Health Tips: ಬೇವಿನ ಎಲೆಯ ನೀರಿನ ಸ್ನಾನದಿಂದ ತ್ವಚೆಗೆ ಸಿಗುವ ಅದ್ಭುತ ಪ್ರಯೋಜನಗಳು

Bathing With Neem Leaves Water: ಅತಿಯಾದ ಬೆವರುವಿಕೆಗೆ ದೇಹದಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗುವುದೇ ಕಾರಣ. ಇಂತಹ ಪರಿಸ್ಥಿತಿಯಲ್ಲಿ ಬೇವಿನ ಸೊಪ್ಪಿನ ನೀರಿನಿಂದ ಸ್ನಾನ ಮಾಡುವುದರಿಂದ ಬೆವರಿನ ದುರ್ವಾಸನೆ ದೂರವಾಗಿ ತ್ವಚೆಯ ರಕ್ಷಣೆಯಾಗುತ್ತದೆ. 

Benefits Of Bathing With Neem Infused Water: ಬೇವು ಆಂಟಿ-ಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಇದು ದೇಹಕ್ಕೆ ಹಾನಿಯನ್ನುಂಟು ಮಾಡುವ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ಉತ್ತಮ ಆಂಟಿ-ಬ್ಯಾಕ್ಟೀರಿಯಲ್‌ ಏಜೆಂಟ್‌ ಆಗಿ ಕಾರ್ಯನಿರ್ವಹಿಸುತ್ತದೆ. ಬೇವಿನ ಎಲೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ತ್ವಚೆಯ ಹಲವಾರು ಸಮಸ್ಯೆಗಳು ಗುಣವಾಗುತ್ತವೆ. ಇದು ನಿಮ್ಮ ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಬೇವಿನ ಎಲೆಗಳನ್ನು ತ್ವಚೆಯ ಆರೋಗ್ಯಕ್ಕೆ ಹೇಗೆ ಬಳಸಬಹುದು ಮತ್ತು ಇದರ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಬೇವಿನ ಎಲೆಗಳು ಮುಖದ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ತುಂಬಾ ಪರಿಣಾಮಕಾರಿಯಾಗಿದೆ. ಬೇವಿನ ಎಲೆಗಳನ್ನು ಪೇಸ್ಟ್‌ ಮಾಡಿ ಮತ್ತು ಅದಕ್ಕೆ ೨ ಚಮಚ ಮೊಸರನ್ನು ಬೆರೆಸಿ ಮುಖದ ಮೇಲೆ ಹಚ್ಚಬೇಕು. ಇದು ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. 

2 /5

ಅತಿಯಾದ ಬೆವರುವಿಕೆಗೆ ದೇಹದಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗುವುದೇ ಕಾರಣ. ಇಂತಹ ಪರಿಸ್ಥಿತಿಯಲ್ಲಿ ಬೇವಿನ ಸೊಪ್ಪಿನ ನೀರಿನಿಂದ ಸ್ನಾನ ಮಾಡುವುದರಿಂದ ಬೆವರಿನ ದುರ್ವಾಸನೆ ದೂರವಾಗಿ ತ್ವಚೆಯ ರಕ್ಷಣೆಯಾಗುತ್ತದೆ. 

3 /5

ವಾರಕ್ಕೊಮ್ಮೆ ಬೇವು ಅಥವಾ ಬೇವಿನ ಎಲೆಯ ನೀರಿನಿಂದ ತಲೆಗೆ ಸ್ನಾನ ಮಾಡುವುದರಿಂದ ಹೇನು & ತಲೆಹೊಟ್ಟು ನಿವಾರಣೆಯಾಗುತ್ತದೆ. ಬೇವಿನ ಎಲೆಯ ನೀರಿನ್ನು ಬಳಸುವಾಗ ಶಾಂಪೂ ಬಳಸದಿರುವುದು ಉತ್ತಮ. ದೇಹದಲ್ಲಿ ಗುಳ್ಳೆಗಳು & ಹುಣ್ಣುಗಳಿಂದ ಬಳಲುತ್ತಿರುವವರಿಗೆ ಬೇವಿನ ಎಲೆಯ ನೀರಿನ ಸ್ನಾನವು ರಾಮಬಾಣವಾಗಿದೆ. ಇದು ದೇಹದ ಮೇಲಿನ ಗುಳ್ಳೆಗಳು & ದದ್ದುಗಳ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. 

4 /5

ಬೇವಿನ ಎಲೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ಮೊಡವೆ ಸಮಸ್ಯೆಗಳು ನಿವಾರಣೆಯಾಗಿ ನಿಮ್ಮ ಮುಖ ಕಾಂತಿಯುತವಾಗುತ್ತದೆ. ಬೇವಿನ ಎಲೆಯ ನೀರಿನಿಂದ ಮುಖವನ್ನು ತೊಳೆದರೆ ಮುಖದ ಮೇಲೆ ನೈಸರ್ಗಿಕ ಹೊಳಪು ಕಾಣಬಹುದು. ಬೇವಿನ ಎಲೆಯ ನೀರಿನಿಂದ ತಲೆ ಸ್ನಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ ಮತ್ತು ಕೂದಲು ಆರೋಗ್ಯಕರವಾಗಿರುತ್ತದೆ. 

5 /5

ಒಂದು ಪಾತ್ರೆ ಬಿಸಿನೀರಿನಲ್ಲಿ ಬೇವಿನ ಎಲೆಗಳನ್ನು ತೊಳೆದು ಹಾಕಿ ಅದರ ಬಣ್ಣ ಬಿಡುವವರೆಗೂ ಶೋಧಿಸಿ ಸ್ನಾನದ ನೀರಿನಲ್ಲಿ ಮಿಶ್ರಣ ಮಾಡಬೇಕು. ವಾರದಲ್ಲಿ ಎರಡರಿಂದ ಮೂರು ಬಾರಿ ಈ ನೀರಿನಿಂದ ಸ್ನಾನ ಮಾಡಬೇಕು.