Tea Powder: ಇತ್ತೀಚಿನ ದಿನಗಳಲ್ಲಿ ಮನುಷ್ಯ ಏನೇ ತಿಂದರೂ, ಕುಡಿದರೂ ಅಪಾಯಕಾರಿಯಾಗುತ್ತ ಹೋಗುತ್ತಿದೆ... ಆಹಾರ ಪದಾರ್ಥ ತಯಾರು ಮಾಡುವ ಕಂಪನಿಗಳು ಅವುಗಳ ರುಚಿ ಹೆಚ್ಚಿಸಲು ಅಪಾಯಕಾರಿ ಪದಾರ್ಥಗಳನ್ನು ಬಳಸುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಐದನು ಗಮನದಲ್ಲಿಟ್ಟುಕೊಂಡು ಆಹಾರ ಸಂರಕ್ಷಣಾ ಇಲಾಖೆ ಕಲರ್ ಕ್ಯಾಂಡಿ, ಗೋಬಿ ಬ್ಯಾನ್ ಮಾಡಿತ್ತು.. ಈಗ ಇನ್ನೊಂದು ಪದಾರ್ಥದ ಬ್ಯಾನ್ ವಿಚಾರ ಕೇಳಿ ಬರುತ್ತಿದೆ. ಅದು ಕ್ಯಾಂಡಿ, ಗೋಬಿಗಿಂತಲೂ ಹೆಚ್ಚು ಜನರು ಇಷ್ಟಪಡುವ ಪದಾರ್ಥ. ನೀವು ಚಹಾ ಪ್ರಿಯರಾಗಿದ್ದರೆ ಈ ಸುದ್ದಿಯನ್ನು ಒಮ್ಮೆ ಓದಲೇಬೇಕು.
ಕಲರ್ ಕ್ಯಾಂಡಿ, ಗೋಬಿ ಬಳಿಕ ಬ್ರಾಂಡ್ ಟೀ ಪುಡಿಗಳಿಂದಲೂ (Tea Powder) ಅಪಾಯ ಕಾದಿದೆ ಎಂಬ ಸುದ್ದಿ ಕೇಳಿಬರುತ್ತಿದೆ... ಹುಷಾರ್, ರಸ್ತೆಯಲ್ಲಿ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಅಂತ ಟೀ ಕುಡಿದ್ರೆ ನಿಮ್ಮ ಪ್ರಾಣಕ್ಕೆ ಕಂಟಕವಾಗಬಹುದು. ಪ್ರತಿಷ್ಠಿತ ಟೀ ಪುಡಿಗಳ ಕಂಪನಿಗಳಿಂದಲೇ ಯಡವಟ್ಟು ಆಗಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.
ಇದನ್ನೂ ಓದಿ- ನಿಮ್ಮ ಊಟದ ರೀತಿ ಹೀಗಿದ್ದರೆ ಸಾಕು !ಔಷಧಿಯೂ ಬೇಡ ಪಥ್ಯವೂ ಬೇಡ ನಿಯಂತ್ರಣದಲ್ಲಿಯೇ ಇರುತ್ತದೆ ಶುಗರ್ !
ಒಂದಲ್ಲ..ಎರಡಲ್ಲ... 10ಕ್ಕೂ ಹೆಚ್ಚು ಕಂಪನಿಗಳ ಟೀ ಪುಡಿ ಬಳಕೆ ಆರೋಗ್ಯಕ್ಕೆ ಅಪಾಯಕಾರಿ (Tea Powder Dangerous For Health) ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಖುದ್ದು ಆಹಾರ ಸಂರಕ್ಷಣಾಧಿಕಾರಿ (Food Protection Authority) ಶ್ರೀನಿವಾಸ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಕೇವಲ ಟೀ ಪುಡಿಯಷ್ಟೇ ಅಲ್ಲ ಸಾಂಬಾರ್ ಪುಡಿಗಳಿಂದಲೂ ಬಾರೀ ಅಪಾಯ ಕಾದಿದೆ ಎಂಬ ಅಂಶವನ್ನೂ ಸಹ ಅವರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ- ಹೃದಯಾಘಾತದಂತಹ ಮಾರಣಾಂತಿಕ ಕಾಯಿಲೆಗಳಿಂದಲೂ ನಿಮ್ಮನ್ನು ರಕ್ಷಿಸುತ್ತೆ ಆಲೂಗಡ್ಡೆ ಸಿಪ್ಪೆ
ಇಷ್ಟು ವರ್ಷ ಇದ್ದ ಬ್ರಾಂಡ್ ಈಗ ಹೇಗೆ ಅಪಾಯ?
ಯಾವುದೇ ಒಂದು ಬ್ರಾಂಡ್ ರಿಜಿಸ್ಟರ್ ಆಗುವಾಗ ತಾನು ತಯಾರಿಸುವ ಆಹಾರ ಪದಾರ್ಥಗಳಲ್ಲಿ ಯಾವ ಸಾಮಾಗ್ರಿಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸಲಾಗುತ್ತದೆ ಎಂಬ ಅಂಶವನ್ನು ಉಲ್ಲೇಖಿಸಿರುತ್ತದೆ. ಈ ಕಂಪನಿಗೆ ಒಪ್ಪಿಗೆ ಸೂಚಿಸುವ ಮೊದಲು ಅಧಿಕಾರಿಗಳು ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ನಂತರ ಒಪ್ಪಿಗೆ ಸೂಚಿಸಿರುತ್ತಾರೆ. ಆದಾಗ್ಯೂ, ತನ್ನ ಬ್ರಾಂಡ್ ಮೂಲವನ್ನು ಉಳಿಸಿಕೊಳ್ಳುವುದು ಎಲ್ಲ ಮಾಲೀಕರ ಕೆಲಸ. ಇದರಲ್ಲಿ ಸ್ವಲ್ಪ ಹೆಚ್ವು ಕಡಿಮೆಯಾದ್ರೂ ಅದು ಕಳಪೆಯಾಗುತ್ತದೆ. ಅದೇನೇ ಇರಲಿ ಅಂತಹ ಅಪಾಯಕಾರಿ ಆಹಾರ ಪದಾರ್ಥಗಳ ಬಳಕೆ ಜನರ ಆರೋಗ್ಯದ ಮೇಲೆ ಹಲವು ರೀತಿಯಲ್ಲಿ ಅಡ್ಡಪರಿಣಾಮ ಬೀರಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.