ಬಿಸಿಲಿಗೆ ಬಲು ತಂಪು ಕರ್ಬೂಜ ಹಣ್ಣು: ಬೇಸಿಗೆಯಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಸಿಗುವುದು ಈ ಎಲ್ಲಾ ಪ್ರಯೋಜನ

Health Benefits Muskmelon: ಕರ್ಬೂಜ ಹಣ್ಣಿನಲ್ಲಿರುವ ವಿಟಮಿನ್ ಎ ಕಣ್ಣಿನ ಸಂಬಂಧಿ ಸಮಸ್ಯೆಗಳನ್ನು ತಡೆಯುತ್ತದೆ. ದೃಷ್ಟಿ ಸುಧಾರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

Written by - Bhavishya Shetty | Last Updated : Apr 29, 2024, 05:53 PM IST
    • ಬೇಸಿಗೆಯಲ್ಲಿ ಯಥೇಚ್ಛವಾಗಿ ದೊರೆಯುವ ಕರ್ಬೂಜ ಹಣ್ಣು
    • ಇದರಲ್ಲಿರುವ ಬೀಟಾ-ಕ್ಯಾರೋಟಿನ್ ಕ್ಯಾನ್ಸರ್ ಕೋಶಗಳನ್ನು ತೆಗೆದುಹಾಕುತ್ತದೆ
    • ಕರ್ಬೂಜ ಹಣ್ಣಿನಲ್ಲಿರುವ ವಿಟಮಿನ್ ಎ ಕಣ್ಣಿನ ಸಂಬಂಧಿ ಸಮಸ್ಯೆಗಳನ್ನು ತಡೆಯುತ್ತದೆ
ಬಿಸಿಲಿಗೆ ಬಲು ತಂಪು ಕರ್ಬೂಜ ಹಣ್ಣು: ಬೇಸಿಗೆಯಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಸಿಗುವುದು ಈ ಎಲ್ಲಾ ಪ್ರಯೋಜನ  title=
Muskmelon Fruit Benefits

Health Benefits Muskmelon: ಸಾಮಾನ್ಯವಾಗಿ ಬೇಸಿಗೆಯಲ್ಲಿ ಯಥೇಚ್ಛವಾಗಿ ದೊರೆಯುವ ಕರ್ಬೂಜ ಹಣ್ಣು ಅಪಾರ ಪ್ರಮಾಣದಲ್ಲಿ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ. ಅಂದಹಾಗೆ ಕರ್ಬೂಜದಲ್ಲಿ ವಿಟಮಿನ್ ಕೆ ಮತ್ತು ಇ ಸಮೃದ್ಧವಾಗಿದ್ದು, ಈ ಕಾರಣದಿಂದಾಗಿ, ಸಂತಾನೋತ್ಪತ್ತಿ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಮಕ್ಕಳಿಲ್ಲದಿರುವವರು ಈ ಹಣ್ಣನ್ನು ಆಗಾಗ್ಗೆ ಸೇವಿಸಬೇಕು ಎಂದು ವೈದ್ಯರು ಸಹ ಸಲಹೆ ನೀಡುತ್ತಾರೆ. ಈ ಹಣ್ಣು ರಕ್ತ ಪರಿಚಲನೆ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇದನ್ನೂ ಓದಿ: CSK ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಪತ್ನಿ ಯಾರು ಗೊತ್ತಾ? ಈಕೆಯೂ ಕ್ರಿಕೆಟರ್… ಟೀಂ ಇಂಡಿಯಾ ಮಹಿಳಾ ತಂಡದ ಸ್ಟಾರ್ ಪ್ಲೇಯರ್!

ಇದರಲ್ಲಿರುವ ಬೀಟಾ-ಕ್ಯಾರೋಟಿನ್ ಕ್ಯಾನ್ಸರ್ ಕೋಶಗಳನ್ನು ತೆಗೆದುಹಾಕುತ್ತದೆ ಮತ್ತು ಪ್ರಿ-ರ್ಯಾಡಿಕಲ್ಗಳನ್ನು ತೆಗೆದುಹಾಕುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಬಿಳಿ ರಕ್ತ ಕಣಗಳ ಬೆಳವಣಿಗೆಗೂ ಈ ಹಣ್ಣು ಉಪಯುಕ್ತವಾಗಿದೆ.

ಕರ್ಬೂಜ ಹಣ್ಣಿನಲ್ಲಿರುವ ವಿಟಮಿನ್ ಎ ಕಣ್ಣಿನ ಸಂಬಂಧಿ ಸಮಸ್ಯೆಗಳನ್ನು ತಡೆಯುತ್ತದೆ. ದೃಷ್ಟಿ ಸುಧಾರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

ಈ ಹಣ್ಣಿನಲ್ಲಿರುವ ಪೊಟ್ಯಾಶಿಯಂನಿಂದ ಹೃದಯಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತವೆ. ಹೃದಯದ ಸಮಸ್ಯೆಗಳನ್ನು ಹೋಗಲಾಡಿಸಲು ಕರ್ಬೂಜ ಉಪಯುಕ್ತವಾಗಿದೆ.

ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ಕರ್ಬೂಜ ಹಣ್ಣನ್ನು ನಿತ್ಯ ಸೇವಿಸಿದರೆ ಕಲ್ಲು ಕರಗುತ್ತದೆ. ಅಂತೆಯೇ ಈ ಹಣ್ಣಿನಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಪೈಲ್ಸ್‌’ನಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಒಳ್ಳೆಯದು.

ಇದನ್ನೂ ಓದಿ: ಭಾರತದ ಶ್ರೇಷ್ಠ ಬೌಲರ್ ಶಾರ್ದೂಲ್ ಠಾಕೂರ್ ಪತ್ನಿ ಎಷ್ಟೊಂದು ಕ್ಯೂಟ್! ಈಕೆಯ ಅಂದದ ಮುಂದೆ ಅನುಷ್ಕಾ ಬ್ಯೂಟಿ ಕೂಡ ಯಾವ ಲೆಕ್ಕಾ!

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News