OMG: ʼಫಸ್ಟ್ ನೈಟ್ʼ ದಿನವೇ ಬೆಡ್‌ರೂಂ​ನಲ್ಲಿ ಪ್ರಾಣ ಬಿಟ್ಟ ವಧು! ಏನಾಗಿತ್ತು ಗೊತ್ತಾ?

Bride died hours after her marriage: ಅಖಿಲಾ ಸಾವಿನ ಸುದ್ದಿ ತಿಳಿದ ಪೊಲೀಸರು ಘಟನೆಯ ಬಗ್ಗೆ ಕುಟುಂಬಸ್ಥರನ್ನು ವಿಚಾರಿಸಿದ್ದಾರೆ. ಅಖಿಲಾ ಬೆಡ್‌ರೂಂನಲ್ಲಿ ಮಲಗಿದ್ದು, ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Written by - Puttaraj K Alur | Last Updated : Mar 31, 2024, 01:12 PM IST
  • ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧು ಅನುಮಾನಾಸ್ಪದವಾಗಿ ಸಾವು
  • ಹೈದರಾಬಾದ್‌ನ ಮಾನ್ಯಂ ಜಿಲ್ಲೆಯ ಮಕ್ಕುವ ಮಂಡಲದ ದಬ್ಬಗೆದ್ದದಲ್ಲಿ ಘಟನೆ
  • ಮದುವೆ ಮುಗಿದ ಬಳಿಕ ಬೆಡ್‌ರೂಂಗೆ ಹೋದವಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ!
OMG: ʼಫಸ್ಟ್ ನೈಟ್ʼ ದಿನವೇ ಬೆಡ್‌ರೂಂ​ನಲ್ಲಿ ಪ್ರಾಣ ಬಿಟ್ಟ ವಧು! ಏನಾಗಿತ್ತು ಗೊತ್ತಾ? title=
ವಧು ಅನುಮಾನಾಸ್ಪದ ಸಾವು!

ನವದೆಹಲಿ: ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಪಾರ್ವತಿಪುರಂ ಮಾನ್ಯಂ ಜಿಲ್ಲೆಯಲ್ಲಿ ಮಕ್ಕುವ ಮಂಡಲದ ದಬ್ಬಗೆದ್ದದಲ್ಲಿ ಈ ಘಟನೆ ನಡೆದಿದ್ದು, ಸಂಚಲನ ಮೂಡಿಸಲಿದೆ.

ಹಿರಿಯರ ಸಮ್ಮುಖದಲ್ಲಿ ಪಾರ್ವತಿಪುರಂನ ವೆತ್ಸ ಅಖಿಲಾ ಮತ್ತು ಮಕ್ಕುವ ಮಂಡಲದ ದಬ್ಬಗೆದ್ದ ಗ್ರಾಮದ ಭಾಸ್ಕರ್ ರಾವ್ ಅವರ ವಿವಾಹ ಅದ್ಧೂರಿಯಾಗಿ ನಡೆದಿತ್ತು. ಕುಟುಂಬಸ್ಥರು, ಬಂಧು-ಮಿತ್ರರು ತುಂಬಿ ತುಳುಕಿದ್ದ ಈ ಮದುವೆಯಲ್ಲಿ ಸಂಭ್ರಮವೇ ಮನೆ ಮಾಡಿತ್ತು. ಮಧ್ಯರಾತ್ರಿಯವರೆಗೂ ನಡೆದ ಮದುವೆ ಮುಗಿದ ಬಳಿಕ ವಧು ಅಖಿಲಾ ಮಲಗುವ ಕೋಣೆಗೆ ಹೋಗಿದ್ದರು. 

ಇದನ್ನೂ ಓದಿ: ಸಂಗಾತಿಯನ್ನು ಭೂತ, ಪಿಶಾಚಿ ಎಂದು ಕರೆಯುವುದು ಕಿರುಕುಳವಲ್ಲ!: ಹೈಕೋರ್ಟ್

ಆದರೆ ಮರುದಿನ ಬೆಳಗ್ಗೆ ಅಖಿಲಾ ಬೆಡ್‌ರೂಂನಿಂದ ಎಷ್ಟು ಹೊತ್ತಾದರೂ ಹೊರಗೆ ಬಂದಿರಲಿಲ್ಲ. ಮನೆಯವರು ಬಂದು ಬಾಗಿಲು ಬಡಿದರೂ ಪ್ರಯೋಜನವಾಗಿರಲಿಲ್ಲ. ಎಷ್ಟು ಕರೆದರೂ ಅಖಿಲಾ ಎಚ್ಚರಗೊಳ್ಳದೆ ಪ್ರಜ್ಞಾಹೀನಳಾಗಿದ್ದಳಂತೆ. ಅನುಮಾನಗೊಂಡ ಕುಟುಂಬಸ್ಥರು ಕೂಡಲೇ ಆಕೆಯನ್ನು ಮಕ್ಕುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದನ್ನು ಪರಿಶೀಲಿಸಿದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಸಾಲೂರು ಏರಿಯಾದ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲಿನ ವೈದ್ಯರು ಎಲ್ಲಾ ರೀತಿಯ ವೈದ್ಯಕೀಯ ಪರೀಕ್ಷೆ ನಡೆಸಿ ಹೆಚ್ಚಿನ ಚಿಕಿತ್ಸೆಗೆ ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಅಖಿಲಾ ಸಾವನ್ನಪ್ಪಿದ್ದಾರೆ.  

ಅಖಿಲಾ ಸಾವಿನ ಸುದ್ದಿ ತಿಳಿದ ಪೊಲೀಸರು ಘಟನೆಯ ಬಗ್ಗೆ ಕುಟುಂಬಸ್ಥರನ್ನು ವಿಚಾರಿಸಿದ್ದಾರೆ. ಅಖಿಲಾ ಬೆಡ್‌ರೂಂನಲ್ಲಿ ಮಲಗಿದ್ದು, ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಬಳಿಕ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ಉನ್ನತ ತನಿಖೆ ಕೈಗೊಂಡಿದ್ದಾರೆ. 

ಇದನ್ನೂ ಓದಿ: ಬರ್ತಡೆಗೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಕೇಕ್ ತಿಂದು ಜನ್ಮದಿನದಂದೇ ಬಾಲಕಿ ಸಾವು

ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ಅಖಿಲಾಳ ಸಾವಿನ ಬಗ್ಗೆ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಖಿಲಾ ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದು, ಕುಟುಂಬಸ್ಥರಿಗೆ ಆಘಾತವಾಗಿದೆ. ಆಕೆಯ ಸಾವು ನಿಗೂಢವಾಗಿದ್ದು, ತನಿಖೆಯ ನಂತರವಷ್ಟೇ ಸತ್ಯ ಹೊರಬೀಳಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News