes Warning Signs: ಆಗಾಗ್ಗೆ ಮೂತ್ರ ವಿಸರ್ಜನೆಯನ್ನು ಹೊರತುಪಡಿಸಿ ಕಂಡು ಬರುವ ಇತರೆ ಕೆಲವು ಲಕ್ಷಣಗಳು ಕೂಡ ಡಯಾಬಿಟಿಸ್ ನ ರೋಗಲಕ್ಷಣವನ್ನು ಸಾರಿ ಹೇಳುವ ಎಚ್ಚರಿಕೆಯ ಗಂಟೆಗಳಾಗಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಇಡೀ ವಿಶ್ವದಲ್ಲಿ ಭಾರತದಲ್ಲಿ ಮಧುಮೆಹಿಗಳ ಸಂಖ್ಯೆ ಅಧಿಕವಾಗಿದೆ. ಮಧುಮೇಹ ಅಥವಾ ಡಯಾಬಿಟಿಸ್ ದೀರ್ಘಾವಧಿಯ ಕಾಯಿಲೆಯಾಗಿದ್ದು ಇದನ್ನು ಸರಿಯಾಗಿ ನಿರ್ವಹಿಸದಿದ್ದರೆ ಮಾರಣಾಂತಿಕವಾಗಿಯೂ ಪರಿಣಮಿಸಬಹುದು.
ರಾತ್ರಿ ವೇಳೆ ಪದೇ ಪದೇ ಮೂತ್ರ ವಿಸರ್ಜನೆಗಾಗಿ ಏಳುವುದು ಸಕ್ಕರೆ ಕಾಯಿಲೆಯ ಸಾಮಾನ್ಯ ಲಕ್ಷಣವೇ ಆದರೂ, ಇದನ್ನು ಹೊರತುಪಡಿಸಿ ಇನ್ನೂ ಕೆಲ ಚಿಹ್ನೆಗಳು ಕೂಡ ದೇಹವು ಡಯಾಬಿಟಿಸ್ ಕಾಯಿಲೆಗೆ ಒಳಗಾಗಿರಬಹುದು ಎಂಬುದರ ಎಚ್ಚರಿಕೆಯ ಗಂಟೆಗಳಾಗಿವೆ. ಅಂತಹ ಲಕ್ಷಣಗಳೆಂದರೆ....
ಅತಿಯಾದ ಬಾಯಾರಿಕೆ ಅಥವಾ ಪಾಲಿಡಿಪ್ಸಿಯಾ ಕೂಡ ದೇಹದಲ್ಲಿ ಶುಗರ್ ಹೆಚ್ಚಾಗಿರುವುದನ್ನು ಸೂಚಿಸುತ್ತದೆ.
ರಾತ್ರಿ ವೇಳೆ ಅತಿಯಾದ ಆಯಾಸವನ್ನು ಅನುಭವಿಸುತ್ತಿದ್ದರೆ ದೇಹದಲ್ಲಿ ಗ್ಲೂಕೋಸ್ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗುತ್ತಿಲ್ಲ. ಶುಗರ್ ಏರುಪೇರಾಗಿರಬಹುದು ಎಂಬುದರ ಸಂಕೇತವಾಗಿದೆ.
ದೇಹದಲ್ಲಿ ಶುಗರ್ ಹೆಚ್ಚಾಗಿದ್ದರೆ ಆಗಾಗ್ಗೆ ಕಣ್ಣುಗಳಲ್ಲಿನ ಮಸೂರಗಳು ಊದಿಕೊಳ್ಳಬಹುದು. ಕೆಲವೊಮ್ಮೆ ದೃಷ್ಟಿಯೂ ಮಸುಕಾಗಬಹುದು.
ಉದ್ದೇಶಪೂರ್ವಕವಲ್ಲದ ಅತಿಯಾದ ತೂಕ ನಷ್ಟವು ಮಧುಮೇಹವನ್ನು ಸೂಚಿಸುತ್ತದೆ.
ಯಾವುದಾದರೂ ಸಣ್ಣ ಗಾಯವೂ ಕೂಡ ಬೇಗ ಗುಣಮುಖವಾಗದೆ ಇರುವುದು ಸಹ ಹೈ ಶುಗರ್ ಸಮಸ್ಯೆಯ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.