ಬೆಂಗಳೂರು: ಹೊಸಕೋಟೆಯ ಅವಿಮುಕ್ತೇಶ್ವರ ಸಮಿತಿಗೆ ಅನ್ಯಧರ್ಮೀಯ ಸದಸ್ಯ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ಈ ಬಗ್ಗೆ ಬುಧವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯ ಸುಳ್ಳಿನ ವಿರುದ್ಧದ ನಮ್ಮ ಯುದ್ಧ ಮುಂದುವರೆಯಲಿದೆ ಎಂದು ಕುಟುಕಿದೆ.
ʼಸುಳ್ಳು ಹಾಗೂ ದುರುದ್ದೇಶದ ಪೋಸ್ಟ್ ಮಾಡಿದ್ದಕ್ಕೆ ಚುನಾವಣಾ ಆಯೋಗದಿಂದ ಹಾಗೂ ಜಾಗತಿಕ ಮಟ್ಟದಲ್ಲಿ ಮುಖಭಂಗ ಅನುಭವಿಸಿದರೂ ಬಿಜೆಪಿಯ ಫೇಕ್ ಫ್ಯಾಕ್ಟರಿಗೆ ಬುದ್ದಿ ಬಂದಂತಿಲ್ಲ. ಹೊಸಕೋಟೆಯ ಅವಿಮುಕ್ತೇಶ್ವರ ಬ್ರಹ್ಮಕಲಶೋತ್ಸವ ಸಮಿತಿಗೆ ಅನ್ಯ ಧರ್ಮದ ವ್ಯಕ್ತಿಯನ್ನು ನೇಮಿಸುವುದು ಬಹಳ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ, ಇದು ಹೊಸದೇನೂ ಅಲ್ಲ. 2020ರಲ್ಲಿಯೂ ಅನ್ಯ ಧರ್ಮದ ವ್ಯಕ್ತಿಯನ್ನು ಸಮಿತಿಯಲ್ಲಿ ನೇಮಿಸಲಾಗಿತ್ತು, ಶಿಫಾರಸು ಮಾಡಿದ್ದು ಬಿಜೆಪಿ ಶಾಸಕ ಎಂಟಿಬಿ ನಾಗರಾಜ್, ಆಗ ಯಾರ ಸರ್ಕಾರವಿತ್ತು, ಸ್ವತಃ ಬಿಜೆಪಿ ಸರ್ಕಾರʼವೆಂದು ತಿರುಗೇಟು ನೀಡಿದೆ.
ಸುಳ್ಳು ಹಾಗೂ ದುರುದ್ದೇಶದ ಪೋಸ್ಟ್ ಮಾಡಿದ್ದಕ್ಕೆ ಚುನಾವಣಾ ಆಯೋಗದಿಂದ ಹಾಗೂ ಜಾಗತಿಕ ಮಟ್ಟದಲ್ಲಿ ಮುಖಭಂಗ ಅನುಭವಿಸಿದರೂ ಬಿಜೆಪಿಯ ಫೇಕ್ ಫ್ಯಾಕ್ಟರಿಗೆ ಬುದ್ದಿ ಬಂದಂತಿಲ್ಲ.
ಹೊಸಕೋಟೆಯ ಅವಿಮುಕ್ತೇಶ್ವರ ಬ್ರಹ್ಮಕಲಶೋತ್ಸವ ಸಮಿತಿಗೆ ಅನ್ಯ ಧರ್ಮದ ವ್ಯಕ್ತಿಯನ್ನು ನೇಮಿಸುವುದು ಬಹಳ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ, ಇದು ಹೊಸದೇನೂ ಅಲ್ಲ.… https://t.co/zy8eslqSHH pic.twitter.com/3NjnJQvAsS
— Karnataka Congress (@INCKarnataka) May 8, 2024
ಇದನ್ನೂ ಓದಿ: ಕರ್ನಾಟಕ ಲೋಕಸಭಾ ಚುನಾವಣೆ: ಎರಡನೇ ಹಂತದಲ್ಲಿ ಶೇ.70ರಷ್ಟು ವೋಟಿಂಗ್
ʼ2022ರಲ್ಲೂ ಅಲ್ಪಸಂಖ್ಯಾತ ವರ್ಗದ ವ್ಯಕ್ತಿಯೊಬ್ಬರನ್ನು ನೇಮಿಸಲಾಗಿತ್ತು, ಆಗಲೂ ಶಿಫಾರಸು ಮಾಡಿದ್ದು ಎಂಟಿಬಿ ನಾಗರಾಜ್, ಆಗಲೂ ರಾಜ್ಯದಲ್ಲಿ ಇದ್ದಿದ್ದು ಬಿಜೆಪಿ ಸರ್ಕಾರ. ಡಿಯರ್ ಬಿಜೆಪಿ, ಈ ಹಿಂದೆ ನಿಮ್ಮ ಅವಧಿಯಲ್ಲಿ ನೇಮಕವಾದ ಸಮಿತಿಯ ಬಗ್ಗೆ ಉತ್ತರ ಕೊಡುವ ದಮ್ಮು ತಾಕತ್ತು ಇದೆಯೇ? ನಿಮ್ಮ ಫೇಕ್ ಫ್ಯಾಕ್ಟರಿಯ ಬಂಡವಾಳ ಜನತೆಗೆ ಅರ್ಥವಾಗಿದೆ. ನಿಮ್ಮ ಯಾವ ಆಟಗಳೂ ನಡೆಯುವುದಿಲ್ಲʼವೆಂದು ಕಾಂಗ್ರೆಸ್ ಟೀಕಿಸಿದೆ.
ಬಿಜೆಪಿಯ ಕೋಮುವಾದ ಹಾಗೂ ವಿಭಜನಾತ್ಮಕ ರಾಜಕಾರಣ, ಸುಳ್ಳುಗಳಿಂದ ದಿಕ್ಕು ತಪ್ಪಿಸುವ ಪ್ರಾಪಗಾಂಡಕ್ಕೆ ಯಾವ ಮಿತಿಯೂ ಇಲ್ಲದಂತಾಗಿದೆ.
ಸುಳ್ಳು ಹಾಗೂ ದ್ವೇಷದಿಂದ ಕೂಡಿದ ಪೋಸ್ಟನ್ನು ಡಿಲೀಟ್ ಮಾಡುವಂತೆ ಚುನಾವಣಾ ಆಯೋಗದ ನಿರ್ದೇಶನವು ಬಂಡತನದ ಬಿಜೆಪಿಗೆ ಕಾಪಾಳಮೋಕ್ಷಕ್ಕೆ ಸಮನಾದ ಅವಮಾನವಾಗಿದೆ!
ಸ್ವತಃ ಮೋದಿಯೇ ಸುಳ್ಳಿನ ಶೂರನಂತೆ ತನ್ನ… pic.twitter.com/WTMFZXnQXT
— Karnataka Congress (@INCKarnataka) May 8, 2024
ʼಬಿಜೆಪಿಯ ಕೋಮುವಾದ ಹಾಗೂ ವಿಭಜನಾತ್ಮಕ ರಾಜಕಾರಣ, ಸುಳ್ಳುಗಳಿಂದ ದಿಕ್ಕು ತಪ್ಪಿಸುವ ಪ್ರಾಪಗಾಂಡಕ್ಕೆ ಯಾವ ಮಿತಿಯೂ ಇಲ್ಲದಂತಾಗಿದೆ. ಸುಳ್ಳು ಹಾಗೂ ದ್ವೇಷದಿಂದ ಕೂಡಿದ ಪೋಸ್ಟನ್ನು ಡಿಲೀಟ್ ಮಾಡುವಂತೆ ಚುನಾವಣಾ ಆಯೋಗದ ನಿರ್ದೇಶನವು ಬಂಡತನದ ಬಿಜೆಪಿಗೆ ಕಾಪಾಳಮೋಕ್ಷಕ್ಕೆ ಸಮನಾದ ಅವಮಾನವಾಗಿದೆ! ಸ್ವತಃ ಪ್ರಧಾನಿ ಮೋದಿಯೇ ಸುಳ್ಳಿನ ಶೂರನಂತೆ ತನ್ನ ಭಾಷಣದುದ್ದಕ್ಕೂ ಆಧಾರವಿಲ್ಲದ ಅರ್ಥಹೀನ ಮಾತನಾಡುತ್ತಿದ್ದಾರೆ, ಬಿಜೆಪಿಯ ಐಟಿ ಸೆಲ್ ಕೂಡ ಅದನ್ನೇ ಮಾಡುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಇದನ್ನೂ ಓದಿ: ಸಂಸದ ಪ್ರಜ್ವಲ್ ರೇವಣ್ಣ ಕೇಸ್ ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಇಂದು ಜೆಡಿಎಸ್ ಬೃಹತ್ ಪ್ರತಿಭಟನೆ
ʼನಾವು ಬಿಜೆಪಿಯ ಸುಳ್ಳುಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ, ಸುಳ್ಳುಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ, ಸುಳ್ಳಿನ ವಿರುದ್ಧದ ನಮ್ಮ ಯುದ್ಧ ಮುಂದುವರೆಯುತ್ತಲೇ ಇರುತ್ತದೆ. ನ್ಯಾಯಾಲಯ ನೀಡುವ ಶಿಕ್ಷೆ ಎದುರಿಸಲು ಕರ್ನಾಟಕ ಬಿಜೆಪಿ ಸಜ್ಜಾಗಲಿ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.