ರಾಜಧಾನಿಯಲ್ಲಿ ವೈದ್ಯಕೀಯ ಲೋಕದ ಅಚ್ಚರಿ...! ವ್ಯಕ್ತಿಯೊಬ್ಬರಿಗೆ ಆರ್ಟಿಫಿಶಿಯಲ್ ಹಾರ್ಟ್ ಅಳವಡಿಕೆ..!

ಇತ್ತೀಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಮೋಸ್ಟ್ ಕಾಮನ್ ಅಂತಾಗಿ ಬಿಟ್ಟಿದೆ‌. ವಯಸ್ಸು ೩೦ ದಾಟ್ಟಿರಲ್ಲ ಅದಾಗಲೇ ಹಾರ್ಟ್ ನೊಳಗೆ ಸ್ಟಂಟ್ ಕೂತ್ತಿರುತ್ತೆ.‌.ಕಳೆದ ೧೦ ವರ್ಷಗಳ ಪೈಕಿ ಹೃದಯಾಘಾತದ ಪ್ರಕರಣಗಳು ಸರಾಸರಿ 23% ಹೆಚ್ಚಳ ಕಂಡಿರುವ ಮಧ್ಯೆ ರಾಜಧಾನಿಯಲ್ಲಿ ಮೊಟ್ಟ ಮೊದಲ ಬಾರಿಗೆ ರೋಗಿಯೊಬ್ಬರಿಗೆ ಆರ್ಟಿಫಿಶಿಯಲ್ ಹಾರ್ಟ್ ಹಾಕಲಾಗಿದೆ‌. ಈ‌ ಕುರಿತ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ.

Written by - Bhavya Sunil Bangera | Edited by - Manjunath N | Last Updated : Mar 30, 2024, 07:14 PM IST
  • ವೈದ್ಯಕೀಯ ಲೋಕದಲ್ಲಿ ಸಾಕಷ್ಟು ಅಚ್ಚರಿಯ ಬೆಳವಣಿಗೆಗಳು ನಡೆದ್ರೂ, ಅಂಗಾಂಗ ದಾನಕ್ಕೆ ಮಾತ್ರ ಜನ ಮುಂದಾಗುತ್ತಿಲ್ಲ.
  • ಹಾರ್ಟ್ transplantion ಗೆ ೨ ವರ್ಷಗಳ ವೈಟಿಂಗ್ ಪಿರಿಯಡ್ ಇದ್ದು, ಇದಕ್ಕಾಗಿ 3rd ಜನರೇಶನ್ ಹಾರ್ಟ್ ಪರಿಚಯಿಸಲಾಗಿದೆ.
  • ಬಾಗಲಕೋಟೆ ಜಿಲ್ಲೆ ಹುನಗುಂದ ಮೂಲದ ವ್ಯಕ್ತಿಗೆ ಆರ್ಟಿಫಿಶಿಯಲ್ ಹಾರ್ಟ್ ಅಳವಡಿಕೆ‌ ಮಾಡಲಾಗಿದೆ
ರಾಜಧಾನಿಯಲ್ಲಿ ವೈದ್ಯಕೀಯ ಲೋಕದ ಅಚ್ಚರಿ...! ವ್ಯಕ್ತಿಯೊಬ್ಬರಿಗೆ ಆರ್ಟಿಫಿಶಿಯಲ್ ಹಾರ್ಟ್ ಅಳವಡಿಕೆ..! title=

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಮೋಸ್ಟ್ ಕಾಮನ್ ಅಂತಾಗಿ ಬಿಟ್ಟಿದೆ‌. ವಯಸ್ಸು ೩೦ ದಾಟ್ಟಿರಲ್ಲ ಅದಾಗಲೇ ಹಾರ್ಟ್ ನೊಳಗೆ ಸ್ಟಂಟ್ ಕೂತ್ತಿರುತ್ತೆ.‌.ಕಳೆದ ೧೦ ವರ್ಷಗಳ ಪೈಕಿ ಹೃದಯಾಘಾತದ ಪ್ರಕರಣಗಳು ಸರಾಸರಿ 23% ಹೆಚ್ಚಳ ಕಂಡಿರುವ ಮಧ್ಯೆ ರಾಜಧಾನಿಯಲ್ಲಿ ಮೊಟ್ಟ ಮೊದಲ ಬಾರಿಗೆ ರೋಗಿಯೊಬ್ಬರಿಗೆ ಆರ್ಟಿಫಿಶಿಯಲ್ ಹಾರ್ಟ್ ಹಾಕಲಾಗಿದೆ‌. ಈ‌ ಕುರಿತ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ.

ಕೋವಿಡ್ ನಂತ್ರದಲ್ಲಿ ಹಾರ್ಟ್ ಅಟ್ಯಾಕ್ ಕೇಸ್ ಹೆಚ್ಚಾಗಿದೆ. ಒತ್ತಡ, ಜೀವನಶೈಲಿ ಬದಲಾವಣೆ, ವಾಯುಮಾಲಿನ್ಯದಿಂದ 22 ಲಕ್ಷಕ್ಕೂ ಅಧಿಕ ಮಂದಿ ಹೃದಯದಿಂದ ಕೊನೆಯುಸಿರೆಳೆಯುತ್ತಿದ್ದಾರೆ..ಇಂತಹ ಆಘಾತಕಾರಿ ವಿಚಾರದ ಮಧ್ಯೆ ವೈದ್ಯಕೀಯ ಲೋಕದಲ್ಲಿ ಅಚ್ಚರಿಯೊಂದು ನಡೆದಿದೆ. ರಾಜ್ಯ ರಾಜಧಾನಿಯಲ್ಲಿ ಮೊಟ್ಟ ಮೊದಲ ಬಾರಿಗೆ ವ್ಯಕ್ತಿಯೊಬ್ಬರಿಗೆ ಆರ್ಟಿಫಿಶಿಯಲ್ ಹಾರ್ಟ್ ಅಳವಡಿಸಲಾಗಿದೆ. ‌ಥರ್ಡ್ ಜನರೇಶನ್  ಎಲ್ ಬಿ ಯಶಸ್ವಿ ಕೃತಕ ಹೃದಯ ಕಸಿ ನಡೆಸಲಾಗಿದೆ.

ಬ್ಯಾಟರಿ‌ ಮೂಲಕ ಹಾರ್ಟ್ ರಿಚಾರ್ಜ್..!

ವೈದ್ಯಕೀಯ ಲೋಕದಲ್ಲಿ ಸಾಕಷ್ಟು ಅಚ್ಚರಿಯ ಬೆಳವಣಿಗೆಗಳು ನಡೆದ್ರೂ, ಅಂಗಾಂಗ ದಾನಕ್ಕೆ ಮಾತ್ರ ಜನ ಮುಂದಾಗುತ್ತಿಲ್ಲ. ಹಾರ್ಟ್ transplantion ಗೆ ೨ ವರ್ಷಗಳ ವೈಟಿಂಗ್ ಪಿರಿಯಡ್ ಇದ್ದು, ಇದಕ್ಕಾಗಿ 3rd ಜನರೇಶನ್ ಹಾರ್ಟ್ ಪರಿಚಯಿಸಲಾಗಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ಮೂಲದ ವ್ಯಕ್ತಿಗೆ ಆರ್ಟಿಫಿಶಿಯಲ್ ಹಾರ್ಟ್ ಅಳವಡಿಕೆ‌ ಮಾಡಲಾಗಿದೆ..ವ್ಯಕ್ತಿಗೆ ಹೃದಯ ದುರ್ಬಲವಾಗಿರುವ ಕಾರಣ 3 rd ಜನರೇಶನ್ ಎಲ್ ಬಿ ಯಶಸ್ವಿ ಕೃತಕ ಹೃದಯ ಕಸಿ ಮಾಡಲಾಗಿದೆ. ಕೃತಕ ಮೆಷಿನ್ ಮೂಲಕ ಹೃದಯಕ್ಕೆ ಬ್ಲೆಡ್ ಪಂಪ್ ಮಾಡುತ್ತದೆ. ಬ್ಯಾಗ್ ನಲ್ಲಿರುವ ಬ್ಯಾಟರಿಗಳು , ಎಲೆಕ್ಟ್ರಿಕ್ ಮೋಟರ್ ಮತ್ತು ಟ್ಯೂಬ್ ಗಳು ಗಾಳಿಯನ್ನು ಪಂಪ್ ಮಾಡುತ್ತದೆ. ಇದು ಕೃತಕ ಹೃದಯ ಕೋಣೆಗಳಿಗೆ ಶಕ್ತಿ ನೀಡುತ್ತದೆ.‌ ಇದರಿಂದ ರೋಗಿ ಜೀವನ ಪೂರ್ತಿ ಬದುಕು ಸಾಗಿಸಲು ಸಾಧ್ಯವಾಗುತ್ತದೆ..ಖ್ಯಾತ ಹೃದಯ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ.ಅಶ್ವಿನಿ ಪಸರದ್ ಮತ್ತು ತಂಡ ಈ ಅಚ್ಚರಿಯ ಶಸ್ತ್ರಚಿಕಿತ್ಸೆ ನಡೆಸಿ ಸಾಧನೆ ಮಾಡಿದ್ದಾರೆ...

ಎಲ್ಲರ ಹೃದಯ ಲಬ್ ಡಬ್ ಅಂತ ಸೌಂಡ್ ಮಾಡಿದ್ರೆ, ಈ ಆರ್ಟಿಫಿಶಿಯಲ್ ಹೃದಯ ಮೆಶಿನ್ ಸೌಂಡ್ ಮಾಡುತ್ತದೆ. ಆರ್ಟಿಫಿಶಿಯಲ್ ಹಾರ್ಟ್ ಪ್ರತಿ ದಿನ ಚಾರ್ಜಿಂಗ್ ಮಾಡಬೇಕಿರುತ್ತೆ. ತುಂಬಾ ರೇರ್ ಸರ್ಜರಿ ಆಗಿರುವ ಕಾರಣ ಈ ಆರ್ಟಿಫಿಶಿಯಲ್ ಹೃದಯಕ್ಕೆ 1 ಕೋಟಿ 10 ಲಕ್ಷ ಖರ್ಚಾಗಿದೆ..ಅದೇನೇ ಹೇಳಿ ಸದ್ಯ 3rd ಜನರೇಶನ್ ಹಾರ್ಟ್ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News