Viral Video in India: ರೈಲು ಹಳಿಗಳ ಮೇಲೆ ಮಲಗಿ ತಂದೆ-ಮಗ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ಭಯಾನಕ ದೃಶ್ಯವು ರೈಲ್ವೆ ನಿಲ್ದಾಣದ CCTVಯಲ್ಲಿ ಸರೆಯಾಗಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಭಯಂದರ್ ನಿಲ್ದಾಣದ ಬಳಿ ಈ ಘೋರ ದುರಂತ ಸಂಭವಿಸಿದೆ.
60 ವರ್ಷದ ತಂದೆ ಮತ್ತು ಮಗ ಬರುತ್ತಿರುವ ಸ್ಥಳೀಯ ರೈಲಿನ ಮುಂದೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ(ಜುಲೈ ೮) ಬೆಳಗ್ಗೆ 9.30ರ ವೇಳೆಗೆ ಈ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವವರನ್ನು ಹರೀಶ್ ಮೆಹ್ತಾ (60) ಮತ್ತು ಪುತ್ರ ಜೈ (35) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಬದಲಾಗುವುದು 3 ಮತ್ತು 6 ನೇ ತರಗತಿ ಪಠ್ಯಪುಸ್ತಕ ! ಪಠ್ಯಕ್ರಮ ಗೊಂದಲಕ್ಕೆ ಸ್ಪಷ್ಟನೆ ನೀಡಿದ CBSE
ಮೃತರು ವಸಾಯಿ ನಿವಾಸಿಗಳಾಗಿದ್ದಾರೆ. ರೈಲು ಬರುತ್ತಿರುವುದನ್ನು ನೋಡಿದ ಇಬ್ಬರೂ ಪರಸ್ಪರರ ಕೈಗಳನ್ನು ಹಿಡಿದುಕೊಂಡು ಹಳಿಯ ಮೇಲೆ ಮಲಗಿದ್ದಾರೆ. ಪರಿಣಾಮ ಇಬ್ಬರ ರೈಲಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸರೆಯಾಗಿದೆ.
महाराष्ट्र के पालघर मे पिता-पुत्र ने एक साथ अपनी जान ले ली!
ट्रेन को आता देख पिता-पुत्र ने एक दूसरे का हाथ पकड़े हुए पटरी पर लेट कर सुसाइड कर लिया!
दोनो पिता-पुत्र रेलवे ट्रैक के पास से बाते करते हुए गुज़र रहे थे!
फिर ट्रेन को आता......... #MaharashtraNews pic.twitter.com/cJZHODVcY3— Shatrughan Kumar (@Shatrug96788610) July 10, 2024
ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನಡೆ ನಡೆಸಿದ್ದಾರೆ. ಬಳಿಕ ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಪ್ಪ-ಮಗನ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.
ಇದನ್ನೂ ಓದಿ: Tripura: HIVಗೆ 47 ವಿದ್ಯಾರ್ಥಿಗಳು ಬಲಿ, 828ಕ್ಕೂ ಹೆಚ್ಚು ಮಂದಿಗೆ ಪಾಸಿಟಿವ್!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.