ನವ ದೆಹಲಿ: ಸೈನ್ಯ ಕಾರ್ಯಾಚರಣೆಗಳ ಚಲನಶೀಲತೆ ಬದಲಾಗುತ್ತಿರುವ ಮತ್ತು ಸವಾಲಿನ ದೃಷ್ಟಿಯಿಂದ ಸೈನ್ಯಪಡೆಗಳ ಆಧುನಿಕತೆಯ ಅಗತ್ಯತೆಯ ಕುರಿತು ಹೇಳಿಕೆ ನೀಡಿರುವ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಆಮದು ಮಾಡಲಾದ ಮಿಲಿಟರಿ ಉಪಕರಣಗಳ ಮೇಲೆ ಅವಲಂಬನೆ ಕಡಿಮೆಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೇನಾ ತಂತ್ರಜ್ಞಾನ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದ ಸಶಸ್ತ್ರ ಪಡೆಗಳು ಮುಂದಿನ ದಿನಗಳಲ್ಲಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
"ಪ್ರತಿಯೊಂದು ಕ್ಷೇತ್ರದಲ್ಲಿಯೂ ನಮ್ಮ ಸಶಸ್ತ್ರ ಪಡೆಗಳ ಆಧುನೀಕರಣದ ಅವಶ್ಯಕತೆ ಇದೆ. ಭವಿಷ್ಯದ ಯುದ್ಧಗಳು ಕಷ್ಟವಾದ ಭೂಪ್ರದೇಶಗಳಲ್ಲಿ ಮತ್ತು ಸಂದರ್ಭಗಳಲ್ಲಿ ನಡೆಯುವುದರಿಂದ ನಾವು ಅವುಗಳನ್ನು ತಯಾರಿಸಬೇಕಿದ್ದು, ಕ್ರಮೇಣ ಆಮದುಗಳಿಂದ ದೂರವಿರಲು ಬಯಸುತ್ತೇವೆ (ರಕ್ಷಣಾ ತಂತ್ರಜ್ಞಾನದಲ್ಲಿ). ಹಾಗೆಯೇ ಸ್ವದೇಶಿ ಶಸ್ತ್ರಾಸ್ತ್ರಗಳನ್ನು ಬಳಸುತ್ತೇವೆ ಎಂದು ಅವರು ಹೇಳಿದರು.
ತಂತ್ರಜ್ಞಾನವನ್ನು ಬಳಸಿಕೊಳ್ಳುವ ಕಡೆಗೆ ಭಾರತೀಯ ಸೇನೆಯು ಸರಿಯಾದ ಮಾರ್ಗದಲ್ಲಿದೆ ಮತ್ತು ಸಂಬಂಧಿತ ಕೈಗಾರಿಕೆಗಳ ಬೆಂಬಲವು ನಿರ್ಣಾಯಕವಾಗಿದೆ ಎಂದು ಜನರಲ್ ರಾವತ್ ಹೇಳಿದರು. "ಹಗುರವಾದ ಬುಲೆಟ್-ನಿರೋಧಕ ಸಾಮಗ್ರಿ ಮತ್ತು ಇಂಧನ ಕೋಶ ತಂತ್ರಜ್ಞಾನದಲ್ಲಿ ಉತ್ತಮ ಅಭಿವೃದ್ಧಿ ಮಾಡಲಾಗಿದೆ, ಪ್ರಯಾಣ ಆರಂಭವಾಗಿದೆ ಮತ್ತು ಇದು ಮುಂದುವರೆಯಬೇಕು" ಎಂದು ಅವರು ಹೇಳಿದರು.
ಸೇನಾ ಮುಖ್ಯಸ್ಥರು ತಂತ್ರಜ್ಞಾನವನ್ನು ಒದಗಿಸಬೇಕಾದ ಇತ್ತೀಚಿನ ಸಶಸ್ತ್ರ ಪಡೆಗಳನ್ನು ಸಜ್ಜುಗೊಳಿಸುವುದರ ಕುರಿತು ಮಾತನಾಡಿರುವುದು ಇದು ಮೊದಲ ಬಾರಿ ಅಲ್ಲ. ಕಳೆದ ನವೆಂಬರ್ನಲ್ಲಿ, ಭವಿಷ್ಯದಲ್ಲಿ ಶಸ್ತ್ರಸಜ್ಜಿತ ವಾಹನಗಳು ಉತ್ತರ ಮತ್ತು ಪಶ್ಚಿಮ ಗಡಿಗಳಲ್ಲಿ ಕಾರ್ಯನಿರ್ವಹಿಸಲಿರುವ ಬಗ್ಗೆ ತಿಳಿಸಿದ್ದರು. "ನಾವು ನೋಡುತ್ತಿರುವ ಭವಿಷ್ಯದ ಶಸ್ತ್ರಸಜ್ಜಿತ ವಾಹನ ಯಾವುದಾದರೂ, ನಾವು ಪಶ್ಚಿಮ ಗಡಿ ಮತ್ತು ಉತ್ತರ ಗಡಿಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ನಾವು ಪರಿಚಯಿಸಲು ಹೋಗುವ ಯಾವುದೇ ಉಪಕರಣಗಳು ಎರಡೂ ಸ್ಥಳಗಳಲ್ಲಿ ಪರಸ್ಪರ ಕಾರ್ಯಾಚರಣೆಯನ್ನು ಹೊಂದಿರಬೇಕು" ಎಂದು ಹೇಳಿದರು.
ಕಳೆದ ವರ್ಷ ಭಾರತೀಯ ಸೇನೆಯು ಹಳೆಯ ಶಸ್ತ್ರಾಸ್ತ್ರಗಳನ್ನು ಬದಲಿಸುವ ಯೋಜನೆಗಳನ್ನು ಅಂತಿಮಗೊಳಿಸಿದ್ದು, 7 ಲಕ್ಷ ರೈಫಲ್ಸ್, 44,000 ಲೈಟ್ ಮಷಿನ್ ಗನ್ (ಎಲ್ಎಂಜಿಗಳು) ಮತ್ತು ಸುಮಾರು 44,600 ಕಾರ್ಬನ್ಗಳನ್ನು ಪಡೆದುಕೊಳ್ಳುವ ಯೋಜನೆಯನ್ನು ಹೊಂದಿದೆ.