Video: ಭಾಯ್ ದೂಜ್ ಪ್ರಯುಕ್ತ ಮೇಲ್ಚಾವಣಿ ಕ್ರಿಕೆಟ್ ಆಡಿದ ಶಿಖರ್ ಧವನ್...!

ನವೆಂಬರ್ 3 ರಿಂದ ಬಾಂಗ್ಲಾದೇಶ ವಿರುದ್ಧದ ಟಿ 20 ಐ ಸರಣಿಗೂ ಮುನ್ನ ಶಿಖರ್ ಧವನ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ದೆಹಲಿಯಲ್ಲಿ ಮಂಗಳವಾರದಂದು ಮೇಲ್ಮಾಳಿಗೆ ಕ್ರಿಕೆಟ್ ಆಡಿದ್ದಾರೆ.

Last Updated : Oct 29, 2019, 04:31 PM IST
Video: ಭಾಯ್ ದೂಜ್ ಪ್ರಯುಕ್ತ ಮೇಲ್ಚಾವಣಿ ಕ್ರಿಕೆಟ್ ಆಡಿದ ಶಿಖರ್ ಧವನ್...!  title=
Photo courtesy: Facebook

ನವದೆಹಲಿ: ನವೆಂಬರ್ 3 ರಿಂದ ಬಾಂಗ್ಲಾದೇಶ ವಿರುದ್ಧದ ಟಿ 20 ಸರಣಿಗೂ ಮುನ್ನ ಶಿಖರ್ ಧವನ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ದೆಹಲಿಯಲ್ಲಿ ಮಂಗಳವಾರದಂದು ಮೇಲ್ಚಾವಣಿ  ಕ್ರಿಕೆಟ್ ಆಡಿದ್ದಾರೆ.

 

ಭಾಯ್ ದೂಜ್ ಸಂದರ್ಭದಲ್ಲಿ ಧವನ್ ತಮ್ಮ ಕುಟುಂಬದೊಂದಿಗೆ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಅವರು ತಮ್ಮ ಮನೆಯ ಟೆರೇಸ್‌ನಲ್ಲಿ ಕ್ರಿಕೆಟ್ ಆಡುವ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.

ಇಂದು ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆದೆ. ಅಂತಹ ದಿನಗಳು ಯಾವಾಗಲೂ ನನಗೆ ತುಂಬಾ ಸಂತೋಷವನ್ನುಂಟುಮಾಡುತ್ತವೆ .. ಎಲ್ಲರಿಗೂ ಭಾಯ್ ದೂಜ್ ಶುಭಾಶಯಗಳು" ಎಂದು ಧವನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ನವಂಬರ್ 3 ರಿಂದ ಬಾಂಗ್ಲಾದೇಶದ ವಿರುದ್ಧ ಇರುವ ಟಿ-20 ಪಂದ್ಯದಲ್ಲಿ ಶಿಖರ್ ಧವನ್ ಆಡಲಿದ್ದಾರೆ
 

Trending News