Savings Account: ಈ ಡಿಜಿಟಲ್ ಯುಗದಲ್ಲಿ ಪ್ರತಿ ವ್ಯಕ್ತಿಯೂ ಬ್ಯಾಂಕ್ನಲ್ಲಿ ಖಾತೆಯನ್ನು ಹೊಂದಿರುತ್ತಾರೆ. ಉಳಿತಾಯ ಖಾತೆಯಲ್ಲಿರುವ ಹಣಕ್ಕೂ ಕೂಡ ಕಾಲಕಾಲಕ್ಕೆ ಬ್ಯಾಂಕ್ ಬಡ್ಡಿಯನ್ನು ಪಾವತಿಸುತ್ತದೆ. ಆದರೆ, ಈ ಬಡ್ಡಿದರ ತುಂಬಾ ಕಡಿಮೆ ಆಗಿರುತ್ತದೆ. ಸಾಮಾನ್ಯವಾಗಿ ಸೇವಿಂಗ್ಸ್ ಅಕೌಂಟ್ ನಲ್ಲಿ ನೀಡಲಾಗುವ ಬಡ್ಡಿದರವು 2.5% ರಿಂದ 4% ರಷ್ಟಿರುತ್ತದೆ. ಆದರೆ, ನೀವು ನಿಮ್ಮ ಉಳಿತಾಯ ಖಾತೆಯಲ್ಲಿ ಆಟೋ ಸ್ವೀಪ್ ಸೌಲಭ್ಯವನ್ನು ಸೇರಿಸುವುದರಿಂದ ನೀವು ಉಳಿತಾಯ ಖಾತೆಯಲ್ಲಿರುವ ಹಣಕ್ಕೆ ಎಫ್ಡಿ ಬಡ್ಡಿದರವನ್ನು ಪಡೆಯಬಹುದು. ಏನಿದು ವೈಶಿಷ್ಟ್ಯ? ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯೋಣ..
ಏನಿದು ಸ್ವಯಂ ಸ್ವೀಪ್ ಸೌಲಭ್ಯ?
ನಿಮಗೆಲ್ಲರಿಗೂ ತಿಳಿದಿರುವಂತೆ ಉಳಿತಾಯ ಖಾತೆಯಲ್ಲಿ ನಿರ್ದಿಷ್ಟ ಮೊತ್ತವನ್ನು ಕಾಯ್ದುಕೊಳ್ಳುವುದು ಅವಶ್ಯಕ. ಆದರೆ, ಕೆಲವೊಮ್ಮೆ ನಮ್ಮ ಉಳಿತಾಯ ಖಾತೆಯಲ್ಲಿ (Savings Account) ಮಿನಿಮಂ ಮೊತ್ತಕ್ಕಿಂತಲೂ ಹೆಚ್ಚಿನ ಹಣ ಇರುತ್ತದೆ. ನೀವು ಸ್ವಯಂ ಸ್ವೀಪ್ ಸೌಲಭ್ಯ ನಿಮ್ಮ ಖಾತೆಗೆ ಸೇರಿಸಿದ್ದರೆ ಇಂತಹ ಸಂದರ್ಭದಲ್ಲಿ, ನಿಮ್ಮ ಉಳಿತಾಯ ಖಾತೆಯಲ್ಲಿ ಮಿನಿಮಂ ಮೊತ್ತಕ್ಕಿಂತ ಹೆಚ್ಚಿರುವ ಹಣವನ್ನು ಅದು ಸ್ವಯಂಚಾಲಿತವಾಗಿ ಸ್ಥಿರ ಠೇವಣಿಯಾಗಿ ಪರಿವರ್ತಿಸುತ್ತದೆ. ಗ್ರಾಹಕರು ಈ ಮೊತ್ತದ ಮೇಲೆ ಎಫ್ಡಿಯಲ್ಲಿ (FD) ಸಿಗುವಷ್ಟೇ ಬಡ್ಡಿದರವನ್ನು ಪಡೆಯುತ್ತಾರೆ. ಇದರ ಮತ್ತೊಂದು ವೈಶಿಷ್ಟ್ಯವೆಂದರೆ ಉಳಿತಾಯ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಕಡಿಮೆಯಾದಾಗ ಈ ಎಫ್ಡಿ ಖಾತೆಯಲ್ಲಿರುವ ಹಣವನ್ನು ಸ್ವಯಂಚಾಲಿತವಾಗಿ ಉಳಿತಾಯ ಖಾತೆಗೆ ಹಿಂತಿರುಗಿಸಲಾಗುತ್ತದೆ.
ಸ್ವಯಂ ಸ್ವೀಪ್ ಸೌಲಭ್ಯದಿಂದ ಸಿಗುವ ಪ್ರಯೋಜನಗಳೇನು?
ಸ್ವಯಂ ಸ್ವೀಪ್ ಸೌಲಭ್ಯದಿಂದ (Auto Sweep Feature) ಉಳಿತಾಯ ಖಾತೆಯಲ್ಲಿ ಪಡೆದ ಬಡ್ಡಿಯು ಎಫ್ಡಿಗೆ ಹೋಲಿಸಿದರೆ ತುಂಬಾ ಕಡಿಮೆ ಆಗಿರುತ್ತದೆ. ಆದರೆ, ನೀವು ಎಫ್ಡಿಯಲ್ಲಿ 5 ರಿಂದ 7% ಬಡ್ಡಿಯನ್ನು ಪಡೆಯಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸೇವಿಂಗ್ಸ್ ಖಾತೆಗೆ ಸ್ವಯಂ ಸ್ವೀಪ್ ಸೌಲಭ್ಯವನ್ನು ಸೇರಿಸುವ ಮೂಲಕ, ಉಳಿತಾಯ ಖಾತೆಯಲ್ಲಿ ಉತ್ತಮ ಆದಾಯವನ್ನು ಗಳಿಸಬಹುದು.
ಇದನ್ನೂ ಓದಿ- ಬಂಜರು ಭೂಮಿಯಲ್ಲಿ 'ಚಿನ್ನ' ಬೆಳೆದ್ರಾ ಮುಖೇಶ್ ಅಂಬಾನಿ! ಇಲ್ಲಿದೆ ರೋಚಕ ಸ್ಟೋರಿ
ಇದರ ಹೊರತಾಗಿ, ನೀವು ಎಫ್ಡಿ (FD) ಪಡೆದಾಗ, ಅದು ಮೆಚುರಿಟಿ ಅವಧಿಯನ್ನು ಹೊಂದಿರುತ್ತದೆ. ನೀವು ಎಫ್ಡಿ ಅನ್ನು ಮಧ್ಯದಲ್ಲಿ ಮುರಿದರೆ, ಇದಕ್ಕಾಗಿ ದಂಡವನ್ನು ಪಾವತಿಸಬೇಕಾಗುತ್ತದೆ. ಆದರೆ ಉಳಿತಾಯ ಖಾತೆಗೆ ಸ್ವಯಂ ಸ್ವೀಪ್ ಸೌಲಭ್ಯವನ್ನು ಸೇರಿಸಿದಾಗ, ನೀವು ಅಂತಹ ಯಾವುದೇ ಲಾಕ್-ಇನ್ ಅವಧಿಗೆ ಬದ್ಧರಾಗಿರುವುದಿಲ್ಲ. ನೀವು ಯಾವಾಗ ಬೇಕಾದರೂ ನಿಮ್ಮ ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಈ ರೀತಿಯಾಗಿ, ಗ್ರಾಹಕರು ಒಂದೇ ಖಾತೆಯಲ್ಲಿ ಉಳಿತಾಯ ಖಾತೆ ಮತ್ತು ಎಫ್ಡಿ ಎರಡರ ಪ್ರಯೋಜನವನ್ನೂ ಆನಂದಿಸಬಹುದು.
ಸ್ವಯಂ ಸ್ವೀಪ್ ಸೌಲಭ್ಯವನ್ನು ಪಡೆಯುವುದು ಹೇಗೆ?
ಸ್ವಯಂ ಸ್ವೀಪ್ ಸೌಲಭ್ಯಕ್ಕಾಗಿ ವಿವಿಧ ಬ್ಯಾಂಕ್ನಲ್ಲಿ ವಿವಿಧ ವಿಧಾನಗಳನ್ನು ಅನುಸರಿಸಲಾಗುತ್ತದೆ. ನೀವು ಎಸ್ಬಿಐ ಗ್ರಾಹಕರಾಗಿದ್ದರೆ ಇದರ ಸೌಲಭ್ಯವನ್ನು ಹೇಗೆ ಪಡೆಯಬಹುದು ಎಂದು ನೋಡುವುದಾದರೆ...
ಇದನ್ನೂ ಓದಿ- ಸರ್ಕಾರಿ ನೌಕರರ ವೇತನ ಹೆಚ್ಚಳದ ಬಗ್ಗೆ ಕೊನೆಗೂ ಹೊರ ಬಿತ್ತು ಮಾಹಿತಿ ! ಈ ದಿನದಂದೇ ಘೋಷಣೆಯಾಗಲಿದೆ ಸಿಹಿ ಸುದ್ದಿ
ಸ್ವಯಂ ಸ್ವೀಪ್ ಸೌಲಭ್ಯ ಪಡೆಯಲು ಬಯಸುವ ಎಸ್ಬಿಐ ಗ್ರಾಹಕರು ಮೊದಲು ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಯೋನೋ ಅಪ್ಲಿಕೇಶನ್ ಮೂಲಕ ಇದನ್ನು ಸಕ್ರಿಯಗೊಳಿಸಬೇಕು.
* ಇಂಟರ್ನೆಟ್ ಬ್ಯಾಂಕಿಂಗ್ನಲ್ಲಿ (Internet Banking) ಸೈನ್ ಇನ್ ಮಾಡಿ, ಮೆನುವಿನಿಂದ ಫಿಕ್ಸೆಡ್ ಡೆಪಾಸಿಟ್ ಆಯ್ಕೆಗೆ ಹೋಗಿ.
* ಡ್ರಾಪ್ ಡೌನ್ ಮೆನುವಿನಿಂದ 'ಇನ್ನಷ್ಟು' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
* ಇದರಲ್ಲಿ ಆಟೋ ಸ್ವೀಪ್ ಫೆಸಿಲಿಟಿ ಪುಟ ತೆರೆಯುತ್ತದೆ. ಇದರಲ್ಲಿ ಕಾಣುವ ಲಿಂಕ್ ಅನ್ನು ಕ್ಲಿಕ್ ಮಾಡಿ.
* ಬಳಿಕ ನೀವು ಈ ವೈಶಿಷ್ಟ್ಯವನ್ನು ಬಯಸುವ ಖಾತೆಯನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಮೊತ್ತವನ್ನು ನಿಗದಿಪಡಿಸಿ. ಇಲ್ಲಿ ನೀವು ಠೇವಣಿಯ ಸಮಯದ ಚೌಕಟ್ಟನ್ನು ಸಹ ಆರಿಸಬೇಕಾಗುತ್ತದೆ.
* ಇದರ ನಂತರ ಓಕೆ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಅದನ್ನು ಸಲ್ಲಿಸಿ.
* ನೀವು ಇಲ್ಲಿ OTP ಅಥವಾ ವಹಿವಾಟಿನ PIN/password ಅನ್ನು ನಮೂದಿಸಬೇಕಾಗುತ್ತದೆ.
ಈ ಹಂತಗಳು ಪೂರ್ಣಗೊಂಡ ಬಳಿಕ ಮುಂದಿನ ಕೆಲವು ಕೆಲಸದ ದಿನಗಳಲ್ಲಿ ನಿಮ್ಮ ಬ್ಯಾಂಕ್ ಈ ಸೇವೆಯನ್ನು ಸಕ್ರಿಯಗೊಳಿಸುತ್ತದೆ.
ಯೋನೋ ಅಪ್ಲಿಕೇಶನ್ನಲ್ಲಿ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸುವುದು ಹೇಗೆ?
>> ಮೊಬೈಲ್ ಅಪ್ಲಿಕೇಶನ್ಗೆ ಹೋಗಿ ಮತ್ತು ಮೆನುವಿನಿಂದ ಇ-ಸ್ಥಿರ ಠೇವಣಿ ಆಯ್ಕೆಯನ್ನು ತೆರೆಯಿರಿ.
>> ಇಲ್ಲಿ ಮೆನುವಿನಿಂದ ಬಹು ಆಯ್ಕೆ ಠೇವಣಿ ಆಯ್ಕೆಯನ್ನು ಆಯ್ಕೆಮಾಡಿ ಮತ್ತು ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬೇಕಾದ ಖಾತೆಯನ್ನು ಆಯ್ಕೆಮಾಡಿ ಸಲ್ಲಿಸಿ.
>> ಇದರ ನಂತರ OTP ಅಥವಾ ವಹಿವಾಟಿನ PIN/password ಅನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ.
>> ಈ ಪ್ರಕ್ರಿಯೆಯು ಬ್ಯಾಂಕ್ನಿಂದ ಪೂರ್ಣಗೊಂಡ ನಂತರ, ನಿಮ್ಮ ಖಾತೆಯಲ್ಲಿ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.