ನವದೆಹಲಿ: ನವೆಂಬರ್ 9 ರಂದು ಕಾರ್ತಾರ್ಪುರ ಕಾರಿಡಾರ್ ಉದ್ಘಾಟನಾ ಸಮಾರಂಭಕ್ಕೆ ಸಿಧು ಆಗಮಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಲು 'ಹಮಾರಾ ಸಿಧು ಎಲ್ಲಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಚಾರಿಸಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಇಮ್ರಾನ್ ಖಾನ್ "ಅಚ್ಚಾ ಹಮಾರಾ ವೋ ಸಿಧು ಕಿಧರ್ ಹೈ? ಮೇನ್ ಕೆಹ್ ರಾಹು ಹೂ ಹಮಾರಾ ಸಿಧು" ಎಂದು ವಿಚಾರಿಸಿದ್ದಾರೆ. ಈ ವಿಡಿಯೋವನ್ನು ಈಗ ಪತ್ರಕರ್ತೆ ಗೀತಾ ಮೋಹನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಗುರುನಾನಕ್ ದೇವ್ ಅವರ 550 ನೇ ಜನ್ಮ ದಿನಾಚರಣೆಯ ಮುನ್ನ ಇಮ್ರಾನ್ ಖಾನ್ ಅವರು ಪಂಜಾಬ್ ಪ್ರಾಂತ್ಯದ ಕರ್ತಾರ್ಪುರ ಕಾರಿಡಾರ್ ಅನ್ನು ಉದ್ಘಾಟಿಸಿದರು. ಈ ಕಾರಿಡಾರ್ ಸಾವಿರಾರು ಭಾರತೀಯ ಸಿಖ್ ಯಾತ್ರಿಕರಿಗೆ ಕರ್ತಾರ್ಪುರ್ ಸಾಹಿಬ್ ಗುರುದ್ವಾರವನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುತ್ತದೆ.
Moments before the Indian official jatha arrived for pilgrimage through #KartarpurCorridor...
An entire conversation by Pak PM @ImranKhanPTI on "Hamara Sidhu"
Watch.@IndiaToday @MEAIndia @ForeignOfficePk @IndiainPakistan @Ajaybis @DrSJaishankar @capt_amarinder @sherryontopp pic.twitter.com/V1rwYbDVit— Geeta Mohan گیتا موہن गीता मोहन (@Geeta_Mohan) November 9, 2019
ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಿಖ್ ಯಾತ್ರಿಕರ ಮೊದಲ ನಿಯೋಗವನ್ನು ಕಾರ್ತಾರ್ಪುರ ಕಾರಿಡಾರ್ ಗೆ ಮುನ್ನಡೆಸಿದರು. ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೂಡ ಈ 'ಜಾಥಾ'ದ ಭಾಗವಾಗಿದ್ದರೆ, ಪಾಕಿಸ್ತಾನದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಿಧು ಮುಖ್ಯ ಅತಿಥಿಯಾಗಿದ್ದರು, ಅವರನ್ನು ಇಮ್ರಾನ್ ಖಾನ್ ಆಹ್ವಾನಿಸಿದ್ದರು.
ಪಾಕಿಸ್ತಾನದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಿಧು ಅವರು ಇಮ್ರಾನ್ ಖಾನ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು. "ವಿಭಜನೆಯ ನಂತರ ಮೊದಲ ಬಾರಿಗೆ ಗಡಿಗಳನ್ನು ಕಿತ್ತುಹಾಕಲಾಗಿದೆ. ನನ್ನ ಸ್ನೇಹಿತ ಇಮ್ರಾನ್ ಖಾನ್ ಅವರ ಕೊಡುಗೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ. ಅದಕ್ಕಾಗಿ ನಾನು ಮೋದಿ ಜಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದಕ್ಕಾಗಿ ನಾನು ಮುನ್ನಾಭಾಯ್ ಎಂಬಿಬಿಎಸ್ ಶೈಲಿಯ ಅಪ್ಪುಗೆಯನ್ನು ನಿಮಗೆ ಮೋದಿ ಸಹಾಬ್ ಕಳುಹಿಸುತ್ತಿದ್ದೇನೆ" ಎಂದು ಸಿಧು ಹೇಳಿದ್ದರು.