PF Balance : ಪ್ರತಿ ತಿಂಗಳು ಪಿಎಫ್ ಖಾತೆಗೆ ಹಣ ಜಮಾ ಆಗುತ್ತಿದ್ದರೂ ಅದರಲ್ಲಿರುವ ಬ್ಯಾಲೆನ್ಸ್ ಎಷ್ಟು ಎನ್ನುವುದು ನಮಗೆ ತಿಳಿದಿರುವುದಿಲ್ಲ.ಭವಿಷ್ಯ ನಿಧಿಗಾಗಿ ಪ್ರತಿ ತಿಂಗಳು ನಿಮ್ಮ ವೇತನದಿಂದ ಹಣವನ್ನು ಕಡಿತಗೊಳಿಸಲಾಗುತ್ತದೆ. ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ತಮ್ಮ ಪಾಲಿನ ಹಣವನ್ನು ಠೇವಣಿ ಮಾಡಬೇಕಾಗುತ್ತದೆ. ಉದ್ಯೋಗಿಯ ಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.ಹಠಾತ್ ಅಗತ್ಯವಿದ್ದಾಗ, ವೈದ್ಯಕೀಯ ತುರ್ತುಸ್ಥಿತಿ ಇದ್ದಾಗ ಅಥವಾ ವಾಹನ ಖರೀದಿಸಲು ಡೌನ್ ಪೇಮೆಂಟ್ ಮಾಡಬೇಕಾದಾಗ ಈ ಹಣ ನಿಮ್ಮ ನೆರವಿಗೆ ಬರಬಹುದು. ಒಂದು ವೇಳೆ ನಿಮಗೆ ನಿಮ್ಮ ಯುನಿವರ್ಸಲ್ ಖಾತೆ ಸಂಖ್ಯೆ ಅಂದರೆ UAN ಗೊತ್ತಿಲ್ಲದಿದ್ದರೆ ಬ್ಯಾಲೆನ್ಸ್ ತಿಳಿದುಕೊಳ್ಳುವುದು ಕೂಡಾ ಕಷ್ಟವಾಗುತ್ತದೆ.ಆದರೆ, ಒಂದು SMS ಕಳುಹಿಸುವ ಮೂಲಕ ನಿಮ್ಮ PF ಖಾತೆಯ ಬ್ಯಾಲೆನ್ಸ್ ಅನ್ನು ತಿಳಿದುಕೊಳ್ಳುವ ವಿಧಾನವನ್ನು ನಾವಿಲ್ಲಿ ಹೇಳಲಿದ್ದೇವೆ.
ಸಂದೇಶ ಕಳುಹಿಸುವ ಮೂಲಕ PF ಬ್ಯಾಲೆನ್ಸ್ ಅನ್ನು ಹೇಗೆ ತಿಳಿಯುವುದು ? :
ತಮ್ಮ ಪಿಎಫ್ ಹಣವನ್ನು ಪರಿಶೀಲಿಸಲು ಬಯಸುವ ಗ್ರಾಹಕರು 7738299899 ಸಂಖ್ಯೆಗೆ ಟೆಕ್ಸ್ಟ್ ಮೆಸೇಜ್ ಕಳುಹಿಸಬೇಕು.ಇದಕ್ಕಾಗಿ,ಇಲ್ಲಿ ನೀಡಲಾದ ಕೆಲವು ಹಂತಗಳನ್ನು ಅನುಸರಿಸಬೇಕು:
1. ಮೊದಲನೆಯದಾಗಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7738299899 ಸಂಖ್ಯೆಗೆ ಸಂದೇಶ ಕಳುಹಿಸಿ.
2.ಸಂದೇಶದಲ್ಲಿ, "EPFOHO UAN" ಎಂದು ಟೈಪ್ ಮಾಡಿ.
3.UAN ಸಂಖ್ಯೆಯ ನಂತರ, ನಿಮ್ಮ ಆದ್ಯತೆಯ ಭಾಷೆಗಾಗಿ ಭಾಷಾ ಕೋಡ್ ಅನ್ನು ಟೈಪ್ ಮಾಡಿ. ಕನ್ನಡದಲ್ಲಿ ಮಾಹಿತಿಯನ್ನು ಪಡೆಯಲು ಬಯಸಿದರೆ, ನೀವು "EPFOHO UAN KAN " ಎಂದು ಟೈಪ್ ಮಾಡಿ.
4. ಸಂದೇಶವನ್ನು ಕಳುಹಿಸಿದ ನಂತರ, ನಿಮ್ಮ PF ಬ್ಯಾಲೆನ್ಸ್ ಎಷ್ಟಿದೆ ಎನ್ನುವ ಮಾಹಿತಿ SMS ಮೂಲಕವೇ ನಿಮಗೆ ಸಿಗುತ್ತದೆ. ಇಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿಮ್ಮ ಪಿಎಫ್ ಖಾತೆಯೊಂದಿಗೆ ನೋಂದಾಯಿಸಿದ್ದರೆ ಮಾತ್ರ ನೀವು SMS ಮೂಲಕ ಈ ಮಾಹಿತಿ ಪಡೆದುಕೊಳ್ಳಬಹುದು. ಸಬೇಕು.
ಇದನ್ನೂ ಓದಿ : ಆನ್ಲೈನ್ ಬ್ಲ್ಯಾಕ್ಮೇಲಿಂಗ್ 1,000ಕ್ಕೂ ಹೆಚ್ಚು ಸ್ಕೈಪ್ ಖಾತೆಗಳ ನಿರ್ಬಂಧ : ಇಂಡಿಯನ್ ಸೈಬರ್ ಕ್ರೈಮ್
PF ನಿಂದ ಹಿಂತೆಗೆದುಕೊಳ್ಳಲು, ಉದ್ಯೋಗಿಗಳು ಕೆಲವು ಷರತ್ತುಗಳನ್ನು ಪೂರೈಸಬೇಕು:
೧.ಉದ್ಯೋಗಿಯ ವಯಸ್ಸು 58 ವರ್ಷವಾಗಿರಬೇಕು.
೨.ಉದ್ಯೋಗಿ ಕನಿಷ್ಠ 5 ವರ್ಷಗಳ ಕಾಲ ಪಿಎಫ್ಗೆ ಕೊಡುಗೆ ನೀಡಿರಬೇಕು.
೩.ಪಿಎಫ್ನಿಂದ ಹಿಂಪಡೆಯಲು, ಉದ್ಯೋಗಿ ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
PF ನ ಪ್ರಯೋಜನಗಳು ಹೀಗಿವೆ:
೧.ಇದು ನಿವೃತ್ತಿಯ ನಂತರ ಉದ್ಯೋಗಿಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.
೨.ಪಿಎಫ್ನಲ್ಲಿ ಠೇವಣಿ ಮಾಡಿದ ಮೊತ್ತದ ಮೇಲೆ ಬಡ್ಡಿಯೂ ಲಭ್ಯವಿದೆ.ಇದು ನಿವೃತ್ತಿಯ ನಂತರ ಉದ್ಯೋಗಿಗೆ ಬಹಳವಾಗಿ ನೆರವಿಗೆ ಬರುತ್ತದೆ.
೩.ಪಿಎಫ್ ಮೊತ್ತದ ಮೇಲೆ ಉದ್ಯೋಗಿಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು.
೪.ಪಿಎಫ್ ಒಂದು ಪ್ರಮುಖ ಉಳಿತಾಯ ಯೋಜನೆಯಾಗಿದ್ದು ಅದು ನಿವೃತ್ತಿಯ ನಂತರ ಉದ್ಯೋಗಿಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಸ್ಯಾಮ್ಸಂಗ್ ಗ್ಯಾಲಕ್ಸಿ F34 5G ಸ್ಮಾರ್ಟ್ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.