ಮತ್ತೆ ಅಬ್ಬರಿಸಿದ ರೋ'HIT'ಗೆ ದಾಖಲೆಯ ಗರಿ

INDIA VS AUSTRLIA: ಟೀಂ ಇಂಡಿಯಾ 'ಹಿಟ್ ಮ್ಯಾನ್' ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮತ್ತೊಂದು ಶತಕ ಬಾರಿಸಿದ್ದಾರೆ.

Last Updated : Jan 19, 2020, 08:20 PM IST
ಮತ್ತೆ ಅಬ್ಬರಿಸಿದ ರೋ'HIT'ಗೆ ದಾಖಲೆಯ ಗರಿ title=

ಬೆಂಗಳೂರು: ಭಾರತ ತಂಡದಲ್ಲಿ 'ಹಿಟ್ ಮ್ಯಾನ್' ಎಂದೇ ಖ್ಯಾತರಾಗಿರುವ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 9000 ರನ್ ಗಳನ್ನೂ ಪೂರೈಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಈ ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಅತೀ ವೇಗವಾಗಿ 9000 ರನ್ ಗಡಿ ದಾಟಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಒಟ್ಟು 224 ಏಕದಿನ ಪಂದ್ಯಗಳಲ್ಲಿ ರೋಹಿತ್ ಈ ದಾಖಲೆಯನ್ನು ಬರೆದಿದ್ದಾರೆ.

ಇದಕ್ಕೂ ಮೊದಲು ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಆರಂಭಿಕ ಆಟಗಾರರಾಗಿ ಬ್ಯಾಟಿಂಗ್ ಗೆ ಇಳಿದ ರೋಹಿತ್ ಶರ್ಮಾ, 9000 ರನ್ ಗಡಿಯಿಂದ ಒಟ್ಟು 4ರನ್ ದೂರವಿದ್ದರು. ಭಾರತೀಯ ಇನ್ನಿಂಗ್ಸ್ ನ ಆರಂಭದ ಮೊದಲ ಓವರ್ ನಲ್ಲಿಯೇ ರೋಹಿತ್ ಈ ದಾಖಲೆ ಬರೆದಿದ್ದಾರೆ. ಮಿಷೆಲ್ ಸ್ಟಾರ್ಕ್ ಎಸೆದ ಬೌಲನ್ನು ಬೌಂಡರಿಗೆ ಅಟ್ಟುವ ಮೂಲಕ ರೋಹಿತ್ ಈ ದಾಖಲೆ ನಿರ್ಮಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 9000 ರನ್ ಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ 20ನೇ ಸ್ಥಾನ ಅಲಂಕರಿಸಿದ್ದಾರೆ. ಆದರೆ, ಅತ್ಯಂತ ಕಡಿಮೆ ಪಂದ್ಯಗಳಲ್ಲಿ 9000 ರನ್ ಗಳನ್ನು ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಮಾತ್ರ ರೋಹಿತ್ ತನಗಿಂತ ಉತ್ತಮ ಪ್ರದರ್ಶನ ನೀಡಿವ ಇಬ್ಬರು ಆಟಗಾರರ ಹಿಂದೆ ಇದ್ದಾರೆ. ರೋಹಿತ್ ಕೇವಲ 224 ಪಂದ್ಯಗಳಲ್ಲಿ ಈ ಗುರಿಯನ್ನು ತಲುಪಿದ್ದಾರೆ. ಭಾರತೀಯ ತಂಡದ ನಾಯಕ ವಿರಾಟ್ ಕೊಹ್ಲಿ 194 ಪಂದ್ಯಗಳಲ್ಲಿ ಈ ದಾಖಲೆ ಬರೆದು ಮೊದಲ ಸ್ಥಾನದಲ್ಲಿದ್ದರೆ, 205 ಪಂದ್ಯಗಳಲ್ಲಿ 9000 ರನ್ ಗಳನ್ನು ಗಳಿಸಿರುವ ಎ.ಬಿ. ಡಿವಿಲಿಯರ್ಸ್ ಎರಡನೇ ಸ್ಥಾನದಲ್ಲಿದ್ದಾರೆ.

ಈ ಪಂದ್ಯದಲ್ಲಿ ರೋಹಿತ್ ಶತಕವನ್ನೂ ಸಹ ದಾಖಲಿಸಿದ್ದಾರೆ. ಇದು ಅವರ 29 ನೇ ಶತಕವಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅವರು ಒಟ್ಟು 43 ಅರ್ಧ ಶತಕಗಳನ್ನೂ ಸಹ ಅವರು ದಾಖಲಿಸಿದ್ದಾರೆ.

Trending News