ಸಾಕಷ್ಟು ಪ್ರಯತ್ನಗಳ ಬಳಿಕವೂ ಕೂಡ ದೇಶಾದ್ಯಂತ ಆನ್ಲೈನ್ ಬ್ಯಾಂಕ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ ವರ್ಷ 2019-20ರ ಮೊದಲ ಮೂರು ತಿಂಗಳ ಅವಧಿಯಲ್ಲಿ 1.13 ಲಕ್ಷ ಕೋಟಿ ರೂ.ಗಳ ವಂಚನೆ ಎಸಗಲಾಗಿದೆ ಎನ್ನಲಾಗಿದೆ. ಬ್ಯಾಂಕ್ ವಂಚನೆಯ ಪ್ರಕರಣಗಳಲ್ಲಿ ಕಳೆದುಕೊಂಡ ಅತಿ ಹೆಚ್ಚು ಮೊತ್ತ ಇದಾಗಿದೆ. ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ಇ-ಕಾಮರ್ಸ್ ವ್ಯವಹಾರಗಳನ್ನು ಸುರಕ್ಷಿತಗೊಳಿಸಲು ಬ್ಯಾಂಕ್ ಗಳು ವರ್ಚುವಲ್ ಕಾರ್ಡ್ ಸೌಲಭ್ಯ ಕೂಡ ನೀಡುತ್ತವೆ. ಇದೊಂದು ಇ-ಕಾರ್ಡ್ ವ್ಯವಸ್ಥೆಯಾಗಿದ್ದು, ಆನ್ಲೈನ್ ನಲ್ಲಿ ವಸ್ತುಗಳ ಖರೀದಿಗೆ ಇದು ಅನುಕೂಲಕರವಾಗಿದೆ. ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ SBI ಕೂಡ ತನ್ನ ಗ್ರಾಹಕರಿಗೆ ವರ್ಚ್ಯುವಲ್ ಕಾರ್ಡ್ ವ್ಯವಸ್ಥೆ ನೀಡುತ್ತದೆ. ಮಾಸ್ಟರ್ ಕಾರ್ಡ್ ಹಾಗೂ ವಿಸಾ ಕಾರ್ಡ್ ಗಳಿಗೆ ಅನುಮತಿ ನೀಡುವ ಎಲ್ಲ ವೆಬ್ಸೈಟ್ ಗಳೂ ಕೂಡ ಈ ಕಾರ್ಡ್ ಗೆ ಅನುಮತಿ ನೀಡುತ್ತವೆ.
ನಿಮ್ಮ ಅಕೌಂಟ್ ಮಾಹಿತಿ ನೀಡುವ ಅವಶ್ಯಕತೆ ಇಲ್ಲ
ಆನ್ಲೈನ್ ವ್ಯವಹಾರ ನಡೆಸಲು ಇದೊಂದು ಸುಲಭ ಹಾಗೂ ಸುರಕ್ಷಿತ ಪದ್ಧತಿಯಾಗಿದ್ದು, ಇದರಲ್ಲಿ ನೀವು ವ್ಯಾಪಾರಿಗಳಿಗೆ ನಿಮ್ಮ ಪ್ರೈಮರಿ ಹಾಗೂ ಅಕೌಂಟ್ ಸಂಖ್ಯೆ ನೀಡುವ ಅಗತ್ಯವಿಲ್ಲ. ಇದರಿಂದ ಯಾವುದೇ ರೀತಿಯ ವಂಚನೆಯಾಗುವ ಸಾಧ್ಯತೆ ಇಲ್ಲ.
ವರ್ಚ್ಯುವಲ್ ಕಾರ್ಡ್ ನ ವೈಶಿಷ್ಟ್ಯಗಳು ಏನು?
SBI ನ ವರ್ಚ್ಯುವಲ್ ಕಾರ್ಡ್ ಒಂದು ಸಿಂಗಲ್ ಯುಜ್ ಕಾರ್ಡ್ ಆಗಿದೆ. ಇದನ್ನು ನೀವು ಕೇವಲ ಒಂದು ಬಾರಿ ಬಳಕೆ ಮಾಡಬಹುದು. ಎರಡನೇ ಬಾರಿಗೆ ಇದು ನಿಷ್ಕ್ರೀಯವಾಗಲಿದೆ. SBI ವರ್ಚ್ಯುವಲ್ ಕಾರ್ಡ್ ಧಾರಕರು ಖರೀದಿಯ ವೇಳೆ ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸಬಹುದು.
ಆನ್ಲೈನ್ ವ್ಯವಹಾರದ ವೇಳೆ SBIನ ವರ್ಚ್ಯುವಲ್ ಕಾರ್ಡ್ ಧಾರಕರ ಅಧಕೃತ ಮೊಬೈಲ್ ಸಂಖ್ಯೆಗೆ OTP ಕಳುಹಿಸುವ ಮೂಲಕ ವ್ಯವಹಾರವನ್ನು ಖಾತರಿಪಡಿಸಲಾಗುತ್ತದೆ.
ಈ ಕಾರ್ಡ್ 48 ಗಂಟೆಗಳವರೆಗೆ ಸಕ್ರೀಯವಾಗಿರುತ್ತದೆ. ಈ ವರ್ಚುವಲ್ ಕಾರ್ಡ್ ನ ಕನಿಷ್ಠ ವ್ಯವಹಾರದ ಮೊತ್ತ ರೂ.100 ಆಗಿದ್ದರೆ, ಗರಿಷ್ಠ ಮೊತ್ತ ರೂ.50,000 ಆಗಿರಲಿದೆ.
ಈ ಕಾರ್ಡ್ ನಲ್ಲಿ ಗ್ರಾಹಕರ ಖಾತೆಯ ಒಟ್ಟು ಠೇವಣಿಯನ್ನು ವರ್ಗಾಯಿಸಲಾಗುವುದಿಲ್ಲ. ಇದರಲ್ಲಿ ನೀವು ರಿಚಾರ್ಜ್ ಮಾಡುವ ಮೊತ್ತವನ್ನು ಮಾತ್ರ ವರ್ಗಾಯಿಸಲಾಗುತ್ತದೆ.
ಆನ್ಲೈನ್ ವ್ಯವಹಾರಕ್ಕಾಗಿ ಹಲವು ಬಾರಿ ನೀವು ಈ ಕಾರ್ಡ್ ಪಡೆದುಕೊಳ್ಳಬಹುದಾಗಿದೆ. ಕಾರ್ಡ್ ಎಕ್ಸ್ಪೈರ್ ಆದ ಸಂದರ್ಭದಲ್ಲಿ ಕಾರ್ಡ್ ನಲ್ಲಿ ನೀವು ವರ್ಗಾಯಿಸಿದ ಮೊತ್ತವನ್ನು ವಾಪಸ್ ಪಡೆಯಬಹುದು.
ಈ ಕಾರ್ಡ್ ಹೇಗೆ ಪಡೆಯಬೇಕು?
ಮೊದಲು SBIನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಿಮ್ಮ ಆನ್ಲೈನ್ ಖಾತೆಗೆ ಲಾಗ್ ಇನ್ ಆಗಬೇಕು.
ವೆಬ್ ಸೈಟ್ ನ ಮೇಲ್ಭಾಗದಲ್ಲಿರುವ 'e-CARD' ಆಯ್ಕೆಯ ಮೇಲೆ ಕ್ಲಿಕ್ಕಿಸಿ.
ಬಳಿಕ 'GENERATE VIRTUAL CARD' ಆಯ್ಕೆ ಕ್ಲಿಕ್ಕಿಸಿ.
ಈಗ ನೀವು ನಿಮ್ಮ ವರ್ಚ್ಯುವಲ್ ಕಾರ್ಡ್ ಗೆ ವರ್ಗಾಗಿಸಬೇಕಾಗಿರುವ ಮೊತ್ತವನ್ನು ನಮೂದಿಸಿ.
ಮುಂದುವರೆಯಲು ನಿಯಮ ಹಾಗೂ ಷರತ್ತುಗಳನ್ನು ಓದಿ ಅನುಮತಿಸಿ ಹಾಗೂ 'GENERATE' ಗುಂಡಿಯನ್ನು ಕ್ಲಿಕ್ಕಿಸಿ.
ಬಳಿಕ ನಿಮ್ಮ ಕಾರ್ಡ್ ಮಾಹಿತಿ ನಮೂದಿಸಿ.
ವ್ಯವಹಾರವನ್ನು ಪ್ರಮಾಣೀಕರಿಸಲು ಬ್ಯಾಂಕ್ ಕಾರ್ಡ್ ಧಾರಾಕಾರ ಅಧಿಕೃತ ರಿಜಿಸ್ಟರ್ಡ್ ಮೊಬೈಲ್ ನಂಬರ್ ಗೆ OTP ಕಳುಹಿಸುತ್ತದೆ.
ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಸಂಖ್ಯೆ ನಮೂದಿಸಿ ವ್ಯವಹಾರವನ್ನು ಖಾತರಿಪಡಿಸಿ.
ಈ ರೀತಿ ವ್ಯವಹಾರಕ್ಕೆ ಸಿದ್ಧವಾಗಿರುವ ನಿಮ್ಮ ಕಾರ್ಡ್ ಅನ್ನು ನೀವು ಇ-ಕಾಮರ್ಸ್ ವ್ಯವಹಾರಕ್ಕಾಗಿ ಬಳಸಬಹುದಾಗಿದೆ.