Virat Kohli-Anushka Sharma: ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಡೇಟಿಂಗ್ ಮಾಡಲು ಆರಂಭಿಸಿದಾಗ ಕೊಹ್ಲಿ ಅವರ ಈ ಒಂದು ಗುಣದಿಂದ ನಟ ಒಳ್ಳೆಯ ಪತಿಯಾಗಬಲ್ಲರೆಂದು ಅನುಷ್ಕಾ ಅವರಿಗೆ ತಿಳಿದಿತ್ತು.. ಹಾಗಾದ್ರೆ ವಿರಾಟ್ ಅವರಲ್ಲಿರುವ ಆ ಗುಣ ಯಾವುದು ಎಂದು ಇದೀಗ ತಿಳಿಯೋಣ..
ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಜಾಹೀರಾತುವೊಂದರ ಶೂಟಿಂಗ್‌ನಲ್ಲಿ ಭೇಟಿಯಾದರು.. ಅಲ್ಲಿಂದ ಶುರುವಾದ ಸ್ನೇಹ ಪ್ರೀತಿಗೆ ತಿರುಗಿ ಕೆಲವು ವರ್ಷಗಳ ನಂತರ ಇಬ್ಬರು ಪರಸ್ಪರ ಒಪ್ಪಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟರು..
ವಿರಾಟ್ ಹಾಗೂ ಅನುಷ್ಕಾ ಅವರ ಮೊದಲ ಭೇಟಿ ಹೇಗಿತ್ತು.. ವಿರಾಟ್ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದು ಹೇಗೆ? ವಿರಾಟ್ ಅವರು ಉತ್ತಮ ಪತಿಯಾಗಬಲ್ಲರು ಎಂದು ಅನುಷ್ಕಾ ಅರಿತಿದ್ದು ಹೇಗೆ? ಈ ಎಲ್ಲ ಮಾಹಿತಿಯನ್ನು ಇಲ್ಲಿ ತಿಳಿಯೋಣ..
ನಟಿ ಅನುಷ್ಕಾ ಸಂದರ್ಶನವೊಂದರಲ್ಲಿ "ನಾನು ಹಾಗೂ ವಿರಾಟ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾಗ ನಾನು ಏನನ್ನೂ ಮರೆತರೂ ಅವರೇ ನೆನಪಿಸುತ್ತಿದ್ದರು.. ನನಗೆ ಮರೆವು ಹೆಚ್ಚು ಹೀಗಾಗಿ ನಾನು ಅವರು ಉತ್ತಮ ಜೀವನ ಸಂಗಾತಿಯಾಗಲಿದ್ದಾರೆ ಎಂದು ಅರಿತುಕೊಂಡೆ" ಎಂದು ನಟಿ ಅನುಷ್ಕಾ ಹೇಳಿಕೊಂಡಿದ್ದರು..
ಅಷ್ಟೇ ಅಲ್ಲ.."ನಾನು ಫೋನ್‌ನ್ನು ಎಲ್ಲಿ ಇಟ್ಟಿರುತ್ತೇನೋ ಎನ್ನುವುದನ್ನೇ ಮರೆತು ಬಿಟ್ಟಿರುತ್ತೇನೆ,.. ಅದೊಂದೆ ವಿಚಾರವಂತಲ್ಲ ನನಗೆ ಮರೆಯುವುದು ಒಂದು ರೀತಿ ಅಭ್ಯಾಸದಂತಾಗಿದೆ.. ಆದರೆ ವಿರಾಟ್ ಮೆಮೋರಿ ತುಂಬಾ ಆಕ್ಟೀವ್ ಇದೆ.. ಅವರು ಯಾವುದನ್ನೂ ಮರೆಯುವುದಿಲ್ಲ.. ಹೀಗಾಗಿ ಅವರು ಎಲ್ಲವನ್ನು ಸಲೀಸಾಗೆ ನಿಭಾಯಿಸುತ್ತಾರೆ.." ಎಂದು ಅನುಷ್ಕಾ ಹೇಳಿದ್ದರು..
"ನನಗೆ ಎಲ್ಲವನ್ನು ನೆನಪಿಟ್ಟುಕೊಳ್ಳುವುದು ಒಂದು ಸಮಸ್ಯೆ.. ಆದರೆ ವಿರಾಟ್ ಹಾಗಲ್ಲ 3000 ವರ್ಷಗಳ ಹಳೆಯ ಕಥೆಗಳನ್ನು ನೆನಪಿಸಿಕೊಳ್ಳುತ್ತಾರೆ.. ಇದೇ ಕಾರಣಕ್ಕೆ ವಿರಾಟ್ ನನಗೆ ಅತ್ಯುತ್ತಮ ಪತಿಯಾಗಬಲ್ಲರು ಎಂದು ಅರಿತುಕೊಂಡೆ" ಎಂದಿದ್ದರು..
ಇನ್ನು ಅನುಷ್ಕಾ-ವಿರಾಟ್ ಅಭಿಮಾನಿಗಳಿಗೆ ಇವರಿಬ್ಬರ ವೈಯಕ್ತಿಕ ಹಾಗೂ ವೃತ್ತಿ ಜೀವನದ ಬಗ್ಗೆ ತಿಳಿದುಕೊಳ್ಳಲು ತುಂಬಾ ಆಸಕ್ತಿ.. ಅದೇ ರೀತಿ ಪ್ರಪಂಸಾದ್ಯಂತ ಈ ಜೋಡಿ ಎಂದರೇ ಬ್ರಾಂಡ್ ಎಂದರೇ ತಪ್ಪಾಗುವುದಿಲ್ಲ..