Chikkanna Darshan Case : ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ತನಿಖೆ ಮುಕ್ತಾಯ ಹಂತಕ್ಕೆ ಬಂದಿದೆ.. ಈ ನಡುವೆ ಇದೇ ತಿಂಗಳ ಕೊನೆ ವಾರದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಗೆ ಪೊಲೀಸ್ರು ತಯಾರಿ ನಡೆಸಿದ್ದಾರೆ. ಹೀಗಿರುವಾಗ ಶೆಡ್ ನಕ್ಷೆ ಪೊಲೀಸ್ರ ಕೈ ಸೇರಿದ್ದು, ಹಾಸ್ಯ ನಟ ಚಿಕ್ಕಣ್ಣನಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಹಾಗಿದ್ರೆ ಕೊಲೆ ಕೇಸ್ ನಲ್ಲಿ ರಿಪೋರ್ಟ್ ವಿಚಾರವಾಗಿ ಕಮಿಷನರ್ ಏನಂದ್ರು ಅಂತಾ ತೋರಿಸ್ತೀವಿ ನೋಡಿ.
ಹೌದು.. ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆಯನ್ನ ಮುಗಿಸಿರೋ ಪೊಲೀಸ್ರು ಚಾರ್ಜ್ ಶೀಟ್ ಸಲ್ಲಿಕೆಗೆ ತಯಾರಿ ನಡೆಸಿದ್ದಾರೆ. ಹೀಗಿರುವಾಗ್ಲೇ ಪೆಂಡಿಂಗ್ ಇದ್ದ ಮೆಡಿಕಲ್ ಎಫ್ ಎಸ್ ಎಲ್ ರಿಪೋರ್ಟ್ ಹಾಗೂ ಬೆಂಗಳೂರಿನ ಬಹುತೇಕ ಎಲ್ಲಾ ಎಫ್ ಎಸ್ ಎಲ್ ರಿಪೋರ್ಟ್ ಪೊಲೀಸರ ಕೈ ಸೇರಿದೆ.. ಈ ಮಧ್ಯೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕೊಲೆಯ ಭೀಕರತೆ ಬೆಳಕಿಗೆ ಬಂದಿದೆ. ರೇಣುಕಾಸ್ವಾಮಿ ಮೃತದೇಹದ ಮೇಲೆ 39 ಗಾಯದ ಗುರುತು ಪತ್ತೆಯಾಗಿದೆ. ಪ್ರಮುಖವಾಗಿ ಎದೆಮೂಳೆ ಮುರಿತ, ತಲೆಯಲ್ಲಿ ಆಳವಾದ ಗಾಯ ಪತ್ತೆ. ವೃಷಣಕ್ಕೆ ಹಾನಿ ಹಾಗೂ ಕರೆಂಟ್ ಶಾಕ್ ಕೊಟ್ಟಿರೋ ರಿಪೋರ್ಟ್ ಕೂಡ ಸಿಕ್ಕಿದೆ.
ಇದನ್ನೂ ಓದಿ:ಲವರ್‌ನ ಫ್ರೇಂಡ್ಸ್‌ಗೆ ಪರಿಚಯಿಸುವ ಮುನ್ನ ಹುಷಾರ್ ಹುಡುಗರೇ..! ನಿಮ್ ಜೊತೆ ಬ್ರೇಕಪ್ ಆದ್ರೂ... ಅವನು
ಇನ್ನು ದಚ್ಚು ನೋಡಲು ಜೈಲಿಗೆ ಎಂಟ್ರಿ ಕೊಟ್ಟಿದ್ದ ನಟ ಚಿಕ್ಕಣ್ಣನಿಗೆ ಮತ್ತೆ ಸಂಕಷ್ಟ ಎದುರಾಗಿದೆ. CRPC 164 ಅಡಿ ನ್ಯಾಯಾಧೀಶರ ಮುಂದೆ ದರ್ಶನ್ ವಿರುದ್ದ ಹೇಳಿಕೆ ದಾಖಲಿಸಿರೋ ಚಿಕ್ಕಣ್ಣ, ಸೆಂಟ್ರಲ್ ಜೈಲಿನಲ್ಲಿ ದರ್ಶನ್ ನನ್ನ ಚಿಕ್ಕಣ್ಣ ಭೇಟಿ ಮಾಡಿದ್ದಾರೆ. ಹೀಗಾಗಿ ಚಿಕ್ಕಣ್ಣ ನಡೆ ಕುರಿತು ಹಲವು ಅನುಮಾನವಿದ್ದು, ಮತ್ತೆ ಚಿಕ್ಕಣ್ಣಗೆ ಪೊಲೀಸರು ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.
ತನಿಖೆ ಪ್ರಗತಿಯಲ್ಲಿರೋ ಸಂದರ್ಭದಲ್ಲೇ ಆರೋಪಿಯನ್ನ ಭೇಟಿ ಮಾಡಿರುವ ಉದ್ದೇಶ ಹಾಗೂ ಚರ್ಚೆಯ ಮಾಹಿತಿ ಪಡೆಯಲಿದ್ದಾರೆ. ಇದಲ್ಲದೆ ಬಹುತೇಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಎಲ್ಲಾ ಸಿದ್ದತೆ ನಡೆದಿದ್ದ, ಎಲೆಕ್ಟ್ರಿಕ್ ಡಿವೈಎಸ್ ಗಳ ರಿಪೋರ್ಟ್ ಪಡೆಯಲು ಹೈದ್ರಾಬಾದ್ ಗೆ ತನಿಖಾ ತಂಡ ತೆರಳಿದೆ. ಅಲ್ಲಿ ರಿಪೋರ್ಟ್ ರೆಡಿಯಿದ್ದು, ಬೆಂಗಳೂರಿಗೆ ವಾಪಸ್ ಆಗಿ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ದತೆ ಮಾಡಲಿದ್ದಾರೆ. ಹಾಗೇ ಚಿಕ್ಕಣ್ಣ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗುವ ಬಗ್ಗೆ ಕಮಿಷನರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ವಾಲ್ಮೀಕಿ ನಿಗಮದ ಅಧ್ಯಕ್ಷ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ: ಸಿಐಡಿ ತಂಡದಿಂದ ಚಾರ್ಜ್ ಶೀಟ್ ಸಲ್ಲಿಕೆ
ಇನ್ನು ರೇಣುಕಾಸ್ವಾಮಿ ಹತ್ಯೆ ವೇಳೆ ಕರೆಂಟ್ ಶಾಕ್ ಕೊಟ್ಟಿರೋದು ಧೃಡವಾಗಿದೆ..ಪೊಲೀಸರಿಗೆ ಮೆಗ್ಗಾರ್ ಯಂತ್ರದ ರಿಪೋರ್ಟ್ ಕೈ ಸೇರಿದ್ದು ಶಾಕ್ ಕೊಟ್ಟಿರೋದು ಸಹ ಎಫ್ ಎಸ್ ಎಲ್ ನಲ್ಲಿ ತಿಳಿದುಬಂದಿದೆ..ಹಲ್ಲೆ ನಡೆಸುವಾಗ ಪ್ರಜ್ಞೆತಪ್ಪಿರುವ ವೇಳೆ ಶಾಕ್ ಕೊಡಲಾಗಿದೆ ಎನ್ನಲಾಗಿದೆ.. ಇದಲ್ಲದೆ ಪೊಲೀಸರಿಗೆ ಪಟ್ಟಣಗೆರೆ ಶೆಡ್ ನಕ್ಷೆಯೂ ಸಿಕ್ಕಿದೆ. ರೇಣುಕಾಸ್ವಾಮಿ ಹಲ್ಲೆ, ಹತ್ಯೆ ನಡೆಸಿದ ಜಾಗದ ನಕ್ಷೆಯ ವರದಿಯನ್ನ ಲೋಕೋಪಯೋಗಿ ಇಲಾಖೆಯಿಂದ ಪಡೆಯಲಾಗಿದೆ. ಹತ್ಯೆ ಹಾಗೂ ಹಲ್ಲೆ ನಡೆಸಿದ ಜಾಗದ ವಿಸ್ತೀರ್ಣದ ಬಗ್ಗೆ ಪೊಲೀಸ್ರು ಮಾಹಿತಿ ಕೇಳಿದ್ದು, ಹಲ್ಲೆ ನಡೆಸಿದ ಸ್ಥಳದ ವಿಸ್ತೀರ್ಣ ಜಾಸ್ತಿಯಿದ್ದು, ಕೊಲೆ ನಡೆಸಿದ ಸ್ಥಳದ ವಿಸ್ತೀರ್ಣದ ಕಡಿಮೆ ಇರುವ ಬಗ್ಗೆ ಮಾಹಿತಿ ನೀಡಲಾಗಿದೆ.
ಇನ್ನೂ ಕೊಲೆ ಪ್ರಕರಣದಲ್ಲಿ A16 ಆರೋಪಿಯಾಗಿರುವ ಕೇಶವಮೂರ್ತಿಯಿಂದ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿದೆ. ವಿಚಾರಣೆ ನಡೆಸಿದ CCH-57 ನ್ಯಾಯಾಧೀಶರು ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಪೊಲೀಸರಿಗೆ ನೋಟೀಸ್ ನೀಡಿ ಅರ್ಜಿ ವಿಚಾರಣೆಯನ್ನು ಆಗಸ್ಟ್ 27ಕ್ಕೆ ಮುಂದೂಡಿದೆ. ಒಟ್ಟಾರೆಯಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದು, ಮುಂದಿನ ಹಂತದಲ್ಲಿ ಏನಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.