Control blood sugar with Spices: ಪ್ರತಿದಿನ ಚಪಾತಿ ಹಿಟ್ಟು ತಯಾರಿಸುವಾಗ ಕೆಲವು ಮಸಾಲೆಗಳನ್ನು ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬಹಳ ಬೇಗನೆ ಕಡಿಮೆ ಮಾಡಬಹುದು. ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಹಿಟ್ಟನ್ನು ಬೆರೆಸುವಾಗ ಯಾವ ಮಸಾಲೆಗಳನ್ನು ಸೇರಿಸಬೇಕು ನೋಡೋಣ.
Control blood sugar with Spices:ಮಧುಮೇಹವು ರಕ್ತದಲ್ಲಿ ಗ್ಲೂಕೋಸ್ ಹೆಚ್ಚಾದಾಗ ಉಂಟಾಗುವ ಕಾಯಿಲೆಯಾಗಿದೆ. ಸಮಯಕ್ಕೆ ಸರಿಯಾಗಿ ಇದನ್ನು ಗುರುತಿಸಿ ಚಿಕಿತ್ಸೆ ನೀಡದಿದ್ದಲ್ಲಿ ಸಣ್ಣ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸದಿದ್ದರೆ, ಹೃದಯ, ಕಣ್ಣುಗಳು, ಕಾಲುಗಳು ಮತ್ತು ಮೂತ್ರಪಿಂಡಗಳು ಸಹ ಹಾನಿಗೊಳಗಾಗಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು, ಚಪಾತಿ ಹಿಟ್ಟು ಕಲಸುವಾಗ ದಾಲ್ಚಿನ್ನಿ ಪುಡಿಯನ್ನು ಸೇರಿಸಬೇಕು.ದಾಲ್ಚಿನ್ನಿ ಉತ್ಕರ್ಷಣ ನಿರೋಧಕಗಳು, ಉರಿಯೂತ ನಿವಾರಕಗಳಂತಹ ಅನೇಕ ಗುಣಗಳನ್ನು ಹೊಂದಿದೆ.ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿದೆ.
ಒಮಕಾಳಿನಲ್ಲಿರುವ ಥೈಮೋಲ್ ಮತ್ತು ಕಾರ್ವಾಕ್ರೋಲ್ ಉತ್ತಮ ಇನ್ಸುಲಿನ್ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.ಇದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸುತ್ತದೆ.ಚಪಾತಿ ಹಿಟ್ಟು ಕಲಸುವಾಗ ಅರ್ಧ ಚಮಚ ಒಮಕಾಳು ಬೆರೆಸಿದರೆ ಸಾಕು.
ಅರಿಶಿನವು ಕರ್ಕ್ಯುಮಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.ಹಾಗಾಗಿ ಚಪಾತಿ ಹಿಟ್ಟಿನಲ್ಲಿ ಒಂದು ಚಿಟಿಕೆ ಅರಿಶಿನವನ್ನು ಬೆರೆಸಬೇಕು.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬೇಕಾದರೆ ಚಪಾತಿ ಹಿಟ್ಟು ಕಲಸುವಾಗ ಅದಕ್ಕೆ ಶುಂಠಿ ರಸವನ್ನು ಮಿಶ್ರಣ ಮಾಡಬೇಕು.ಇದು ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ.
ಚಪಾತಿ ಹಿಟ್ಟಿಗೆ ಜೀರಿಗೆ ಬೆರೆಸುವ ಮೂಲಕ ಕೂಡಾ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಬೇಕಾದರೆ ಚಪಾತಿ ಹಿತ್ತಾನ್ನು ಹೀಗೆಯೇ ಕಲಸಿ.
ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿದೆ.ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.