Actress Saritha Son: ಬಣ್ಣ ಯಾವತ್ತೂ ಕಲೆಗೆ ಅಡ್ಡಿಯಾಗುವುದಿಲ್ಲ ಎಂದು ನಿರೂಪಿಸಿದ ನಟಿ ಎಂದರೇ ಅದು ಸರಿತಾ.. ತಮ್ಮ ಅದ್ಭುತ ಅಭಿನಯದ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಈ ಚೆಲುವೆಗೆ ವೃತ್ತಿ ಜೀವನದಲ್ಲಿ ಸಿಕ್ಕ ಯಶಸ್ಸು ವೈಯಕ್ತಿಕ ಜೀವನದಲ್ಲಿ ಸಿಗಲಿಲ್ಲ..
ನಟಿ ಸರಿತಾ ತೆಲುಗಿನ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು.. ದಕ್ಷಿಣ ಭಾರತ ಚಿತ್ರರಂಗದಲ್ಲಿ ಚರಿತ್ರೆಯನ್ನೇ ಸೃಷ್ಟಿ ಮಾಡಿದ್ದಾರೆ ಎಂದರೇ ತಪ್ಪಾಗುವುದಿಲ್ಲ..
ಸರಿತಾ ಅವರು ಡಾ. ರಾಜ್ಕುಮಾರ್ ಅವರೊಂದಿಗಿನ ಕನ್ನಡದ ಹೊಸಬೆಳಕು ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲೂ ತಮ್ಮ ಬೆಳಕು ಚೆಲ್ಲಿದರು..
ಹೀಗೆ ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಕನ್ನಡದ ಹಲವಾರು ಸಿನಿಮಾಗಳಲ್ಲಿ ಒಂದು ಕಾಲದಲ್ಲಿ ಫೇಮಸ್ ನಟಿಯಾಗಿ ಮಿಂಚಿದರು ನಟಿ ಸರಿತಾ..
ಚಿಕ್ಕ ವಯಸ್ಸಿಗೆ ಮದುವೆಯಾದ ಈ ನಟಿ ಹಿಂಸೆ ತಾಳಲಾರದೇ ವಿಚ್ಛೇದನವನ್ನು ಪಡೆಯುತ್ತಾರೆ.. ನಂತರ ಎರಡನೇ ಮದುವೆಯಾದರೂ ನೆಮ್ಮದಿ ಸಿಗದೇ ಎರಡನೇ ಪತಿಗೂ ವಿಚ್ಛೇದನ ನೀಡುತ್ತಾರೆ.. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ..
ಹೀಗೆ ವೈಯಕ್ತಿಕ ಜೀವನಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿದ ಸರಿತಾ ಮಕ್ಕಳೊಂದಿಗೆ ಸದ್ಯ ದುಬೈನಲ್ಲಿ ನೆಲೆಸಿದ್ದಾರೆ.. ಸರಿತಾ ಅವರ ಮಗ ಶ್ರವಣ್ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ..