David Miller Retirement: ಮೊನ್ನೆ ಮೊನ್ನೆಯಷ್ಟೇ ಮುಕ್ತಾಯಗೊಂಡ 2024ರ ಟಿ20 ವಿಶ್ವಕಪ್ನ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ಭಾರತದ ಎದುರು 7 ರನ್ಗಳ ಸೋಲು ಅನುಭವಿಸಿತು. ಇದರ ಬೆನ್ನಲ್ಲೇ ಖ್ಯಾತ ಕ್ರಿಕೆಟಿಗ ಡೇವಿಡ್ ಮಿಲ್ಲರ್ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನಿಂದ (International T20 Cricket) ನಿವೃತ್ತಿಯಾಗಿದ್ದಾರೆ ಎಂಬ ಊಹಾಪೋಹಗಳು ಎಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಡೇವಿಡ್ ಮಿಲ್ಲರ್ ಈ ವಿಷಯದ ಬಗ್ಗೆ ಮೌನ ಮುರಿದಿದ್ದಾರೆ.
ವದಂತಿಗಳಿಗೆ ತೆರೆ ಎಳೆದ ಮಿಲ್ಲರ್:
ತಮ್ಮ ಇನ್ಸ್ಟಾಗ್ರಾಮ್ನ ಸ್ಟೋರಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಡೇವಿಡ್ ಮಿಲ್ಲರ್(David Miller), "ನಾನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿಲ್ಲ. ಈ ಬಗೆಗಿನ ವದಂತಿಗಳೆಲ್ಲವೂ ಸುಳ್ಳು" ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ- “ಟಿ20 ವಿಶ್ವಕಪ್’ನೊಂದಿಗೆ ನನ್ನ ಇಬ್ಬರು ಪುತ್ರರು...” ರೋಹಿತ್ ಶರ್ಮಾ ತಾಯಿಯ ಪೋಸ್ಟ್ ವೈರಲ್!
ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣದ (Social Media) ಮೂಲಕವೇ ಟಿ20 ವಿಶ್ವಕಪ್ ಫೈನಲ್ನಲ್ಲಿ (T20 Worldcup Final) ಭಾರತದ ವಿರುದ್ಧದ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ್ದ ಡೇವಿಡ್ ಮಿಲ್ಲರ್, "ಸೋಲಿನಿಂದ ತುಂಬಾ ದುಃಖಿತನಾಗಿದ್ದೇನೆ ಮತ್ತು ಅದನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟ. ಅದೇನೇ ಇದ್ದರೂ ನಮ್ಮ ತಂಡದ ಬಗ್ಗೆ ಹೆಮ್ಮೆಯಿದೆ. ತಂಡವು ಭವಿಷ್ಯದಲ್ಲಿಯೂ ಹೊಸ ಮಾನದಂಡಗಳನ್ನು ಹೊಂದಿಸುವುದನ್ನು ಮುಂದುವರಿಸುತ್ತದೆ" ಎಂದಿದ್ದರು.
ಇದನ್ನೂ ಓದಿ- RCB ತಂಡಕ್ಕೆ ವಿರಾಟ್ ಕೊಹ್ಲಿ ನಾಯಕ! ಮತ್ತೆ ಕ್ಯಾಪ್ಟನ್ ಆಗ್ತಾರಾ ಕಿಂಗ್?
ಡೇವಿಡ್ ಮಿಲ್ಲರ್ ಟಿ20 ವೃತ್ತಿ ಜೀವನ:
ಚಿಕ್ಕ ಸ್ವರೂಪದ ಕ್ರಿಕೆಟ್ನ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾದ ಡೇವಿಡ್ ಮಿಲ್ಲರ್, ಅಂತರಾಷ್ಟ್ರೀಯ ಟಿ20 ವೃತ್ತಿ ಜೀವನದಲ್ಲಿ 125 ಪಂದ್ಯಗಳಲ್ಲಿ 140 ಸ್ಟ್ರೈಕ್ ರೇಟ್ನಲ್ಲಿ 2 ಶತಕಗಳು ಮತ್ತು 7 ಅರ್ಧ ಶತಕಗಳನ್ನು ಒಳಗೊಂಡಂತೆ 2, 437 ರನ್ ಗಳಿಸಿದ್ದಾರೆ.ಅಷ್ಟೇ ಅಲ್ಲ, ಕ್ರಿಕೆಟ್ನ ಕಡಿಮೆ ಸ್ವರೂಪದಲ್ಲಿ ದಕ್ಷಿಣ ಆಫ್ರಿಕಾ ಪರ ಅತಿವೇಗದ ಶತಕ ಗಳಿಸಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.