Watermelon Peel Curry : ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿ ಹೆಚ್ಚುತ್ತಲೇ ಇದೆ. ಜನರು ವಿವಿಧ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಆದರೆ ಕೂಲ್ ಡ್ರೀಂಕ್ಸ್ನಂತಹ ತಂಪು ಪಾನೀಯಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಪೈಕಿ ದೇಸಿಯ ಪಾನೀಯಗಳಾದ ಎಳನೀರು ಮತ್ತು ಕಲ್ಲಗಂಡಿ ಹಣ್ಣನ್ನು ಹಾಗು ಇದರ ಜ್ಯೂಸ್ ಕುಡಿಯಬಹುದು..
ಕಲ್ಲಂಗಡಿ ಬೇಸಿಗೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಹಣ್ಣು. ಈ ಹಣ್ಣಿನಲ್ಲಿ ನೀರಿನಾಂಶ ಹೆಚ್ಚಾಗಿದ್ದು, ಇದು ನಮ್ಮ ದೇಹವನ್ನು ಹೈಡ್ರೇಟ್ ಮಾಡುತ್ತದೆ. ಈ ಹಣ್ಣನ್ನು ತಿನ್ನುವವರಿಗಿಂತ ಜ್ಯೂಸ್ ಮಾಡಿಕೊಂಡು ಕುಡಿಯುವವರೇ ಹೆಚ್ಚು. ಆದರೆ ಇಲ್ಲಿ ಸಾಮಾನ್ಯವಾಗಿ ಜನ ಮಾಡುವ ತಪ್ಪೇನು ಅಂದ್ರೆ, ಹಣ್ಣನ್ನು ತಿಂದು ಸಿಪ್ಪೆಯನ್ನು ತಿಪ್ಪೆಗೆ ಎಸೆಯುತ್ತಾರೆ..
ಹೌದು.. ಹಣ್ಣು ಮಾತ್ರ ತಿಂದು ಸಿಪ್ಪೆಯನ್ನು ತಿಪ್ಪಿಗೆ ಬಿಸಾಡುತ್ತಾರೆ. ಇದಕ್ಕೆ ಕಾರಣ ಈ ಹಣ್ಣಿನ ಸಿಪ್ಪೆಯ ಮಹತ್ವ ಮತ್ತು ಅದರ ಉಪಯೋಗ ಹೆಚ್ಚಾಗಿ ಜನರಿಗೆ ತಿಳಿದಿಲ್ಲ. ಇಂದು ನಾವು ನಿಮಗೆ ಹೇಳುವ ಟಿಪ್ಸ್ನಿಂದ ಮುಂದೆ ಎಂದೂ ನೀವು ಕಲ್ಲಂಗಡಿ ಹಣ್ಣಿನ ಸಿಪ್ಪೆಯನ್ನು ಬಿಡಾಡುವೇ ಇಲ್ಲ...
ಕಲ್ಲಂಗಡಿ ಹಣ್ಣು ತಿಂದ ನಂತರ ಅದರ ಸಿಪ್ಪೆಯನ್ನು ಬಿಸಾಡಬಾರದು. ಇದೇ ಸಿಪ್ಪೆಯಿಂದ ಪಲ್ಯ ಮಾಡಿಕೊಂಡು ಮೊಸರನ್ನದ ಜತೆ ರಸಂ ಹಾಗೂ ಬೇಳೆಸಾರಿನ ಜತೆಗೆ ತಿಂದ್ರೆ ಸ್ವರ್ಗಕ್ಕೆ ಮೂರೆ ಗೇಣು.. ಅಷ್ಟು ರುಚಿಯಾಗಿರುತ್ತೆ ಈ ಪಲ್ಯ.. ಬನ್ನಿ ರುಚಿಕರವಾದ ಕಲ್ಲಂಡಗಿ ಸಿಪ್ಪೆಯ ಪಲ್ಯವನ್ನು ಮಾಡುವ ವಿಧಾನ ತಿಳಿಯೋಣ..
ಮಾಡುವ ವಿಧಾನ: ಕಲ್ಲಂಗಡಿ ಸಿಪ್ಪೆಯನ್ನು ಸಣ್ಣದಾಗಿ ಕತ್ತರಿಸಿಕೊಂಡು ಪಕ್ಕಕ್ಕೆ ಇಡಿ.. ನಂತರ ಒಂದು ಬಾಣಲೆಯಲ್ಲಿ ಸಾಸಿವೆ, ಜೀರಿಗೆ, ಕರಿಬೇವು, ಸಣ್ಣದ್ದಾಗಿ ಹೆಚ್ಚಿದ ಹಸಿ ಮೆಣಸಿನಕಾಯಿ, ಈರುಳ್ಳಿ ಹಾಕಿ ಒಗ್ಗರಣೆ ಮಾಡಿ. ನಂತರ ಕತ್ತಿರಿಸಿಟ್ಟುಕೊಂಡಿದ್ದ ಕಲ್ಲಂಗಡಿ ಸಿಪ್ಪೆ ತುಂಡುಗಳನ್ನು ಹಾಕಿ, ರುಚಿಗೆ ತಕ್ಕಷ್ಟು ಸ್ವಲ್ಪ ಉಪ್ಪು, ಅರಿಶಿನ, ಸಾಂಬಾರ್ ಪುಡಿ ಹಾಕಿ 5-10 ನಿಮಿಷ ಬೇಯಲು ಬಿಡಿ.