ಇವರೇ ನೋಡಿ ಆಡಿಷನ್‌ನಲ್ಲಿ ರಿಜೆಕ್ಟ್ ಆಗಿದ್ದ ಸ್ಟಾರ್ ಕಿಡ್ಸ್! ಶ್ರೀದೇವಿ ಮಗಳೂ ಶಾಮೀಲು!

Bollywood Stars: ಬಣ್ಣದ ಬದುಕಿನಲ್ಲಿ ಜೀವನ ಕಟ್ಟಿಕೊಳ್ಳುವುದೆಂದರೆ ಅಷ್ಟು ಸುಲಭದ ಮಾತಲ್ಲ. ದೂರ ಬೆಟ್ಟ ನುಣ್ಣಗೆ ಎಂಬಂತೆ ಚಿತ್ರರಂಗ ಖ್ಯಾತ ತಾರೆಯರ ಮಕ್ಕಳಿಗೆ ಹೂವಿನ ಹಾದಿಯಾಗಿರುತ್ತದೆ ಎಂದು ಭಾವಿಸುವುದು ಸತ್ಯಕ್ಕೆ ದೂರವಾದ ಮಾತಾಗಿದೆ. ಖ್ಯಾತ ತಾರೆಯರ ಮಕ್ಕಳೂ ಕೂಡ ಹಲವು ಆಡಿಷನ್‌ಗಳಲ್ಲಿ ನಿರಾಕರಣೆಯನ್ನು ಎದುರಿಸಿದ್ದಾರೆ ಎಂಬುದನ್ನೂ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /10

ಸಿನಿಮಾ ಜಗತ್ತಿನಲ್ಲಿ ಬದುಕು ಕಟ್ಟಿಕೊಳ್ಳಬೇಕು, ನಟನೆಯಲ್ಲಿ ಹೆಸರು ಗಳಿಸಬೇಕು ಎಂಬುವವರು ಅದಕ್ಕಾಗಿ ಸಾಕಷ್ಟು ಕಷ್ಟ ಪಡಬೇಕಾಗುತ್ತದೆ. ಎಷ್ಟೇ ಟ್ಯಾಲೆಂಟ್ ಇದ್ದರೂ ಸಹ ಪಾತ್ರಕ್ಕೆ ಸರಿಹೊಂದುವಂತೆ ಅಭಿನಯಿಸದಿದ್ದಲ್ಲಿ ಒಂದು ಸಿನಿಮಾಗೆ ಸೆಲೆಕ್ಟ್ ಆಗುವುದು ಅಷ್ಟು ಸುಲಭವಲ್ಲ.   

2 /10

ಸಾಮಾನ್ಯವಾಗಿ ನಾವು ಸಿನಿಮಾ ಸ್ಟಾರ್ಸ್ ಮಕ್ಕಳು ಸುಲಭವಾಗಿ ಸಿನಿ ಜಗತ್ತನ್ನು ಪ್ರವೇಶಿಸಬಹುದು ಎಂದುಕೊಳ್ಳುತ್ತೇವೆ. ಆದರಿದು ಸತ್ಯಕ್ಕೆ ದೂರವಾದ ಮಾತು.   

3 /10

ಸ್ಟಾರ್ ಮಕ್ಕಳೂ ಸಹ ಆಡಿಷನ್‌ನಲ್ಲಿ ಸೆಲೆಕ್ಟ್ ಆದರಷ್ಟೇ ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳುತ್ತಾರೆ.   

4 /10

ತಮ್ಮ ವೃತ್ತಿಜೀವನದ ಆರಂಭದಲ್ಲಿ ಚಲನಚಿತ್ರಗಳಿಗಾಗಿ ಆಡಿಷನ್‌ಗಳಲ್ಲಿ ಭಾಗವಹಿಸಿದ ಅದೆಷ್ಟೋ  ಬಾಲಿವುಡ್‌ನ ಖ್ಯಾತ ಕಲಾವಿದರ ಮಕ್ಕಳು ಕೂಡ ರಿಜೆಕ್ಟ್ ಆಗಿರುವ ಘಟನೆ ನಡೆದಿದೆ. ಶ್ರೀದೇವಿ ಮಗಳೂ ಕೂಡ ಈ ಪಟ್ಟಿಯಲ್ಲಿದ್ದಾರೆ ಎಂದರೆ ನಿಮಗೆ ಅಚ್ಚರಿಯಾಗಬಹುದು.   

5 /10

ಖ್ಯಾತ ಬಾಲಿವುಡ್ ತಾರೆ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಪ್ರಸ್ತುತ ಬಾಲಿವುಡ್‌ನ ಸಖತ್ ಬ್ಯುಸಿ ನಟಿಯರಲ್ಲಿ ಒಬ್ಬರು. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಅಡಿಯಲ್ಲಿ ಹಲವು ಚಿತ್ರಗಳಿಗೆ ಆಡಿಷನ್‌ನಲ್ಲಿ ಇವರನ್ನು ರಿಜೆಕ್ಟ್ ಮಾಡಲಾಗಿತ್ತು ಎಂದು ಖುದ್ದು ಜಾಹ್ನವಿ ಅವರೇ ಹೇಳಿಕೊಂಡಿದ್ದಾರೆ.   

6 /10

'ಸ್ಟೂಡೆಂಟ್ ಆಫ್ ದಿ ಇಯರ್ 2' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ ಚಂಕಿ ಪಾಂಡೆ  ಪುತ್ರಿ  ಅನನ್ಯಾ ಪಾಂಡೆ ಸಹ ಹಲವು ಆಡಿಷನ್‌ಗಳಲ್ಲಿ ನಿರಾಕರಣೆಯನ್ನು ಎದುರಿಸಿದ್ದಾರೆ.   

7 /10

ಕರಣ್ ಜೋಹರ್ ನಿರ್ದೇಶನದ ಸ್ಟೂಡೆಂಟ್ ಆಫ್ ದಿ ಇಯರ್ (2012) ಬಾಲಿವುಡ್ ಪ್ರವೇಶಿಸಿದ ಚಲನಚಿತ್ರ ನಿರ್ಮಾಪಕ-ನಿರ್ದೇಶಕ ಡೇವಿಡ್ ಧವನ್ ಪುತ್ರ ವರುಣ್ ಧವ್ನ್ ಕೂಡ ಹಲವು ಆಡಿಷನ್‌ಗಳಲ್ಲಿ ರಿಜೆಕ್ಟ್ ಆಗಿದ್ದರಂತೆ. ಲೈಫ್ ಆಫ್ ಪೈ , ಧೋಬಿ ಘಾಟ್ ಚಿತ್ರಗಳಲ್ಲಿ ವರುಣ್ ಅವರನ್ನು ನಿರಾಕರಿಸಲಾಗಿತ್ತು.   

8 /10

ಖ್ಯಾತ ಬಾಲಿವುಡ್ ನಟ ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್ 'ತೀನ್ ಪಟ್ಟಿ' ಸಿನಿಮಾ ಮೂಲಕ ಸಿನಿ ರಂಗಕ್ಕೆ ಪದಾರ್ಪಣೆ ಮಾಡಿದರು. ಆದರೆ, ಇದಕ್ಕೂ ಮೊದಲು ಶ್ರದ್ಧಾ ಸಂಜಯ್ ಲೀಲಾ ಬಂಶಾಲಿ ಅವರ ಚಿತ್ರಕ್ಕಾಗಿ ಆಡಿಷನ್‌ನಲ್ಲಿ ರಿಜೆಕ್ಟ್ ಆಗಿದ್ದರಂತೆ.   

9 /10

ಹಿಂದಿ ಸಿನಿಮಾ ರಂಗಕ್ಕೆ ಹಲವು ಹಿಟ್ ಚಿತ್ರಗಳನ್ನು ನೀಡಿರುವ ಅಮೀರ್ ಖಾನ್ ಅವರ ಪುತ್ರ ಕೂಡ ಮಹಾರಾಜ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದಾರೆ. ಆದರೆ, ಇದಕ್ಕೂ ಮೊದಲು 7 ಬಾರಿ ಅವರು ಆಡಿಷನ್‌ಗಳಲ್ಲಿ ರಿಜೆಕ್ಟ್ ಆಗಿದ್ದರಂತೆ.   

10 /10

ಅಮೃತಾ ಸಿಂಗ್ ಹಾಗೂ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿಖಾನ್ ಕೂಡ ಥಗ್ಸ್ ಆಫ್ ಹಿಂದೂಸ್ತಾನ್ ಆಡಿಷನ್‌ನಲ್ಲಿ ಫಾತಿಮಾ ಸನಾ ಶೇಖ್ ಪಾತ್ರಕ್ಕಾಗಿ ಲುಕ್ ಟೆಸ್ಟ್ ನಲ್ಲಿ ನಿರಾಕರಿಸಲ್ಪಟ್ಟಿದ್ದರು.