ನವದೆಹಲಿ: ಹಿರಿಯ ನಟ ಅಮಿತಾಭ್ ಬಚ್ಚನ್ ರಜನಿಕಾಂತ್ ರಾಜಕೀಯ ಪ್ರವೇಶದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
75 ವರ್ಷ ವಯಸ್ಸಿನ ಬಚ್ಚನ್ ತಮ್ಮ ಟ್ವಿಟ್ಟರ್ ನಲ್ಲಿ ರಜನಿಕಾಂತ್ ರವರ ಹೊಸ ರಾಜಕೀಯ ಇನ್ನಿಂಗ್ಸ್ಗೆಶುಭಾಶಯಗಳನ್ನು ಹೇಳಿದ್ದಾರೆ. "ನನ್ನ ಆತ್ಮೀಯ ಸ್ನೇಹಿತ, ನನ್ನ ಸಹೋದ್ಯೋಗಿ ಮತ್ತು ವಿನಮ್ರ ,ರಜನಿಕಾಂತ್ ರಾಜಕೀಯ ಪ್ರವೇಶಿಸಲು ನಿರ್ಧರಿಸಿದ್ದಾರೆ .. ಅವರ ಯಶಸ್ಸಿಗಾಗಿ ನನ್ನ ಅತ್ಯುತ್ತಮ ಶುಭಾಶಯಗಳು!' ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ."
T 2758 - My dear friend , my colleague and a humble considerate human, RAJNIKANTH, announces his decision to enter politics .. my best wishes to him for his success !!🙏🙏 pic.twitter.com/dByrmlZb2c
— Amitabh Bachchan (@SrBachchan) December 31, 2017
ಅಮಿತಾಬ್ ಬಚ್ಚನ್ ಥಗ್ಸ್ ಆಫ್ ಹಿಂದುಸ್ತಾನ್ ಮತ್ತು 102 ನಾಟ್ ಔಟ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಜನಿಕಾಂತ್ ಅವರ ಬಹುನಿರೀಕ್ಷಿತ 2.0 ಜನವರಿ 2018 ರಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಅಕ್ಷಯ್ ಕುಮಾರ್ ಮತ್ತು ಆಮಿ ಜಾಕ್ಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದು, 2010 ರ ಹಿಟ್ ಚಿತ್ರ ಎಂಥಿರಾನ್ (ರೋಬೋಟ್) ಚಿತ್ರದ ಮುಂದುವರೆದ ಭಾಗವಾಗಿದೆ ಎಂದು ಹೇಳಲಾಗುತ್ತಿದೆ.