Dengue Effects On Pregnant Woman: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಗರ್ಭಿಣಿಯರು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ಡೆಂಗ್ಯೂ ಜ್ವರವು ತಾಯಿಯ ಮೇಲಷ್ಟೇ ಪರಿಣಾಮ ಬೀರುತ್ತದೋ ಅಥವಾ ಗರ್ಭದಲ್ಲಿರುವ ಮಗುವಿನ ಮೇಲೂ ಇದರ ಪರಿಣಾಮ ಕಂಡು ಬರುತ್ತದೆಯೇ? ಈ ಬಗ್ಗೆ ಬೆಂಗಳೂರಿನ ಹಳೆ ಏರ್ಪೋರ್ಟ್ ರಸ್ತೆಯಲ್ಲಿನ ಮಣಿಪಾಲ್ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಇಲಾಖಾ ಮುಖ್ಯಸ್ಥರು ಮತ್ತು ತಪಾಸಕರಾದ ಡಾ. ಗಾಯತ್ರಿ ಕಾರ್ತಿಕ್ (Dr. Gayathri Karthik) ನಾಗೇಶ್ ಅವರು ಈ ರೀತಿ ಹೇಳುತ್ತಾರೆ.
"ಗರ್ಭಾವಸ್ಥೆಯ ಸಂದರ್ಭದಲ್ಲಿನ ಡೆಂಗ್ಯೂ ಜ್ವರವು (Dengue Fever) ಗರ್ಭದಲ್ಲಿರುವ ಮಗು ಮತ್ತು ತಾಯಿ ಇಬ್ಬರ ಆರೋಗ್ಯದ ಮೇಲಿನ ಅಪಾಯಕ್ಕೆ ಪ್ರಮುಖ ಕಾರಣವಾಗಬಲ್ಲದು. ಅನೇಕ ಪ್ರಕರಣಗಳಲ್ಲಿ ಈ ರೋಗಾಣು ತಾಯಿ ಮತ್ತು ಮಗು ಇಬ್ಬರ ರೋಗ ಸಂಕೀರ್ಣತೆಗೆ ಪ್ರಮುಖ ಕಾರಣವಾಗಬಲ್ಲುದು".
ಡೆಂಗ್ಯೂ ಸೋಂಕು (Dengue Infection) ಮಗುವಿನ ನಿರೀಕ್ಷೆಯಲ್ಲಿರುವ ತಾಯಿಯ ಅವಧಿಪೂರ್ವ ಪ್ರಸವದ ಅಪಾಯಕ್ಕೆ ಕಾರಣವಾಗಬಲ್ಲದು. ಇದರಿಂದ ಮಗುವು ಗರ್ಭಾವಸ್ಥೆಯ 37 ವಾರಗಳಿಗಿಂತ ಮುಂಚಿತವಾಗಿ ಜನಿಸಬಹುದು. ಇಂತಹ ಮಕ್ಕಳು ಕಡಿಮೆ ತೂಕವನ್ನು ಹೊಂದಿರಬಹುದು (ಜನನ ಸಂದರ್ಭದಲ್ಲಿ 2500 ಗ್ರಾಂ.ಗಳಿಗಿಂತಲೂ ಕಡಿಮೆ ತೂಕ). ಇದು ತಾಯಿಯ ಗರ್ಭದಲ್ಲಿ ಭ್ರೂಣದ ನಿರ್ಬಂಧಿತ ಬೆಳವಣಿಗೆಯಿಂದಾಗಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ- ರಾಜ್ಯದಲ್ಲಿ ಒಂದೇ ದಿನ 175 ಡೆಂಗ್ಯೂ ಸೋಂಕು ಪತ್ತೆ; ಬೆಂಗಳೂರಿನಲ್ಲಿ ಸೋಂಕಿಗೆ ಬಾಲಕ ಬಲಿ!
ಡೆಂಗ್ಯೂವಿನಿಂದ ನಿರೀಕ್ಷಿತ ತಾಯಿಯಲ್ಲಿ ಆಕ್ಸಿಡೋಟಿಕ್ ಸಮಸ್ಯೆ:
ಗರ್ಭದಲ್ಲಿ ಮಗುವನ್ನು ಪೋಷಿಸುವ ಪ್ರಮುಖ ಅಂಗವಾದ ಪ್ಲಾಸೆಂಟಾದ ಹಾನಿಗೆ, ಡೆಂಗ್ಯೂ ಕಾರಣವಾಗುವುದರಿಂದ ಈ ಸಂಕೀರ್ಣತೆಗಳು ಉಂಟಾಗುತ್ತವೆ. ಅನೇಕ ಗಂಭೀರ ಪ್ರಕರಣಗಳಲ್ಲಿ ಡೆಂಗ್ಯೂ ಜ್ವರವು ಪ್ಲೆಟ್ಲೆಟ್ಗಳ ಸಂಖ್ಯೆಯ ಗಣನೀಯ ಇಳಿಕೆಗೆ (ತ್ರೊಂಬೋಸೈಟೋಪೀನಿಯಾ) ಕಾರಣವಾಗುತ್ತದೆ. ಇದು ರಕ್ತಸ್ರಾವ ಸಮಸ್ಯೆ ಪ್ರಚೋದಿಸುತ್ತದೆ. ಇದನ್ನು ಡೆಂಗ್ಯೂ ಹೆಮರೋಹ್ಯಾಜಿಕ್ ಜ್ವರ ಎಂದು ಕರೆಯಲಾಗುತ್ತದೆ. ಈ ಜ್ವರ ಉಂಟಾದಾಗ ಮಗು ನಿರೀಕ್ಷಿತ ತಾಯಿಯಲ್ಲಿ ಆಕ್ಸಿಡೋಟಿಕ್ ಸಮಸ್ಯೆ ಕಾಣಿಸಿಕೊಳ್ಳಬಹುದು (ರಕ್ತದಲ್ಲಿ ಆಮ್ಲೀಯ ಅಂಶ ಹೆಚ್ಚಾಗುವುದು). ಗರ್ಭಿಣಿ ತಾಯಿಯ ದೇಹದಲ್ಲಿನ ಈ ಆಮ್ಲೀಯ ವಾತಾವರಣವು ಮಗುವಿನ ಬೆಳವಣಿಗೆ ಮತ್ತು ವೃದ್ಧಿಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಈ ಮಾತೃತ್ವದ ಸಂಯೋಜಿತ ಅಸ್ವಸ್ಥತೆ, ಮಗುವಿಗೆ ಕಡಿಮೆ ಆಮ್ಲಜನಕ ಪೂರೈಕೆಯಾಗುವಂತೆ ಮಾಡುತ್ತದೆ ಮತ್ತು ಇದರಿಂದ ಪ್ಲಾಸೆಂಟಾದ ಕಾರ್ಯ ಕುಂಠಿತಗೊಳ್ಳುವ ಸಂಭವನೀಯತೆಯುಂಟಾಗಿ ಭ್ರೂಣದ ನಿರ್ಬಂಧಿತ ಬೆಳವಣಿಗೆಗೆ ಕಾರಣವಾಗಬಹುದು.
ಆದಾಗ್ಯೂ, ಒಂದೊಮ್ಮೆ ತಾಯಿಯು ಡೆಂಗ್ಯೂದಿಂದ ಚೇತರಿಸಿಕೊಂಡಲ್ಲಿ ಮತ್ತು ಆಕೆಯ ಆರೋಗ್ಯ ಸ್ಥಿರವಾದಲ್ಲಿ ಮಗುವಿನ ಬೆಳವಣಿಗೆಯು ಕ್ರಮೇಣ ಸಹಜಸ್ಥಿತಿಗೆ ಮರಳಬಲ್ಲದು ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ- ಡೆಂಗಿ ಹೆಚ್ಚಿರುವ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್ ತೆರೆಯಲು ಸೂಚನೆ : ಸಚಿವ ದಿನೇಶ್ ಗುಂಡೂರಾವ್
ಡೆಂಗ್ಯೂ ತಡೆಗಟ್ಟಲು ಗರ್ಭಿಣಿ ಮಹಿಳೆಯರಿಗೆ ವೈದ್ಯರ ಸಲಹೆ:
ನೀವೊಂದು ವೇಳೆ ಗರ್ಭಿಣಿಯಾಗಿದ್ದಲ್ಲಿ, ಮತ್ತು ಡೆಂಗ್ಯೂಪೀಡಿತ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಡೆಂಗ್ಯೂ ರೋಗವನ್ನು ತಡೆಗಟ್ಟುವುದು ಪ್ರಮುಖ ಅಂಶವಾಗಿದೆ. ಇದು ಸುರಕ್ಷಿತ ಬಟ್ಟೆ ಧರಿಸುವಿಕೆ, ಸೊಳ್ಳೆ ನಿವಾರಕಗಳ ಬಳಕೆ ಮತ್ತು ಸೊಳ್ಳೆಗಳು ಜಾಸ್ತಿ ಹಾರಾಡುವ ಸಂದರ್ಭದಲ್ಲಿ ಸೊಳ್ಳೆಗಳು ಬಾರದಂತೆ ಕ್ರಮವಹಿಸಿ ಮನೆಯೊಳಗೆ ಇರುವಂತಹ ಕ್ರಮಗಳನ್ನು ಅನುಸರಿಸುವುದನ್ನು ಒಳಗೊಂಡಿರುತ್ತದೆ.
ಗರ್ಭಾವಸ್ಥೆಯ ಸಂದರ್ಭದಲ್ಲಿ ನಿಯಮಿತವಾಗಿ ಪ್ರಸವಪೂರ್ವ ಆರೈಕೆಯು ಬಹಳ ಮುಖ್ಯವಾಗಿರುತ್ತದೆ. ಯಾಕೆಂದರೆ ಇದು ಆರಂಭಿಕ ಹಂತದಲ್ಲಿ ವೈರಲ್ ಅಸ್ವಸ್ಥತೆಯನ್ನು ಪತ್ತೆಹಚ್ದಲು ಮತ್ತು ಸೂಕ್ತವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ, ಮತ್ತು ತಾಯಿ ಮಗು ಇಬ್ಬರ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.