Saina Nehwal on Jaspreet Bumrah: ಭಾರತದಲ್ಲಿ ಕ್ರಿಕೆಟ್ʼಗೆ ಸಿಗುವ ಪ್ರೀತಿ ಮತ್ತು ಗೌರವ ಇತರ ಕ್ರೀಡೆಗಳಿಗೆ ಸಿಗುವುದಿಲ್ಲ. ಈ ಸತ್ಯ ಕಹಿಯಾಗಿದ್ರು ನಿಜವೇ. ಶ್ರೀಮಂತಿಕೆ ಮತ್ತು ಖ್ಯಾತಿಯ ವಿಷಯದಲ್ಲಿಯೂ ಕ್ರಿಕೆಟಿಗರು ಇತರ ಕ್ರೀಡಾಪಟುಗಳಿಗಿಂತ ಬಹಳ ಮುಂದಿದ್ದಾರೆ. ಈ ವಿಚಾರವಾಗಿ ಇತರ ಕ್ರೀಡಾಪಟುಗಳು ಹಲವು ಬಾರಿ ಕ್ರಿಕೆಟಿಗರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದೂ ಇದೆ. ಇವೆಲ್ಲದರ ಮಧ್ಯೆ, ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ಭಾರತದ ಕ್ರಿಕೆಟಿಗರಿಗೆ ಹೋಲಿಸಿದರೆ ಇತರ ಕ್ರೀಡಾಪಟುಗಳಿಗೆ ಒದಗಿಸಲಾದ ಸೌಲಭ್ಯಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಇದನ್ನೂ ಓದಿ: ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ನಟ ದರ್ಶನ್ ಜೊತೆ ನಟಿಸೋಕೆ ಪಡೆದಿದ್ದ ಸಂಭಾವನೆ ಎಷ್ಟು ಕೋಟಿ ಗೊತ್ತಾ?
ಸೈನಾ ನೆಹ್ವಾಲ್ ಇತ್ತೀಚೆಗೆ ಪತ್ರಕರ್ತ-ಯೂಟೂಬರ್ ಶುಭಂಕರ್ ಮಿಶ್ರಾ ಅವರ ಪಾಡ್ ಕಾಸ್ಟ್ʼನಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ, ಪ್ಯಾರಿಸ್ ಒಲಿಂಪಿಕ್ಸ್ʼನಲ್ಲಿ ಭಾರತದ ಪ್ರದರ್ಶನ ಮತ್ತು ಕ್ರಿಕೆಟ್ʼಗೆ ಹೋಲಿಸಿದರೆ ದೇಶದ ಇತರ ಕ್ರೀಡೆಗಳ ಸ್ಥಿತಿಯ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಯಿತು. ಇದಲ್ಲದೆ, ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬಗ್ಗೆ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.
"ನಮ್ಮ ದೇಶದಲ್ಲಿ ಕ್ರಿಕೆಟ್ʼಗೆ ಮಾತ್ರ ಆದ್ಯತೆ ನೀಡಲಾಗಿದೆ. ಕ್ರಿಕೆಟಿಗರಿಗೆ ಸಿಗುವ ಸೌಲಭ್ಯಗಳು ಅಥವಾ ಆರ್ಥಿಕ ಭದ್ರತೆ ಇತರ ಕ್ರೀಡೆಗಳಿಗೆ ಸಿಗುವುದಿಲ್ಲ. ದೇಶದ ಇತರೆ ಕ್ರೀಡೆಗಳಿಗೂ ಕ್ರಿಕೆಟ್ ನಂತಹ ಸೌಲಭ್ಯ ಸಿಕ್ಕರೆ ಒಲಿಂಪಿಕ್ಸ್ ನಲ್ಲೂ ನಮ್ಮ ಸಾಧನೆ ಸುಧಾರಿಸಿ ಚೀನಾ, ಅಮೆರಿಕದಂತಹ ಪದಕಗಳನ್ನು ಗೆಲ್ಲುವಲ್ಲಿಯೂ ಯಶಸ್ವಿಯಾಗುತ್ತೇವೆ" ಎಂದಿದ್ದಾರೆ.
"ಇಂದು ಭಾರತದ ಪ್ರತಿಯೊಬ್ಬ ಹುಡುಗನೂ ಕ್ರಿಕೆಟ್ ಮತ್ತು ಫುಟ್ಬಾಲ್ ಆಡಲು ಬಯಸುತ್ತಾನೆ. ವಿರಾಟ್ ಮತ್ತು ಸಚಿನ್ ಆಗಲು ಬಯಸುತ್ತಾನೆ. ಆದರೆ ಯಾವ ಹುಡುಗನೂ ಶ್ರೀಕಾಂತ್, ಪುಲ್ಲೇಲ ಗೋಪಿಚಂದ್ ಆಗಲು, ಹುಡುಗಿಯರು ಪಿ.ವಿ. ಸಿಂಧುವಿನಂತೆಯೇ ಆಗಬೇಕು ಎಂದು ಭಾವಿಸುತ್ತಿಲ್ಲ. ಇಂದು ಐಪಿಎಲ್ ನಲ್ಲಿ ಕ್ರಿಕೆಟಿಗನೊಬ್ಬ ಮ್ಯಾಚ್ʼನಲ್ಲಿ ಸ್ಕೋರ್ ಮಾಡಿದರೆ ಮುಂದಿನ ಸೀಸನ್ ನಲ್ಲಿ 5-6 ಕೋಟಿ ರೂ.ಗೆ ಮಾರಾಟವಾಗುತ್ತಾನೆ" ಎಂದು ಸೈನಾ ಹೇಳಿದರು.
ಇದನ್ನೂ ಓದಿ: ಮುರಳಿ ವಿಜಯ್ʼಗೆ ಎಲ್ಲಿಸ್ ಪೆರ್ರಿ ಜೊತೆ ಡೇಟಿಂಗ್ ಹೋಗುವ ಆಸೆ! ಆಕೆ ಕೊಟ್ಟ ರಿಪ್ಲೈ ಮಾತ್ರ ಎಪಿಕ್
ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬಗ್ಗೆ ಮಾತನಾಡಿದ ಸೈನಾ, "ನಾನು ಕ್ರಿಕೆಟ್ ಆಡಲು ಬಯಸುತ್ತೇನೆ ಎಂದು ಹೇಳಿದರೆ, ಬುಮ್ರಾ ಅವರ 150 ಸ್ಪೀಡ್ ಬಾಲ್ʼನಿಂದ ಸಾಯಲು ನಾನು ಬಯಸುವುದಿಲ್ಲ. ಅದೇ ರೀತಿ ಬುಮ್ರಾ ನನ್ನೊಂದಿಗೆ ಬ್ಯಾಡ್ಮಿಂಟನ್ ಆಡುತ್ತೇನೆಂದಾಗ, ನಾನು 300 ಸ್ಪೀಡ್ ಸ್ಮ್ಯಾಶ್ ನಲ್ಲಿ ಹೊಡೆದರೆ ಆತನಿಂದ ಚೇತರಿಸಿಕೊಳ್ಳಲು ಸಾಧ್ಯವಿಲ್ಲ. ಆಡುತ್ತಾನೆ. ಎರಡೂ ಕ್ರೀಡೆಗಳು ವಿಭಿನ್ನ. ಕ್ರಿಕೆಟ್ ಕೌಶಲ್ಯದ ಆಟವಾದರೆ, ಬ್ಯಾಡ್ಮಿಂಟನ್ʼಗೆ ಸ್ಟಾಮಿನಾ ಅಗತ್ಯವುಳ್ಳ ಆಟವಾಗಿದೆ" ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ